Elon Musk: ಟ್ವಿಟರ್ ಸಿಇಓ ಸ್ಥಾನಕ್ಕೆ ಎಲಾನ್ ಮಸ್ಕ್ ರಾಜಿನಾಮೆ!! ಮುಂದಿನ ಸಿಇಓ ಯಾರು ಗೊತ್ತಾ?

Elon musk decided to step down as a Twitter CEO

Elon Musk: ವಿಶ್ವದ ನಂ. 2 ಶ್ರೀಮಂತ, ಟ್ವಿಟ್ಟರ್‌(Twitter) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಲಾನ್‌ ಮಸ್ಕ್‌( Elon Musk), ತಮ್ಮ ಸಿಇಓ(CEO) ಸ್ಥಾನದಿಂದ ಕೆಳಗಿಳಿಯುತ್ತಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಹೌದು, ಎಲಾನ್ ಮಸ್ಕ್ ಅವರು ತಾನು ಟ್ವಿಟರ್‌ ಸಿಇಒ ಸ್ಥಾನದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದು, ಟ್ವಿಟರ್‌ಗೆ ಹೊಸ ಸಿಇಒ(CEO) ನೇಮಕ ಮಾಡಿಕೊಂಡಿರುವುದಾಗಿಯೂ ಟ್ವೀಟ್‌ ಮಾಡಿದ್ದಾರೆ. ಇನ್ನು ಕೆಲವು ವಾರಗಳಷ್ಟೇ ಮಸ್ಕ್‌ ಟಿಟ್ವರ್‌ ಸಿಇಒ ಆಗಿ ಮುಂದುವರಿಯಲಿದ್ದಾರಂತೆ!

ಈ ಬಗ್ಗೆ ಟ್ವೀಟ್‌ ಮಾಡಿರೋ ಎಲಾನ್ ಮಸ್ಕ್‌ ಅವರು ‘ನಾನು ಟ್ವಿಟರ್‌ಗೆ ಹೊಸ ಸಿಇಒ ಅನ್ನು ನೇಮಕ ಮಾಡಿದ್ದೇನೆ ಎಂದು ತಿಳಿಸಲು ಉತ್ಸುಕನಾಗಿದ್ದೇನೆ. ಅವರು ಇನ್ನು 6 ವಾರಗಳಲ್ಲಿ ಟ್ವಿಟರ್‌ ಸಿಇಒ ಸ್ಥಾನವನ್ನು ಅಲಂಕರಿಸಲಿದ್ದಾರೆʼ ಎಂದು ಬರೆದುಕೊಂಡಿದ್ದಾರೆ. ಆದರೆ ಯಾರು, ಏನು ಎಂಬುದನ್ನು ಅವರು ತಿಳಿಸಿಲ್ಲ. ಆದರೆ ಆರು ವಾರಗಳಲ್ಲಿ ಹೊಸ ಸಿಇಒ ಬರುತ್ತಾರೆ ಎಂಬ ಅಂಶ ಮಾತ್ರ ಟ್ವಿಟರ್‌ನಲ್ಲಿದೆ.

ಅಂದಹಾಗೆ ಸಿಇಓ ಸ್ಥಾನದಿಂದ ಕೆಳಗಿಳಿದ ಬಳಿಕ ಮಸ್ಕ್‌ ಅವರು ಕಾರ್ಯನಿರ್ವಾಹಕ ಅಧ್ಯಕ್ಷ್ಯ ಹಾಗೂ ಸಿಟಿಒ(CTO) (ಚೀಫ್‌ ಟೆಕ್ನಾಲಜಿ ಆಫೀಸರ್‌) ಆಗಿ ಮುಂದುವರಿಯಲಿದ್ದಾರೆ. ಇದರೊಂದಿಗೆ ಭವಿಷ್ಯದಲ್ಲಿ ಸ್ಟಾಫ್‌ವೇರ್‌ ಹಾಗೂ ಸಿಸೊಪ್‌ಗಳ ಮೇಲ್ವಿಚಾರಣೆ ಮಾಡುವುದಾಗಿ ಮಸ್ಕ್‌ ಘೋಷಿಸಿದ್ದಾರೆ.

ಇಷ್ಟೇ ಅಲ್ಲದೆ, ಎಲಾನ್ ಅವರು ಟ್ವಿಟರ್‌ನಲ್ಲಿ ಹೊಸ ಅಪ್‌ಡೇಟ್‌(Update)ವೊಂದನ್ನು ಘೋಷಿಸಿದ್ದು, ಅದು ವೆರಿಫೈಡ್‌ ಬಳಕೆದಾರರ ಮೆಸೆಜಿಂಗ್‌ ಸರ್ವೀಸ್‌(Massageing Service) ಗೆ ಸಂಬಂಧಿಸಿದ್ದಾಗಿದೆ. ಈ ಕುರಿತು ನಿನ್ನೆ (ಮೇ 11) ಟ್ವೀಟ್‌ ಮಾಡಿರೋ ಅವರು ಈ ಹಿಂದೆ ಬಳಕೆದಾರರು “ಯಾವುದೇ ಸಂದೇಶಕ್ಕೆ ಇಮೋಜಿ(Emoji) ಗಳೊಂದಿಗೆ ಉತ್ತರ ನೀಡಬಹುದು, ಇದರೊಂದಿಗೆ ಉತ್ತಮ ಸಂವಹನಕ್ಕಾಗಿ ಮುಂಬರುವ ದಿನಗಳಲ್ಲಿ ಟ್ವಿಟರ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಾಯ್ಸ್‌ ಮತ್ತು ವಿಡಿಯೊ ಚಾಟ್‌ ಸೌಲಭ್ಯವನ್ನು ಪರಿಚಯಿಸಲಿದೆ. ಅಲ್ಲದೆ ಕೆಲವು ವರ್ಷಗಳಿಂದ ಸಕ್ರಿಯವಾಗಿಲ್ಲದ ಖಾತೆಗಳನ್ನು ತೆಗೆದುಹಾಕುವುದಾಗಿಯೂ” ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Maharastra: ಮಗಳ ಮದ್ವೆಯಲ್ಲಿ 10 ಸಾವಿರ ಜನರನ್ನು ಸೇರಿ, 5 ಸಾವಿರ ದನಕರಗಳಿಗೂ ಊಟ ಹಾಕಿಸಿದ ರೈತ!

Leave A Reply

Your email address will not be published.