Home Karnataka State Politics Updates Shobha karandlaje: ಈ ಸಲ ನಮ್ಮ ಸಾಮಾನ್ಯ ಕಾರ್ಯಕರ್ತರೊಬ್ಬರು ಮುಖ್ಯಮಂತ್ರಿ ಆಗ್ತಾರೆ- ಶೋಭಾ ಕರಂದ್ಲಾಜೆ! ಯಾರು...

Shobha karandlaje: ಈ ಸಲ ನಮ್ಮ ಸಾಮಾನ್ಯ ಕಾರ್ಯಕರ್ತರೊಬ್ಬರು ಮುಖ್ಯಮಂತ್ರಿ ಆಗ್ತಾರೆ- ಶೋಭಾ ಕರಂದ್ಲಾಜೆ! ಯಾರು ಗೊತ್ತಾ ಆ ಕಾರ್ಯಕರ್ತ?

Shobha karandlaje
Image source- The Hindu

Hindu neighbor gifts plot of land

Hindu neighbour gifts land to Muslim journalist

Shobha karandlaje: ನಿನ್ನೆ ತಾನೆ ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly Election) ಮುಕ್ತಾಯವಾಗಿದ್ದು ರಾಜಕೀಯ ನಾಯಕರುಗಳೆಲ್ಲ ರೆಸ್ಟ್ ಮೂಡಲ್ಲಿ(Rest Mood) ಇದ್ದಾರೆ. ನಿರಂತರವಾದ ಸುತ್ತಾಟ, ಅಬ್ಬರದ ಪ್ರಚಾರ, ಗಲಾಟೆ, ಜದ್ದಲ, ಜಂಜಾಟಗಳಿಂದ ರೋಸಿ ಹೋಗಿದ್ದ ಎಲ್ಲರೂ ಇದೀಗ ವಿಶ್ರಾಂತಿಯತ್ತ ಮುಖಮಾಡಿದ್ದಾರೆ. ಆದರೆ ಈ ನಡುವೆ ಕೊಂಚಮಟ್ಟಿಗೆ ತಣ್ಣಗಾಗಿದ್ದ ಮುಖ್ಯಮಂತ್ರಿ(CM) ಕೂಗು ಮತ್ತೆ ಕೇಳಲಾರಂಭಿಸಿದೆ.

ಹೌದು, ಕೇಂದ್ರ ಸಚಿವೆ(Central minister) ಹಾಗೂ ಬಿಜೆಪಿ ನಾಯಕಿ(BJP Leadr) ಆಗಿರುವಂತಹ ಶೋಭಾ ಕರಂದ್ಲಾಜೆ(Shobha Karandlaje) ಅವರು ಮುಖ್ಯಮಂತ್ರಿ ವಿಚಾರವಾಗಿ ಧ್ವನಿ ಎತ್ತಿದ್ದು, ಈ ಬಾರಿ ನಮ್ಮ ಕಾರ್ಯಕರ್ತ ಒಬ್ಬರು ಮುಖ್ಯಮಂತ್ರಿ ಆಗುತ್ತಾರೆ ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹೇಳಿದ್ದಾರೆ.

ಅಲ್ಲದೆ ತಾವು ಮುಖ್ಯಮಂತ್ರಿಯಾಗುವ ವಿಚಾರವಾಗಿ ಮಾತನಾಡಿದ ಅವರು ‘ ಸಿಎಂ ಸ್ಥಾನದ ವಿಚಾರ ಬಂದಾಗ ನಾನು ರಾಜ್ಯಕ್ಕೆ ಬರುವ ಪ್ರಶ್ನೆ ಇಲ್ಲ. ನನಗೆ ಮೋದಿ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ಅಲ್ಲೇ ಖುಷಿಯಾಗಿ ಇದ್ದೇನೆ. ಮತಗಟ್ಟೆ ಸಮೀಕ್ಷೆ ಸುಳ್ಳಾಗುತ್ತದೆ. ನಾವು ಬಹುಮತದ ಸರ್ಕಾರ ಮಾಡುವ ವಿಶ್ವಾಸ ಇದ್ದು, ಬೂತ್ ಮಟ್ಟದ ಕಾರ್ಯಕರ್ತರ ವರದಿ ಪ್ರಕಾರ 120 ಕ್ಕೂ ಹೆಚ್ಚು ಸೀಟುಗಳಲ್ಲಿ ಮುಂದೆ ಇದ್ದೇವೆ. ಪ್ರಧಾನಿ ಮೋದಿ(PM Modi) ರೋಡ್ ಶೋ(Road Show) ಮತದಾರರ ಮೇಲೆ ಪರಿಣಾಮ ಆಗಿದೆ ಎಂದಿದ್ದಾರೆ.

ಬಳಿಕ ಮಾತನಾಡಿದ ಅವರು ಈ ಬಾರಿ ಯಾವುದೇ ರೀತಿಯ ಆಪರೇಷನ್ ಕಮಲ‌(Operation Kamala) ಮಾಡುವ ಪರಿಸ್ಥಿತಿ ನಮಗೆ ಬರಲ್ಲ. ಬಹುಮತದ ಸರ್ಕಾರ ಬರುತ್ತದೆ. ಕಳೆದ ಬಾರಿ ನಮಗೆ 104 ಸೀಟು ಬಂದಿತ್ತು. ಆಗ ನಾಯಿ ನರಿಗಳಂತೆ ಕಿತ್ತಾಡುತ್ತಿದ್ದವರು ಒಟ್ಟಾದರು. ಆದರೆ ಈ ಸಲ ನಮ್ಮ ವರದಿ ಪ್ರಕಾರ ಬಿಜೆಪಿ(BJP)ಗೆ 120-125 ಸ್ಥಾನ ಬರುತ್ತದೆ. ಸ್ವಂತ ಬಲದಲ್ಲಿ ನಾವೇ ಸರ್ಕಾರ ರಚನೆ ಮಾಡ್ತೇವೆ. ಜನ ಎಕ್ಸಿಟ್ ಪೋಲ್​​ ಸುಳ್ಳು ಮಾಡ್ತಾರೆಂದು ಮೊದಲೇ ಹೇಳಿದ್ದೆ. ಈಗಲೂ ನನಗೆ ಅದೇ ವಿಶ್ವಾಸವಿದೆ. ಬಿ.ಎಸ್​.ಯಡಿಯೂರಪ್ಪನ(B S Yadiyurappa)ವರ ವರದಿ ಯಾವತ್ತೂ ಸುಳ್ಳಾಗಿಲ್ಲ ಎಂದರು.

ಇನ್ನು ವರುಣಾ(Varuna) ಕ್ಷೇತ್ರದ ಬಗ್ಗೆ ಮಾತನಾಡಿ ‘ವರುಣಾದಲ್ಲಿ ಸಿದ್ದರಾಮಯ್ಯ(Siddaramahiah) ಸೋಲುತ್ತಾರೋ ಗೊತ್ತಿಲ್ಲ, ವರುಣಾದ ಜನತೆ ಹೇಳಬೇಕು. ಸೋಮಣ್ಣ(V Somanna) ತುಂಬಾ ಚೆನ್ನಾಗಿ ಕೆಲಸ ಮಾಡಿದ್ದು, ಸಿದ್ದರಾಮಯ್ಯನವರನ್ನ ಕಟ್ಟಿ ಹಾಕುವ ಕೆಲಸ ಮಾಡಿದ್ದಾರೆ. ಬೆಂಗಳೂರು ಮೋದಿ ರೋಡ್ ಶೋ ಪರಿಣಾಮ ಆಗಿದೆ, ಅದಕ್ಕಾಗಿ ನಾವು ಇಷ್ಟು ನಿರೀಕ್ಷೆ ಮಾಡಿದ್ದೇವೆ. ಕಳೆದ ಬಾರಿ ಕೂಡ ಅವರು ಹೊಸ ಕೋಟು ಹೊಲಿಸಿಕೊಂಡಿದ್ದರು. ಆದರೆ ಹಿಂಬಾಗಿಲಿನಿಂದ ಕುಮಾರಸ್ವಾಮಿ ಸಿಎಂ ಆದರು ಎಂದು ವ್ಯಂಗ್ಯವಾಡಿದ್ದಾರೆ.

 

ಇದನ್ನು ಓದಿ: KS Eshwarappa: ಬಿಜೆಪಿ ಬಹುಮತ ಬರುವ ವಿಶ್ವಾಸ ಇದೆ. ಸಮೀಕ್ಷೆ ಮೇಲೆ ನಂಬಿಕೆ ಇಲ್ಲ – ಕೆ.ಎಸ್.ಈಶ್ವರಪ್ಪ