Home Karnataka State Politics Updates Moodabidre: ಚೂರಿಯಿಂದ ತಿವಿದು ಯುವಕನ ಕೊಲೆ

Moodabidre: ಚೂರಿಯಿಂದ ತಿವಿದು ಯುವಕನ ಕೊಲೆ

Moodabidre

Hindu neighbor gifts plot of land

Hindu neighbour gifts land to Muslim journalist

Moodabidre : ಚೂರಿಯಿಂದ ತಿವಿದು ಯುವಕನೊಬ್ಬನನ್ನು ಕೊಲೆ‌ ಮಾಡಿರುವ ಘಟನೆ ಮೂಡುಬಿದಿರೆ (Moodabidre) ಪುರಸಭೆ ವ್ಯಾಪ್ತಿಯ ಗಂಟಾಲ್ಕಟ್ಟೆ ಎಂಬಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಮೃತರನ್ನು ಜಮಾಲ್ ಎಂದು ಗುರುತಿಸಲಾಗಿದೆ.ಮೃತ ಜಮಾಲ್ ನ ತಂಗಿಯ ಗಂಡ, ಚಿಕ್ಕಮಗಳೂರು ಮೂಲದ ಸುಹೈಬ್ ಕೊಲೆ ಮಾಡಿದಾತ ಎಂದು ಹೇಳಲಾಗಿದೆ.

ಜಮಾಲ್ ಮತ್ತು ಸುಹೈಬ್ ಮನೆ ಅಕ್ಕಪಕ್ಕದಲ್ಲಿದ್ದು ಸಣ್ಣ ಮಕ್ಕಳ ವಿಚಾರವಾಗಿ ಬೆಳಗ್ಗೆ ಜಮಾಲ್ ಮತ್ತು ಸುಹೈಬ್ ನಡುವೆ ಮಾತಿಕ ಚಕಮಕಿ ನಡೆದು ಜಮಾಲ್ ಹೊಟ್ಟೆಗೆ ಸುಹೈಬ್ ಚಾಕುವಿನಿಂದ ಇರಿದಿದ್ದಾನೆ  ಘಟನೆಯಲ್ಲಿ ಗಂಭೀರ ಗಾಯಗೊಂಡ ಸುಹೈಬ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಮೂಡುಬಿದಿರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಾರು ಟಿಟಿ ವಾಹನ ಡಿಕ್ಕಿ: ಮೂರು ವರ್ಷದ ಮಗು ಸೇರಿದಂತೆ ಓರ್ವ ಸಾವು!