No-Car Policy: ಪ್ರಪಂಚದ ಈ ಸ್ಥಳಗಳಲ್ಲಿ ಕಾರುಗಳಿಗೆ ಪ್ರವೇಶವಿಲ್ಲ ; ಯಾಕೆ?!

No car policy Which city of world there are no cars

No-Car Policy: ಪ್ರಪಂಚದಲ್ಲಿ ಹಿಂದಿನ ಯುಗಕ್ಕೆ ಹೋಲಿಸಿದರೆ ಇಂದು ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲೂ ಹಿಂದೆ ಎತ್ತಿನ ಗಾಡಿ, ಕುದುರೆಗಾಡಿ ಇದ್ದರೆ ಇಂದು ಕಾರು (Car), ಬೈಕ್, ವಿಮಾನ, ಟ್ರೈನ್ ಎಲ್ಲವೂ ಲಗ್ಗೆ ಇಟ್ಟಿವೆ. ಆದರೂ ಕೆಲವೊಂದು ಪ್ರದೇಶದಲ್ಲಿ ಇಂದಿಗೂ ಕಾರುಗಳಿಗೆ ನಿಷೇಧವಿದೆ (No-Car Policy). ಎಲ್ಲಿ? ಯಾಕೆ? ಸಂಪೂರ್ಣ ಮಾಹಿತಿ ಇಲ್ಲಿದೆ.

ಡುಬ್ರೊವ್ನಿಕ್, ಕ್ರೊಯೇಷಿಯಾ – ದಕ್ಷಿಣ ಆಡ್ರಿಯಾಟಿಕ್ ಸಮುದ್ರ ತೀರದಲ್ಲಿ ನೆಲೆಗೊಂಡಿರುವ ಇದನ್ನು ಸಾಮಾನ್ಯವಾಗಿ ಡಾಲ್ಮೇಷಿಯನ್ ಕರಾವಳಿಯ ಅತ್ಯಂತ ಸುಂದರವಾದ ನಗರವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು “ಪರ್ಲ್ ಆಫ್ ದಿ ಆಡ್ರಿಯಾಟಿಕ್” ಎಂದು ಕರೆಯಲಾಗುತ್ತದೆ. ಈ UNESCO ವಿಶ್ವ ಪರಂಪರೆಯ ತಾಣವು ಅದರ ಐತಿಹಾಸಿಕ ವಾಸ್ತುಶಿಲ್ಪ ಮತ್ತು ನಡೆಯುವುದಕ್ಕೆ ಪ್ರಸಿದ್ದವಾಗಿರುವ ಬೀದಿಗಳನ್ನು ಸಂರಕ್ಷಿಸಲು ಸೀಮಿತ ಕಾರುಗಳಿಗೆ ಪ್ರವೇಶವಿದೆ. ಶಟಲ್ ಬಸ್‌ಗಳು ಮತ್ತು ಟ್ಯಾಕ್ಸಿಗಳು ಸಾರಿಗೆಗಾಗಿ ಬಳಸುತ್ತಾರೆ.

ಮ್ಯಾಕಿನಾಕ್ ದ್ವೀಪ, ಮಿಚಿಗನ್, USA – ಈ ದ್ವೀಪವು ಹ್ಯುರಾನ್ ಸರೋವರದಲ್ಲಿದೆ. ದ್ವೀಪವು 8 ಮೈಲುಗಳು (13 ಕಿಮೀ) ಸುತ್ತಳತೆ ಮತ್ತು ದಟ್ಟವಾದ ಅರಣ್ಯವನ್ನು ಹೊಂದಿದೆ. ಇಲ್ಲಿ 1898 ರಿಂದ ಕಾರುಗಳನ್ನು ನಿಷೇಧಿಸಲಾಗಿದೆ. ಜನರು ಕುದುರೆ ಗಾಡಿಗಳು, ಬಗ್ಗಿಗಳು ಮತ್ತು ಬೈಸಿಕಲ್‌ಗಳನ್ನು ಸಾರಿಗೆಗಾಗಿ ಬಳಸುತ್ತಾರೆ.

ಹೈಡ್ರಾ, ಗ್ರೀಸ್ – ಇಲ್ಲಿಯೂ ಕಾರುಗಳು ನಿಷೇಧವಿದೆ. 1960 ರ ದಶಕದಿಂದ ಈ ದ್ವೀಪವು ಕಾರು ನಿಷೇಧಿಸಿದೆ. ಬದಲಾಗಿ ಕತ್ತೆಗಳು ನೀರಿನ ಟಾಕ್ಸಿಯನ್ನು ಸಾರಿಗೆ ಗಾಡಿ ಬಳಸುತ್ತಾರೆ.

ವೌಬನ್, ಜರ್ಮನಿ – ಇಲ್ಲಿನ ಜನರು ಪರಿಸರ ಸ್ನೇಹಿ ರೀತಿಯಲ್ಲಿ ಬದುಕಲು ಹೆಚ್ಚಿನ ಒತ್ತು ನೀಡುತ್ತಾರೆ. ಈ ನಗರದ ಹೆಚ್ಚಿನ ಭಾಗವು ಕಾರು ಮುಕ್ತವಾಗಿದೆ. ಇಲ್ಲಿ ಅನೇಕ ಜನರು ಸ್ವಂತ ಕಾರನ್ನು ಹೊಂದಿಲ್ಲ ಮತ್ತು ಸಾರ್ವಜನಿಕ ಸಾರಿಗೆ ಮತ್ತು ಸೈಕ್ಲಿಂಗ್ ಅನ್ನು ಬಳಸಲು ನಿರ್ಧರಿಸಿದ್ದಾರೆ.

ವೆನಿಸ್, ಇಟಲಿ -ಇಲ್ಲಿ 1966 ರಿಂದ ಕಾರುಗಳಿಗೆ ನಿಷೇಧವಿದೆ. ಈ ಪ್ರಸಿದ್ಧ ಕಾಲುವೆ ನಗರವು ಅದರ ಕಿರಿದಾದ ಬೀದಿಗಳು ಮತ್ತು ಕಾಲುವೆಗಳ ಕಾರಣದಿಂದಾಗಿ ಕಾರುಗಳನ್ನು ನಿಷೇಧಿಸಿದೆ. ಇಲ್ಲಿ
ನೀರಿನ ಟ್ಯಾಕ್ಸಿಗಳು, ಗೊಂಡೊಲಾಗಳು ಮತ್ತು ನಡೆಯುವ ಮೂಲಕ ಜನರು ಸಂಚರಿಸುತ್ತಾರೆ.

ಲಿಜಿಯಾಂಗ್, ಚೀನಾ – ಈ ನಗರವು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಅದರ ಪ್ರಾಚೀನ ಪಟ್ಟಣದಲ್ಲಿ ಸೀಮಿತ ಕಾರುಗಳಿಗೆ ಪ್ರವೇಶವಿದೆ. ವಾಕಿಂಗ್, ಬೈಕಿಂಗ್ ಮತ್ತು ಎಲೆಕ್ಟ್ರಿಕ್ ವಾಹನಗಳು ಸಾರಿಗೆಗಾಗಿ ಇವೆ.

ಝೆರ್ಮಾಟ್, ಸ್ವಿಟ್ಜರ್ಲೆಂಡ್ – ಇದು ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ. ಇದು ಭಾರತೀಯ ಪ್ರವಾಸಿಗರಿಗೆ ಅತ್ಯಂತ ಜನಪ್ರಿಯ ತಾಣವಾಗಿದೆ. ಈ ಪ್ರಸಿದ್ಧ ಸ್ಕೀ ರೆಸಾರ್ಟ್ 1960 ರ ದಶಕದಿಂದಲೂ ಕಾರುಗಳನ್ನು ನಿಷೇಧಿಸಿದೆ. ಜನರು ಎಲೆಕ್ಟ್ರಿಕ್ ವಾಹನಗಳು ಮತ್ತು ಕುದುರೆ ಗಾಡಿಗಳನ್ನು ಬಳಸುತ್ತಾರೆ.

ಲಂಕಾವಿ ದ್ವೀಪ (Langkawi Island), ಮಲೇಷ್ಯಾ – ವಿಶ್ವದ ಪ್ರವಾಸಿಗರ ಗಮನ ಸೆಳೆದಿರುವ ಲಂಕಾವಿಯು 99 ದ್ವೀಪಗಳ ಸಮೂಹವನ್ನು ಹೊಂದಿದೆ. ಇಲ್ಲಿನ ನಿರ್ಮಲವಾದ ಕಡಲತೀರಗಳ ನೀರು ಸ್ಪಟಿಕ ಸ್ಪಷ್ಟವಾಗಿದ್ದು, ಹೃದಯವನ್ನು ಸ್ಪರ್ಶಿಸುತ್ತದೆ. ಈ ದ್ವೀಪವು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸುಸ್ಥಿರ ಸಾರಿಗೆಯನ್ನು ಉತ್ತೇಜಿಸಲು ಪ್ರತಿ ತಿಂಗಳು ಕಾರ್-ಮುಕ್ತ ದಿನವನ್ನು ಜಾರಿಗೆ ತಂದಿದೆ.

ಸಾರ್ಕ್, ಚಾನೆಲ್ ದ್ವೀಪಗಳು – ಇದು ಇಂಗ್ಲೆಂಡ್‌ನ ಕರಾವಳಿಯ ದಕ್ಷಿಣಕ್ಕೆ ಇಂಗ್ಲಿಷ್ ಚಾನೆಲ್‌ನಲ್ಲಿದೆ. ಈ ದ್ವೀಪವು ಮೂರು ಸಣ್ಣ ಬಂದರುಗಳನ್ನು ಹೊಂದಿದೆ. ಈ ಸಣ್ಣ ದ್ವೀಪವು 1969 ರಿಂದ ಕಾರುಗಳನ್ನು ನಿಷೇಧಿಸಿದೆ. ಟ್ರಾಕ್ಟರುಗಳು ಮತ್ತು ಕುದುರೆ ಗಾಡಿಗಳು ಸಾರಿಗೆಗೆ ಸಹಕಾರಿಯಾಗಿದೆ.

ಗೀಥೋರ್ನ್, ನೆದರ್ಲ್ಯಾಂಡ್ಸ್ – ಗೀಥೂರ್ನ್ ನೆದರ್‌ಲ್ಯಾಂಡ್ಸ್‌ನ ಒವೆರಿಜ್ಸೆಲ್ ಪ್ರಾಂತ್ಯದ ಒಂದು ಹಳ್ಳಿಯಾಗಿದೆ. 2020 ರಲ್ಲಿ 2,795 ಜನಸಂಖ್ಯೆಯನ್ನು ಹೊಂದಿತ್ತು. ಈ ಸಣ್ಣ ಹಳ್ಳಿಯಲ್ಲಿ 1950 ರ ದಶಕದಿಂದಲೂ ಕಾರುಗಳನ್ನು ನಿಷೇಧಿಸಲಾಗಿದೆ. ಜನರು ದೋಣಿಗಳು ಮತ್ತು ಬೈಸಿಕಲ್ಗಳನ್ನು ಓಡಾಡಲು ಬಳಸುತ್ತಾರೆ.

ಇದನ್ನೂ ಓದಿ:UPSC Exam Calendar 2024: ಯುಪಿಎಸ್​ಇ ಪರೀಕ್ಷೆಯ ಕ್ಯಾಲೆಂಡರ್ 2024 ಬಿಡುಗಡೆ ; ಸಿಎಸ್​ಇ, ಇನ್​ಡಿಎ ಮತ್ತು ಇತರ ಪರೀಕ್ಷಾ ದಿನಾಂಕಗಳ ವಿವರ ಇಲ್ಲಿದೆ

Leave A Reply

Your email address will not be published.