Kantara Prequel: ʼಕಾಂತಾರ 2′ ಸ್ಕ್ರಿಪ್ಟ್‌ ಫಸ್ಟ್‌ ಡ್ರಾಫ್ಟ್‌ ರೆಡಿ?! ಶೂಟಿಂಗ್‌ ಶೀಘ್ರ ಆರಂಭ

Rishab Shetty Finalized First Draft of Kantara 2 movie Script

Kantara Prequel: ಕಾಂತಾರ (kantara) ಚಿತ್ರದ ಬಗ್ಗೆ ಹೇಳಬೇಕಿಲ್ಲ. ವಿಶ್ವದಾದ್ಯಂತ ಸಖತ್ ಸದ್ದು ಮಾಡಿದ ಸಿನಿಮಾ ಕಾಂತಾರದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಸದ್ಯ ‘ಕಾಂತಾರ 2’ (kantara-2) ಸಿನಿಮಾ ತೆರೆ ಮೇಲೆ ಬರಲು ಸಿದ್ಧತೆ ನಡೆಯುತ್ತಿದೆ. ಕೆಲ ತಿಂಗಳ ಹಿಂದೆ ‘ಕಾಂತಾರ’ ಪ್ರೀಕ್ವೆಲ್​ಗೆ (Kantara Prequel) ಸ್ಕ್ರಿಪ್ಟ್ ಆರಂಭಿಸಿದ್ದು, ಇದೀಗ ‘ಕಾಂತಾರ 2’ ಚಿತ್ರದ ಸ್ಕ್ರಿಪ್ಟ್​ನ ಮೊದಲ ಡ್ರಾಫ್ಟ್ ಫೈನಲ್ ಆಗಿದೆ ಎಂದು ತಿಳಿದು ಬಂದಿದೆ. ಸಿನಿಪ್ರಿಯರಿಗೆ, ‘ಕಾಂತಾರ 2’ ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಇದು ಸಿಹಿಸುದ್ದಿಯೇ ಸರಿ.

ರಿಷಬ್ ಶೆಟ್ಟಿ ಹಾಗೂ ಅವರ ತಂಡಕ್ಕೆ ಮೊದಲ ಡ್ರಾಫ್ಟ್​ ಬಗ್ಗೆ ಗೊಂದಲವಿಲ್ಲ, ತೃಪ್ತಿ ಇದೆ ಎನ್ನಲಾಗಿದೆ. ಸಿನಿಮಾದ ಶೂಟಿಂಗ್ ಗಾಗಿ ಸ್ಥಳ ಹುಡುಕುವ ಕೆಲಸ ಕೂಡಾ ಇನ್ನು ಆರಂಭವಾಗಲಿದೆ. ‘ಕಾಂತಾರ 2’ ಚಿತ್ರದ ಶೂಟಿಂಗ್ ಮಳೆಗಾಲದಲ್ಲಿ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಈಗಾಗಲೇ ಬಿಡುಗಡೆ ಆಗಿರುವ ಚಿತ್ರ ಕಾಂತಾರ-2 (kantara-2), ಕಾಂತಾರ ಪಾರ್ಟ್ 1 ಇನ್ನೇನು ಬರಬೇಕಷ್ಟೆ ಎಂದು ಸಿನಿಪ್ರಿಯರ ತಲೆಯಲ್ಲಿ ಹುಳ ಬಿಟ್ಟಿದ್ದರು. ಇದೇನಿದು ಎಲ್ಲಾ ಸಿನಿಮಾಗಳು ಪಾರ್ಟ್ 1 (Kantara part-1) ಆದ ಬಳಿಕ ಪಾರ್ಟ್ 2 ಬರೋದು. ಇದೇನು ಪೂರ್ವಕಥೆ ತೆರೆ ಮೇಲೆ ಬರುವುದು ಎಂದು ಹಲವರು ಯೋಚನಾಮಗ್ನರಾಗಿದ್ದರು. ಸದ್ಯ ಪಾರ್ಟ್ 2 ಕಥೆಯ ಫಸ್ಟ್‌ ಡ್ರಾಫ್ಟ್‌ ರೆಡಿಯಾಗಿದೆ.

ಇನ್ನು ಕೇವಲ 15 ಕೋಟಿ ರೂ. ಬಜೆಟ್​ನಲ್ಲಿ ಸಿದ್ಧಗೊಂಡಿದ್ದ ಕಾಂತಾರ-1 ಸಿನಿಮಾ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ‘ಕಾಂತಾರ’ ಎಲ್ಲೆಡೆ ಸಂಚಲನ ಮೂಡಿಸಿತ್ತು. ತುಳುನಾಡ ಮಣ್ಣಿನ ಕತೆಯನ್ನಾಧರಿಸಿ, ಕಾಡಿನ ಕತೆಯನ್ನೊಳಗೊಂಡ ಅದ್ಭುತ ಚಿತ್ರ. ಸಾಕಷ್ಟು ಜನರು ವೀಕ್ಷಿಸಿ ಮೆಚ್ಚಿಕೊಂಡಂತಹ ಸಿನಿಮಾ ಕಾಂತಾರ. ಅಲ್ಲದೆ, ದಾಖಲೆಯನ್ನೂ ಬರೆದಿದ್ದು, ಈ ಚಿತ್ರ ಜನಮನದಲ್ಲಿ ಅಚ್ಚೊತ್ತಿದೆ. ಹಾಗಿದ್ದಾಗ ಕಾಂತಾರ ಪ್ರಿಕ್ವೇಲ್‌ನಲ್ಲಿ ಕಥೆ ಏನಿರಬಹುದು? ಹೇಗಿರಬಹುದು? ಇಂತಹ ಹಲವು ಕುತೂಹಲಕಾರಿ ಪ್ರಶ್ನೆಗಳು ಸಿನಿಪ್ರೇಕ್ಷಕರಲ್ಲಿ ಮೂಡಿದೆ. ಇದಕ್ಕೆ ಸಿನಿಮಾ ರಿಲೀಸ್ ಆಗುವವರೆಗೂ ಕಾಯಬೇಕಿದೆ.

ಇದನ್ನೂ ಓದಿ:Fast and Furious : ‘ಫಾಸ್ಟ್ and ಫ್ಯೂರಿಯಸ್’ ಸಿನಿಮಾ ನೋಡೋರಿಗೆ ವೆಬ್‌ಸೈಟ್‌ ಕೊಡ್ತು ಬಿಗ್ ಆಫರ್! ಎಲ್ಲಾ ಸಿನಿಮಾವನ್ನು ವೀಕ್ಷಿಸಿದ್ರೆ ನಿಮಗೆ ಸಿಗುತ್ತೆ 1 ಸಾವಿರ ಡಾಲರ್!

Leave A Reply

Your email address will not be published.