Home Education SSLC Result: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ! ಮೌಲ್ಯಮಾಪನ, ಮರುಎಣಿಕೆ, ಸ್ಕ್ಯಾನ್ಡ್‌ ಪ್ರತಿ ಪಡೆಯೋದು ಹೇಗೆ? ಇಲ್ಲಿದೆ...

SSLC Result: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ! ಮೌಲ್ಯಮಾಪನ, ಮರುಎಣಿಕೆ, ಸ್ಕ್ಯಾನ್ಡ್‌ ಪ್ರತಿ ಪಡೆಯೋದು ಹೇಗೆ? ಇಲ್ಲಿದೆ ವಿವರ

SSLC Result
Image source: Karmasandhan

Hindu neighbor gifts plot of land

Hindu neighbour gifts land to Muslim journalist

Karnataka 10th Answer Sheet: ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಿಡುಗಡೆ ಹೊಂದಿದೆ. ಹಾಗೆನೇ ಉತ್ತರ ಪತ್ರಿಕೆಗಳ (Karnataka 10th Answer Sheet) ಸ್ಕ್ಯಾನ್ಡ್‌ ಕಾಪಿ, ಮರುಎಣಿಕೆ, ಪೂರಕ ಪರೀಕ್ಷೆಯ ಬಗ್ಗೆ ಗೊಂದಲ ಇರುವವರಿಗೆ ಇಲ್ಲಿದೆ ಉತ್ತರ.

ಪೂರಕ ಪರೀಕ್ಷೆಯ ನೋಂದಣಿ ಆರಂಭ ದಿನಾಂಕ- 08-05-2023.
ಪೂರಕ ಪರೀಕ್ಷೆಯ ನೋಂದಣಿ ಅಂತಿಮ ದಿನಾಂಕ-15-05-2023.
ಮರುಎಣಿಕೆ ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 15-05-2023.
ಮರುಎಣಿಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 21-05-2023.
ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸಲು ಆರಂಭ ದಿನಾಂಕ- 08-05-2023.
ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ- 14-05-2023.

ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ

ವಿದ್ಯಾರ್ಥಿಗಳು ಮೊದಲಿಗೆ, ಇಲಾಖೆಯ ವೆಬ್‌ಸೈಟ್‌ https://kseab.karnataka.gov.in ಗೆ ಭೇಟಿ ನೀಡಬೇಕು.
ನಂತರ ಮುಖಪುಟದಲ್ಲಿ Application for scanned copies, Revalution / Re totaling ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಬೇಕು.
ನಂತರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನೋಂದಣಿ ಸಂಖ್ಯೆ ನಮೂದಿಸಿ. ಕೂಡಲೇ ವಿದ್ಯಾರ್ಥಿಗಳ ಮಾಹಿತಿ ದೊರಕುತ್ತದೆ.
scanned copy ಪಡೆಯಲು ಇಚ್ಛಿಸಿದ ವಿಷಯಗಳನ್ನು ಒಂದೇ ಬಾರಿಗೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೊಬೈಲ್‌ ಸಂಖ್ಯೆ, ನಿಮ್ಮ ಇ-ಮೇಲ್‌ ಐಡಿ ಹಾಗೂ ಸ್ವ ವಿಳಾಸವನ್ನು ಹಾಕಿ. ಅನಂತರ Submit ಬಟನ್‌ ಒತ್ತಬೇಕು. ಕೂಡಲೇ ಚಲನ್‌ ಸಂಖ್ಯೆ Auto generate ಆಗುವುದು ಕಾಣುತ್ತದೆ.
ನಂತರ Make payment ಬಟನ್‌ ಕ್ಲಿಕ್‌ ಮಾಡಿ.
ನಂತರ Cash payment or Online payment ನಲ್ಲಿ ಒಂದನ್ನು ಒತ್ತಿ.
ನಂತರ ಅಲ್ಲಿ ನೀಡಿದ ಶುಲ್ಕವನ್ನು ಆನ್‌ಲೈನ್ ಮೂಲಕ ಪೇ ಮಾಡಬೇಕು. ನೀವು ಬೆಂಗಳೂರು ಒನ್‌, ಕರ್ನಾಟಕ ಒನ್‌ ಅಥವಾ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಇದರಲ್ಲಿ ಯಾವುದಾದರೂ ಒಂದನ್ನ ಆಯ್ಕೆ ಮಾಡಿಕೊಂಡು generate chellan ಬಟನ್‌ ಮೇಲೆ ಕ್ಲಿಕ್‌ ಮಾಡಿದರೆ ಸಾಕು.
ಚಲನ್‌ನಲ್ಲಿ ನೀವು ದಾಖಲಿಸಿದ ಮಾಹಿತಿ ಬರುತ್ತದೆ. ಆ ಚಲನ್‌ ಪ್ರಿಂಟ್‌ ತೆಗೆದುಕೊಳ್ಳಿ.
ಚಲನ್ ಪ್ರಿಂಟ್‌ ತೆಗೆದುಕೊಂಡ ಬಳಿಕೆ ನಿಗದಿತ ದಿನಾಂಕದೊಳಗೆ ಶುಲ್ಕವನ್ನು ಕಟ್ಟಿ.

ಇದನ್ನೂ ಓದಿ:SSLC Result: ಅನುತ್ತೀರ್ಣಗೊಂಡ ವಿದ್ಯಾರ್ಥಿಗಳೇ ಕುಗ್ಗಬೇಡಿ, ಇಂದು ಸೋತವನೇ ನಾಳೆ ಗೆಲ್ಲೋದು! ಪೂರಕ ಪರೀಕ್ಷೆಗೆ ತಯಾರಿ ಮಾಡಿ!