The Kerala Story ಸಿನಿಮಾ ವೀಕ್ಷಿಸಿದ ಕಲ್ಲಡ್ಕ ಪ್ರಭಾಕರ್ ಭಟ್! ಏನಂದ್ರು ಗೊತ್ತೇ?

RSS leader Kalladka Prabhakar Bhat Watch the Kerala story film

Kalladka Prabhakar Bhat : ಈಗ ಎಲ್ಲೆಡೆ ಭಾರೀ ಸದ್ದು ಮಾಡುತ್ತಿರುವ ಸಿನಿಮಾ ʼದಿ ಕೇರಳ ಸ್ಟೋರಿʼ. (The Kerala Story Cinema) ಈ ಚಿತ್ರದ ಬಗ್ಗೆ ಬಿಡುಗಡೆಗೆ ಮೊದಲೇ ಹಲವಾರು ಟೀಕೆ ಟಿಪ್ಪಣಿಗಳು ಬಂದಿದ್ದವು. ಈಗ ಬಿಡುಗಡೆ ಆದ ನಂತರವೂ ಹಲವಾರು ಮಂದಿ ಅವರವರ ಅಭಿಪ್ರಾಯ ನೀಡುತ್ತಿದ್ದಾರೆ. ಈ ಚಿತ್ರವನ್ನು ಶನಿವಾರ ವಿಕ್ಷಣೆ ಮಾಡಿದಂತಹ ಆರ್‌ಎಸ್‌ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್‌ ಭಟ್‌ (RSS Leader Kalladka Prabhakar Bhat) ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಈ ಸಿನಿಮಾವನ್ನು ಪ್ರತಿಯೊಬ್ಬ ಹಿಂದೂ ಹೆಣ್ಣು ಮಗಳು ತನ್ನ ಕುಟುಂಬದ ಜೊತೆಗೆ ನೋಡಬೇಕು. ಹೆಣ್ಣು ಮಗಳ ಮೇಲೆ ಅನ್ಯಾಯ ಆದಾಗ ಸಮಾಜ ಸುಮ್ಮನೆ ಕೂರಬಾರದು. ಈ ಸಿನಿಮಾದ ಪ್ರಕಾರ ಕೇರಳದಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಹೆಣ್ಣುಮಕ್ಕಳ ಮತಾಂತರ ಆಗಿದೆ. ನಂತರ ಅವರನ್ನು ಕ್ರೂರ ರೀತಿಯಲ್ಲಿ ಅತ್ಯಾಚಾರ ಮಾಡಲಾಗಿದೆ. ಈ ಚಿತ್ರವನ್ನು ನಿಜಕ್ಕೂ ಹೆಣ್ಣು ಮಕ್ಕಳು ನೋಡಬೇಕು. ಇದರ ಬಗ್ಗೆ ಯೋಚನೆ ಮಾಡಬೇಕು. ತಾಯಿ ಮಕ್ಕಳನ್ನು ಬಹಳ ಎಚ್ಚರಿಕೆಯಿಂದ ನೋಡಬೇಕು ಎಂಬುದಾಗಿ ಹೇಳಿದರು. ಇದರ ಜೊತೆಗೆ ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪೋಷಕರು ದೂರದೂರಿಗೆ ಕಳುಹಿಸುವಾಗ ಎಚ್ಚರಿಕೆಯನ್ನು ಪಾಲಿಸುವುದು ಅಗತ್ಯ ಎಂಬ ಕಿವಿಮಾತನ್ನು ಕೂಡಾ ಹೇಳಿದ್ದಾರೆ.

ಈ ಸಿನಿಮಾಗೆ ಕೇರಳದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಲವ್‌ಜಿಹಾದ್‌ನಲ್ಲಿ ಏನಾಗುತ್ತದೆ ಎಂಬುವುದನ್ನು ಈ ಚಿತ್ರದಲ್ಲಿ ವಿವರವಾಗಿ ತೋರಿಸಲಾಗಿದೆ. ಹೆಣ್ಣು ಮಕ್ಕಳು ದೇವಿ, ಮತ್ತು ತಾಯಿಯ ರೂಪ. ಸರಕಾರ ಬಹಳ ಎಚ್ಚರಿಕೆಯಿಂದ ಕಾನೂನನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ:The Kerala Story BO Collection: ವಿವಾದಗಳಿಂದಲೇ ಸದ್ದು ಮಾಡಿದ ʼದಿ ಕೇರಳ ಸ್ಟೋರಿʼಯ ಬಾಕ್ಸ್‌ಆಫೀಸ್‌ ಕಲೆಕ್ಷನ್‌ ಎಷ್ಟು ಗೊತ್ತೇ?

 

Leave A Reply

Your email address will not be published.