Puttur CM Yogi Road-Show: ಪುತ್ತೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಭರ್ಜರಿ ರೋಡ್ ಶೋ : ಕಾಂಗ್ರೆಸ್ ವಿರುದ್ದ ರಣಕಹಳೆ ಊದಿದ ಯೋಗಿ

Puttur Chief Minister Yogi Road Show

Puttur CM Yogi Road-Show: ಪುತ್ತೂರು: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪುತ್ತೂರಿನಲ್ಲಿ ಬೃಹತ್ ರೋಡ್ ಶೋ ನಡೆಸಿದರು.

ಹೆಲಿಕಾಫ್ಟರ್ ಮೂಲಕ ಮುಕ್ರಂಪಾಡಿ ಹೆಲಿಪ್ಯಾಡ್ ಗೆ ಬಂದು ಅಲ್ಲಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದರು.ಮುಖ್ಯ ಅಂಚೆ ಕಚೇರಿಯಿ ಬಳಿಯಿಂದ ತೆರೆದ ವಾಹನದಲ್ಲಿ ಬಸ್ ನಿಲ್ದಾಣ, ಕೋರ್ಟ್ ರಸ್ತೆಯಾಗಿ ರೋಡ್ ಶೋ ನಡೆಸಿದರು.

ವಿಜಯಪಥ ಬಿಜೆಪಿ ಪಕ್ಷದ ವಾಹನದ ಮುಂಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರೊಂದಿಗೆ ನಿಂತ ಯೋಗಿ ಆದಿತ್ಯನಾಥ್ ಅವರು ಕಾರ್ಯಕರ್ತರಿಗೆ ಕೈಬೀಸಿದರು. ಪೋಸ್ಟ್ ಆಫೀಸ್ ಕಚೇರಿಯ ಬಳಿಯಿಂದ ಶ್ರೀಧರ್ ಭಟ್ ಮಳಿಗೆಯಾಗಿ ಕಿಲ್ಲೆ ಮೈದಾನದ ರಸ್ತೆಯುದ್ಧಕ್ಕೂ ಪೊಲೀಸ್ ಬಿಗುಬಂದೋಬಸ್ತ್ ಹಾಕಲಾಗಿತ್ತು. ಇದರ ನಡುವೆ ಅಂಗಡಿ, ಮಳಿಗೆಗಳ ಇಕ್ಕೆಲಗಳಲ್ಲಿ ನಿಂತ ಸಾರ್ವಜನಿಕರು ಕೈಬೀಸಿ, ತಮ್ಮ ನೆಚ್ಚಿನ ನಾಯಕನಿಗೆ ಗೌರವ ತೋರಿದರು.

ವಿಜಯಪಥ ವಾಹನದಲ್ಲಿ ಯೋಗಿ ಆದಿತ್ಯನಾಥ್ ಅವರ ಜೊತೆಗೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು ಇದ್ದರು. ಕಿಲ್ಲೆ ಮೈದಾನಕ್ಕೆ ತಲುಪಿದ ಬಳಿಕ ವಿಜಯಪಥ ರಥದಲ್ಲೇ ನಿಂತು ಯೋಗಿ ಆದಿತ್ಯನಾಥ್ ಅವರು ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ಯೋಗಿ ಆದಿತ್ಯನಾಥ್, (Puttur CM Yogi Road-Show)ಪುತ್ತೂರಿನ ಮುತ್ತಿನಂತ ಜನರಿಗೆ ನನ್ನ ನಮಸ್ಕಾರಗಳು. ಪುತ್ತೂರಿನವರೆಲ್ಲರಿಗೂ ಹೃದಯದಿಂದ ಅಭಿನಂದನೆಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು.

ನಾನು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಭೂಮಿ ಉತ್ತರ ಪ್ರದೇಶದಿಂದ ಹನುಮಂತನ ಜನ್ಮಭೂಮಿಯಾದ ಕರ್ನಾಟಕಕ್ಕೆ ಬಂದಿದ್ದೇನೆ.

ಕರ್ನಾಟಕ ಹಾಗೂ ಉತ್ತರ ಪ್ರದೇಶಕ್ಕೆ ಅವಿನಾಭಾವ ಸಂಬಂಧವಿದೆ. ಒಂದೇ ಭಾರತ ಶ್ರೇಷ್ಠ ಭಾರತ ನಮ್ಮ ಕಲ್ಪನೆ. ಆದ್ರೆ ಕಾಂಗ್ರೆಸ್ ನವರಿಗೆ ಶ್ರೇಷ್ಠ ಭಾರತ ಇಷ್ಟ ಇಲ್ಲ. ನಾವು ಪಿಎಫ್‌ಐಯನ್ನು ಬ್ಯಾನ್ ಮಾಡಿದ್ದೇವೆ. ಆದರೆ ಹನುಮಾನ್ ಪೂಜಿಸುವ ಬಜರಂಗದಳ ಬ್ಯಾನ್ ಮಾಡುವ ಮಾತು ಕಾಂಗ್ರೆಸ್ ಆಡುತ್ತಿದೆ. ಆದರೆ ಈ ಮಾತುಗಳನ್ನು ಇಂದು ಸಮಾಜ ಸ್ವೀಕರಿಸುವುದಿಲ್ಲ ಎಂದರು.

ಸಾವಿರ ವರ್ಷದ ಹಿಂದೆ ರಾಮನ ವನವಾಸದ ಸಮಯದಲ್ಲಿ ರಾಮನ ಅಂತಿಮ ದಿನದವರೆಗೆ ಇದ್ದವನು ಹನುಮಂತ. ಇದು ಆಂಜನೇಯನ ಪುಣ್ಯ ಭೂಮಿ. ಈ ನಾಡಿನಲ್ಲಿ ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ ಜನರ ನಂಬಿಕೆಯ ಮೇಲೆ ಪ್ರಹಾರ ಮಾಡುತ್ತಿದೆ. ಬಜರಂಗದಳ ದೇಶದ ಸಾಂಸ್ಕೃತಿ ತಿಕ ಸಂಘಟನೆ.ದೇಶದ ಸಂಸ್ಕೃತಿಯ ಜೊತೆ ಬೆಸೆದುಕೊಂಡಿರುವ ಕೊಂಡಿರುವ ಸಂಘಟನೆ. ಹಾಗಾಗಿ ಯಾರಿಂದಲೂ ಬಜರಂಗದಳವನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ. ಬಜರಂಗಬಲಿ ಮಹಾಪುರುಷ ಎಂದ ಯೋಗಿ ಆದಿತ್ಯನಾಥ್, ಎಲ್ಲರೂ ನನ್ನ ಜೊತೆ ಜೈಕಾರ ಹಾಕಿ ಎಂದು ಹರ ಹರ ಮಹದೇವ್, ಜೈ ಭಜರಂಗಬಲಿ, ಜೈ ಭಜರಂಗಬಲಿ ಎಂದು ಜೈಕಾರ ಹಾಕಿದ್ದಾರೆ.

 

ಇದನ್ನು ಓದಿ: Bank FD Schemes: ಸಿಹಿ ಸುದ್ದಿ, ಖಾಸಗಿ ವಲಯದ ಈ ಬ್ಯಾಂಕ್ ಹೆಚ್ಚಿಸಿದೆ ಎಫ್‌ಡಿ ಬಡ್ಡಿ ದರ! 

Leave A Reply

Your email address will not be published.