Home News Madhyapradesh: 2 ಕುಟುಂಬಗಳ ನಡುವೆ ಕದನ, ಒಂದೇ ಕುಟುಂಬದ 6 ಮಂದಿಯನ್ನು ಗುಂಡಿಕ್ಕಿ ಹತ್ಯೆ |...

Madhyapradesh: 2 ಕುಟುಂಬಗಳ ನಡುವೆ ಕದನ, ಒಂದೇ ಕುಟುಂಬದ 6 ಮಂದಿಯನ್ನು ಗುಂಡಿಕ್ಕಿ ಹತ್ಯೆ | ವೈರಲ್‌ ಆದ ವಿಡಿಯೋ ನೋಡಿ ಬೆಚ್ಚಿಬಿದ್ದ ಸೋಷಿಯಲ್ಸ್!

Families fight over property

Hindu neighbor gifts plot of land

Hindu neighbour gifts land to Muslim journalist

Families fight over property: ಆಸ್ತಿ ವಿಚಾರವಾಗಿ ಎರಡು ಕುಟುಂಬಗಳ(Family) ನಡುವೆ ಜಗಳ ನಡೆದು, ತಾರಕಕ್ಕೇರಿ ಒಂದೇ ಕುಟುಂಬದ ಆರು ಸದಸ್ಯರನ್ನು ಗುಂಡಿಕ್ಕಿ ಹತ್ಯೆಗೈದಿದ್ದು, ಇಡೀ ಘಟನೆಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿ, ನೋಡುಗರನ್ನು ಬೆಚ್ಚಿಬೀಳಿಸುತ್ತೆ.

ಹೌದು, ಮಧ್ಯಪ್ರದೇಶದ(Madhyapradesh) ಮೊರೆನಾ (Morena) ಜಿಲ್ಲೆಯ ಲೆಪಾ(Lepa) ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಜಗಳದಲ್ಲಿ ಒಂದೇ ಕುಟುಂಬದ ಕನಿಷ್ಠ ಆರು ಸದಸ್ಯರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎನ್ನಲಾಗಿದೆ. ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ನೋಡುಗರನ್ನು ಬೆಚ್ಚಿಬೀಳಿಸುತ್ತೆ. ಇದರಲ್ಲಿ ಕೆಲವು ಜನರು ದೊಡ್ಡ ಮರದ ಕೋಲುಗಳನ್ನು ಬಳಸಿ ಇತರರನ್ನು ಕ್ರೂರವಾಗಿ ಹೊಡೆಯುತ್ತಿರುವುದು ಕಂಡುಬಂದಿದೆ.

ಅಂದಹಾಗೆ ಗ್ರಾಮದಲ್ಲಿ ಹಳೆಯ ಭೂ ವಿವಾದಕ್ಕೆ ಸಂಬಂಧಿಸಿದಂತೆ (Families fight over property ) ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ ಎನ್ನಲಾಗಿದ್ದು, ಈ ವೇಳೆ ಹತ್ಯೆ ನಡೆದಿರುವ ಸಾಧ್ಯತೆ ಇದೆ. ಲೆಪಾ ಗ್ರಾಮದಲ್ಲಿ ನಡೆದ ಮಾರಣಾಂತಿಕ ದಾಳಿಯಲ್ಲಿ 3 ಮಹಿಳೆಯರು ಮತ್ತು 3 ಪುರುಷರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದರೆ, ಇಬ್ಬರು ಪುರುಷರು ಗಂಭೀರವಾಗಿ ಗಾಯಗೊಂಡು ಗ್ವಾಲಿಯರ್(Gwalior) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಹಿತಿ ತಿಳಿ ಸ್ಥಳೀಯ ಪೋಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಮೃತ ದೇಹಗಳನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದು, ಇನ್ನೂ ಶವಪರೀಕ್ಷೆಗೆ ಒಳಗಾಗಬೇಕಿದೆ. ಈ ಘಟನೆಯ ನಂತರ, ಹೆಚ್ಚುವರಿ ಪಡೆಗಳೊಂದಿಗೆ ಪೊಲೀಸರನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ.

 

 

ಇದನ್ನು ಓದಿ: Toothache: ಹಲ್ಲು ನೋವನ್ನು ಹೋಗಲಾಡಿಸಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ!