Cooking oil Price decreased: ಕರ್ನಾಟಕ ಚುನಾವಣೆಗೂ ಮುನ್ನವೇ ಗುಡ್ ನ್ಯೂಸ್ ಕೊಟ್ಟ ಮೋದಿ, ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ !
huge reduction in the price of cooking oil
Cooking oil Price decreased: ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಗೃಹಿಣಿಯರಂತೂ ಈ ಸುದ್ದಿ ಕೇಳಿ ಖುಷಿಯಾಗಲಿದ್ದಾರೆ. ಗೃಹಿಣಿಯರಿಗಂತೂ ಈ ಸುದ್ದಿ ಭಾರಿ ಖುಷಿ ನೀಡಲಿದ್ದು ಚುನಾವಣಾ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ ಕೇಂದ್ರ ಸರ್ಕಾರ.( Central government reduced cooking oil price)
ಕೇಂದ್ರ ಸರ್ಕಾರವು ಅಡುಗೆ ಎಣ್ಣೆಯ (cooking oil price decreased) ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗುತ್ತಿದೆ. ಅದರಂತೆ ಕೇಂದ್ರ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ದರ ಇಳಿಕೆಗೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲೂ ಅಡುಗೆ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡುವಂತೆ ತೈಲ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಕೇಂದ್ರ ಸರ್ಕಾರದ ಈ ನಿರ್ದೇಶನದ ಕಾರಣದಿಂದ ಅಡುಗೆ ಎಣ್ಣೆ ಮಾರಾಟ ಮಾಡುವ ಕಂಪನಿಗಳು ತೈಲ ಬೆಲೆ ಇಳಿಕೆ ಮಾಡಲು ನಿರ್ಧರಿಸಿವೆ. ಅಡುಗೆ ಎಣ್ಣೆಯ ಬೆಲೆಯನ್ನು ಶೇ.6 ರಷ್ಟು ಇಳಿಸಲು ನಿರ್ಧರಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರಗಳಿಗೆ ಅನುಗುಣವಾಗಿ ದೇಶದಲ್ಲಿ ಅಡುಗೆ ಎಣ್ಣೆಯ ಗರಿಷ್ಠ ಮಾರಾಟ ಬೆಲೆಯನ್ನು (ಎಂಆರ್‌ಪಿ) ಕಡಿಮೆ ಮಾಡಬೇಕು ಎಂದು ಕೇಂದ್ರ ಹೇಳಿದೆ. ಹೀಗಾಗಿ ತೈಲ ಕಂಪನಿಗಳೂ ಕೇಂದ್ರದ ಈ ದರ ಕಡಿತದ ಸೂಚನೆಗೆ ಒಪ್ಪಿಗೆ ಸೂಚಿಸಿದೆ.
ಅದಾನಿ ವಿಲ್ಮಾರ್ ಕಂಪನಿಯ ಫಾರ್ಚೂನ್ ಬ್ರಾಂಡ್ ಅಡುಗೆ ಎಣ್ಣೆಯನ್ನುಮತ್ತು ಜೆಮಿನಿ ಬ್ರ್ಯಾಂಡ್ ಗಳು ಅಡುಗೆ ತೈಲ ಬೆಲೆಯನ್ನು ಐದು ರೂಪಾಯಿಗಳಿಂದ 10 ರೂಪಾಯಿಗಳವರೆಗೆ ಇಳಿಸಲು ಒಪ್ಪಿಕೊಂಡಿವೆ. ಹೀಗಾಗಿ ಕಡಿಮೆ ದರದ ಲಾಭ ಮುಂದಿನ ಮೂರು ವಾರಗಳಲ್ಲಿ ಜನಸಾಮಾನ್ಯರಿಗೆ ಲಭ್ಯವಾಗಲಿದೆ. ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ (ಎಸ್‌ಇಎ) ಈ ಪ್ರಮುಖ ಘೋಷಣೆ ಮಾಡಿದೆ. ಅಡುಗೆ ಎಣ್ಣೆಗಳ ಮೇಲಿನ ಎಂಆರ್‌ಪಿಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ತಿಳಿಸಿರುವುದಾಗಿ ಎಸ್‌ಇಎ ಬಹಿರಂಗಪಡಿಸಿದೆ. ಈ ಬಗ್ಗೆ ತನ್ನ ಸದಸ್ಯರಿಗೆ ತಿಳಿಸಲು ಮತ್ತು ದರಗಳಲ್ಲಿನ ಕಡಿತದ ಪ್ರಯೋಜನವು ಜನಸಾಮಾನ್ಯರಿಗೆ ಶೀಘ್ರವಾಗಿ ಸಿಗುವಂತೆ ನೋಡಿಕೊಳ್ಳಲು ಅದು ಕೋರಿಕೊಂಡಿದೆ.
ಕಳೆದ ಆರು ತಿಂಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಶೇಂಗಾ, ಸೋಯಾಬೀನ್, ಸಾಸಿವೆ ಉತ್ಪಾದನೆಯೂ ಹೆಚ್ಚಿದೆ.ಅದರಲ್ಲೂ ಕಳೆದ 60 ದಿನಗಳಲ್ಲಿ ದರ ಮತ್ತಷ್ಟು ಕಡಿಮೆಯಾಗಿದೆ. ಆದರೆ, ದೇಶೀಯ ಮಾರುಕಟ್ಟೆಯಲ್ಲಿ ದೀರ್ಘ ಸಮಯದಿಂದ ಅಡುಗೆ ಎಣ್ಣೆ ಬೆಲೆಗಳನ್ನು ಇಳಿಕೆ ಮಾಡಿಲ್ಲ. ಇದೀಗ ಅಡುಗೆ ಎಣ್ಣೆಯ ಬೆಲೆಗಳನ್ನು ಕಡಿತಗೊಳಿಸಲು ಕೇಂದ್ರ ಮನಸ್ಸು ಮಾಡಿದ್ದು ಏರುತ್ತಿರುವ ಬೆಲೆಗಳ ಮಧ್ಯೆ ಅಡುಗೆ ಮನೆಗಳಲ್ಲಿ ಒಂದು ಸಣ್ಣ ನೆಮ್ಮದಿ ಮೂಡಿ ಬರಲಿದೆ.
ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಮದುವೆ ಕ್ಯಾನ್ಸಲ್ ಮಾಡಿದ ವಧು ; ಕಾರಣ ಏನು ಗೊತ್ತಾ?