D K Shivkumar: ಹೆಲಿಕ್ಯಾಪ್ಟರ್ ಗೆ ಡಿಕ್ಕಿ ಹೊಡೆದಿದ್ದ ಹದ್ದು ಸಾವು! ಪಾಪ ಪರಿಹಾರಕ್ಕಾಗಿ ಅಜ್ಜಯ್ಯನ ಮೊರೆ ಹೋದ ಡಿಕೆಶಿಗೆ ಜ್ಯೋತಿಷಿ ಹೇಳಿದ್ದೇನು?

DK Shivkumar helicopter was hit by an eagle

DK Shivkumar: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ಗೆ ಹದ್ದು ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್​ ಯಾವುದೇ ಅನಾಹುತ ಸಂಭವಿಸದೆ ಕೂದಲೆಳೆಯಲ್ಲಿ ಪಾರಾಗಿದ್ದಾರೆ. ಸದ್ಯ ಗಂಡಾಂತರದಿಂದ ಪಾರಾಗಿರುವ ಡಿಕೆ ಶಿವಕುಮಾರ್ ಅವರು ಅಜ್ಜಯ್ಯನ ಮೊರೆ ಹೋಗಿದ್ದು, ಡಿಕ್ಕಿ ಹೊಡೆದಿದ್ದ ಹದ್ದು ಸತ್ತಿರುವುದಕ್ಕೆ ಹಾಗೂ ತಾವು ಪಾರಾಗಿರೋ ವಿಚಾರದ ಕುರಿತು ಜ್ಯೋತಿಷಿ ಏನು ಹೇಳಿದ್ದಾರೆ ಗೊತ್ತಾ?

ತಮಗೆ ರಾಜಕೀಯವಾಗಲಿ ಅಥವಾ ಇನ್ನಾವದೇ ವಿಚಾರಕ್ಕೆ ಏನೇ ಕಷ್ಟ, ಸಂಕಷ್ಟಗಳು ಎದುರಾದರು ದೈವ ಭಕ್ತರಾಗಿರುವ ಡಿಕೆಶಿ ಅವರು ಕೂಡಲೇ ದೇವರ ಮೊರೆ ಹೋಗುತ್ತಾರೆ. ಅಂತೆಯೇ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivkumar) ಅವರು ​ಹೆಲಿಕಾಪ್ಟರ್ ಅವಘಡದಿಂದ ಪಾರಾಗುತ್ತಿದ್ದಂತೆಯೇ ನೊಣವಿನಕೆರೆ ಅಜ್ಜಯ್ಯನ ಮೊರೆ ಹೋಗಿದ್ದಾರೆ. ಅಲ್ಲದೇ ಜ್ಯೋತಿಷಿ ರಾಜಗುರು ದ್ವಾರಕನಾಥ್ ಅವರು ಕೆಲ ಸಲಹೆಗಳನ್ನು ನೀಡಿದ್ದಾರೆ.

ಹೌದು, ತಾವು ಹೆಲಿಕಾಪ್ಟರ್ ಗೆ ರಣಹದ್ದು ಡಿಕ್ಕಿ ಹೊಡೆದಿದ್ದು ಅದೃಷ್ಟವಶಾತ್ ಡಿ.ಕೆ. ಶಿವಕುಮಾರ್ ಸೇರಿದಂತೆ ಹೆಲಿಕಾಪ್ಟರ್ ನಲ್ಲಿದ್ದ ಎಲ್ಲರೂ ಪಾರಾಗಿದ್ದಾರೆ. ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರು ಇಂದು ತುಮಕೂರು ಜಿಲ್ಲೆಯ ತುರುವೇಕೆರೆ ಬಳಿ ಇರುವ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ದು, ನೊಣವಿನಕೆರೆ ಅಜ್ಜಯ್ಯನ ಆಶೀರ್ವಾದ ಪಡೆದುಕೊಂಡಿದ್ದಾರೆ. ಘಟನೆ ಬೆನ್ನಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರ ಜ್ಯೋತಿಷ್ಯದ ಬಗ್ಗೆ ಚರ್ಚೆಯಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕನಾಥ್‌ ಮಾತನಾಡಿದ್ದು, ಡಿಕೆ ಶಿವಕುಮಾರ್‌ ಅವರ ಪತ್ನಿಯ ಗ್ರಹಗತಿ ಚೆನ್ನಾಗಿರುವುದರಿಂದ ಡಿಕೆ ಶಿವಕುಮಾರ್‌ ಅವರು ಮಂಗಳವಾರ ನಡೆದ ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿಕೆ ಶಿವಕುಮಾರ್‌ ಅವರಿಗೆ ಸದ್ಯ ಗುರು ಬಲ, ಶನಿ ಬಲ ಎರಡೂ ಇಲ್ಲ. ಆದರೆ, ಅವರ ಪತ್ನಿ ಉಷಾ ಅವರ ಗ್ರಹಗತಿ ಚೆನ್ನಾಗಿದೆ. ಆ ದೈವ ಬಲವೇ ಶಿವಕುಮಾರ್‌ ಅವರನ್ನು ಕಾಪಾಡುತ್ತದೆ ಎಂದಿದ್ದಾರೆ.

ಅಲ್ಲದೆ ಹೆಕಾಪ್ಟರ್‌ಗೆ ಕುಕ್ಕಿದ ರಣಹದ್ದು ಮೃತಪಟ್ಟಿದೆ. ಹೀಗಾಗಿ ಪಂಚ ಪಕ್ಷಿ ಶಾಸ್ತ್ರ ಪರಿಣಿತ ಗಜೇಂದ್ರ ಅವರ ಜತೆ ಚರ್ಚಿಸಲಾಗಿದೆ. ಶಾಸ್ತ್ರದ ಅನುಸಾರ ದೋಷ ಪರಿಹಾರಕ್ಕೆ ಶಿವಕುಮಾರ್‌ ಬೆಂಗಳೂರಿನ ಅಲಸೂರಿನಲ್ಲಿರುವ ಸಾವಿರ ವರ್ಷ ಹಳೆಯ ಸೋಮೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಮಾಡಿಸಬೇಕು ಮತ್ತು 22 ದಿನಗಳ ಒಳಗೆ ವಾಸುಕಿ ನಾಗರಾಜ ಕ್ಷೇತ್ರವೂ ಆಗಿರುವ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಬೇಕು ಎಂದು ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ ಮಂಗಳವಾರ ನಡೆದಿರುವ ಘಟನೆಯನ್ನು ಡಿಕೆ ಶಿವಕುಮಾರ್‌ ಹಗುರವಾಗಿ ಪರಿಗಣಿಸಬಾರದು. ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು ಎಂದೂ ರಾಜಗುರು ದ್ವಾರಕನಾಥ್‌ ಕೆಪಿಸಿಸಿ ಅಧ್ಯಕ್ಷರಿಗೆ ಕಿವಿಮಾತು ಹೇಳಿದ್ದಾರೆ.

ಅಂದಹಾಗೆ ಕೆಪಿಸಿಸಿ ಅಧ್ಯಕ್ಷರಾದರೂ ಹೈಕಮಾಂಡ್ ಅಧ್ಯಕ್ಷಗಿರಿಗೆ ಹಸಿರು ನಿಶಾನೆ ತೋರಿಸಿದ್ದರೂ ಸಹ ಡಿ.ಕೆ.ಶಿವಕುಮಾರ್ ಗೆ ಅಧಿಕೃತವಾಗಿ ಪದಗ್ರಹಣ ಮಾಡಿಕೊಳ್ಳಲು ಸಾಧ್ಯವಾಗಿದ್ದಿಲ್ಲ. ಮೂರು ಬಾರಿ ಪದಗ್ರಹಣ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾದರೂ ಸಹ ಒಂದಲ್ಲ ಒಂದು ಕಾರಣಕ್ಕಾಗಿ ಅದು ಮುಂದೂಡಲ್ಪಟ್ಟಿತ್ತು. ಹೀಗಾಗಿ ಪದಗ್ರಹಣ ಕಾರ್ಯಕ್ರಮಕ್ಕೆ ಎದುರಾಗಿರುವ ಅಡೆತಡೆ ನಿವಾರಣೆಗೆ ಡಿ.ಕೆ.ಶಿವಕುಮಾರ್ , ತುಮಕೂರಿನ ಕಾಡುಸಿದ್ದೇಶ್ವರ ಮಠದ ಅಜ್ಜಯ್ಯನ ಸಲಹೆಯಂತೆ ಶಿವನ ದರ್ಶನ ಪಡೆದಿದ್ದರು.

 

ಇದನ್ನು ಓದಿ: Jagadish shettar : ‘ಇದು ನನ್ನ ಕೊನೆಯ ಚುನಾವಣೆ ನನಗೆ ಮತ ನೀಡಿ, ಗೆಲ್ಲಿಸಿ’ ; ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕರಪತ್ರದಲ್ಲಿ ಘೋಷಣೆ!! 

Leave A Reply

Your email address will not be published.