Bajarang dal: ಭಜರಂಗದಳ ನಿಷೇಧ ವಾಪಸ್ ಇಲ್ಲ : ಕಾಂಗ್ರೆಸ್ ನಿರ್ಧಾರ !
Bajarang dal ban dispute
Bajarang dal ban dispute: ವಿಧಾನಸಭಾ ಚುನಾವಣೆಯ (Karnataka election) ಹಿನ್ನೆಲೆ ಪಕ್ಷದ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿದ್ದಾರೆ. ಪಕ್ಷದ ಗೆಲುವಿಗಾಗಿ ಜಿಜೆಪಿ- ಕಾಂಗ್ರೇಸ್ ಪಕ್ಷಗಳು ಭರವಸೆಯ ಘೋಷಣೆಗಳನ್ನು ಮಾಡುತ್ತಿದ್ದು, ಕಳೆದೆರಡು ದಿನಗಳ ಹಿಂದೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಆದರೆ, ಕಾಂಗ್ರೇಸ್ ಹೊರಡಿಸಿದ ಪ್ರಣಾಳಿಕೆ ಭಾರೀ ಅಕ್ರೋಶಕ್ಕೆ ಕಾರಣವಾಗಿತ್ತು. ಕಾರಣ ಭಜರಂಗದಳ ನಿಷೇಧ (Bajarang dal ban dispute) ಮಾಡುವುದಾಗಿ ಹೇಳಲಾಗಿತ್ತು. ಈ ಬಗ್ಗೆ ಭಾರೀ ಚರ್ಚೆ ನಡೆದಿದ್ದು, ಇದೀಗ ಭಜರಂಗದಳ ನಿಷೇಧ ವಾಪಸ್ ಇಲ್ಲ ಎಂದು ಕಾಂಗ್ರೆಸ್ ನಿರ್ಧರಿಸಿದೆ.
ಕೊಡಗು ಬಜರಂಗದಳ ಮೇಲೆ ಕಾಂಗ್ರೆಸ್ ಕೈಗೊಂಡ ನಿರ್ಧಾರ ಪಕ್ಕ ಆಗಿದೆ ಭಜರಂಗದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆ ಪುನರುತ್ಚರಿಸಿದೆ.
ನಿನ್ನೆ ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿ ಬಜರಂಗದಳ ಮತ್ತು ಪಿ ಎಫ್ ಐ ಮುಂತಾದ ಸಂಘಟನೆಗಳನ್ನು ನಿಷೇಧ ಮಾಡುತ್ತೇವೆ ಎಂದಿದ್ದರು. ಇದರ ಬಗ್ಗೆ ರಾಜ್ಯಾದ್ಯಂತ ಅಲ್ಲದೆ ದೇಶಾದ್ಯಂತ ವ್ಯಾಪಕ ಅಕ್ರೋಶ ವ್ಯಕ್ತವಾಗಿತ್ತು. ನಾನು ಬಜರಂಗಬಲಿ ನನ್ನನ್ನು ಬಂಧಿಸಿ ಎಂದು ಕಾರ್ಯಕರ್ತರು ನಾಯಕರು ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಬ್ಯಾನರ್ ಹಾಕಿಕೊಂಡು ಪ್ರತಿಭಟನೆಗೆ ಇಳಿದಿದ್ದರು. ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಸರಕಾರಕ್ಕೆ ದೊಡ್ಡ ಬತ್ತಳಿಕೆ ಒಂದು ದೊರೆತಿತ್ತು. ಜನರ ಪ್ರತಿಭಟನೆಯನ್ನು ಅರಿತು ಸಂಜೆಯ ಹೊತ್ತಿಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಮರು ಪರಿಶೀಲಿಸುತ್ತದೆ ಎಂದು ಅಂದುಕೊಳ್ಳಲಾಗಿತ್ತು.
ಕಾಂಗ್ರೆಸ್ನವರು ನಮ್ಮ ಮನೆಗೆ ವೋಟು ಕೇಳಲು ಬಂದರೆ ನಾಯಿ ಬಿಡುತ್ತೇವೆ ಎನ್ನುವ ಪ್ರತಿಭಟನೆ ಮಲೆನಾಡಿನಲ್ಲಿ ಜೋರಾಗಿ ನಡೆದಿದೆ. ನರೇಂದ್ರ ಮೋದಿ ಅಮಿತ್ ಶಾ ಬಸವರಾಜ್ ಬೊಮ್ಮಾಯಿ ಸಾಹಿತ್ಯ ಹಲವು ನಾಯಕರು ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಕಿಡಿ ಕಾರಿದ್ದಾರೆ.
ಆದರೆ ಈಗ ಬ್ರೇಕಿಂಗ್ ನ್ಯೂಸ್ ಲಭ್ಯವಾಗಿದ್ದು ಬಜರಂಗದಳ ನಿಷೇಧ ವಾಪಸ್ ಇಲ್ಲ ಎಂದು ಕಾಂಗ್ರೆಸ್ ನಿರ್ಧರಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ ಬ್ಯಾನ್ ಆಗುತ್ತಾ ?
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ನಾಯಕರು ಮಹತ್ವದ ಸಭೆಯನ್ನು ನಡೆಸಿದ್ದು, ಈ ವೇಳೆ ಬಜರಂಗದಳ ನಿಷೇಧದ ವಿವಾದದ ಬಗ್ಗೆ ಚರ್ಚೆಯಾಗಿದೆ. ಈ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, “ಬಜರಂಗದಳಕ್ಕೂ, ಆಂಜನೇಯನಿಗೂ ಏನು ಸಂಬಂಧವಿದೆ? ನಾನು ಕೂಡ ರಾಮ, ಆಂಜನೇಯ ಹಾಗೂ ಶಿವ ಭಕ್ತ. ನಾನು ಕೂಡ ದಿನವೂ ಹನುಮಾನ್ ಚಾಲೀಸ್ ಪಠಣ ಮಾಡುತ್ತೇನೆ” ಎಂದು ಹೇಳಿದರು.
“ಆಂಜನೇಯನಿಗೂ, ಬಜರಂಗದಳಕ್ಕೂ ಯಾವುದೇ ಸಂಬಂಧವಿಲ್ಲ.
ಬಜರಂಗದಳವನ್ನು ಬ್ಯಾನ್ ಮಾಡುತ್ತೇವೆ ಅಂದ್ರೆ ಬಿಜೆಪಿಯವರಿಗೆ ಯಾಕೆ ಭಯವೋ ಗೊತ್ತಿಲ್ಲ. ನಮ್ಮ ಗ್ಯಾರಂಟಿ ಐತಿಹಾಸಿಕ ಕಾರ್ಡ್ ಆಗಿದೆ. ನಾವು ಕೊಟ್ಟಿರೋ ಗ್ಯಾರಂಟಿ ಭರವಸೆಯನ್ನು ಈಡೇರಿಸುತ್ತೇವೆ. ಬಜರಂಗದಳ ನಿಷೇಧ ಘೋಷಣೆಯನ್ನು ವಾಪಾಸ್ ಪಡೆಯುವುದಿಲ್ಲ ಎಂದು ಡಿಕೆಶಿ ಹೇಳಿದರು.