Bajrang Dal Ban: ಬಜರಂಗದಳ ನಿಷೇಧದ ಬಿಸಿ ಈಗ್ಲೇ ಮುಟ್ಟಿತಾ? ಪ್ರಸ್ತಾಪ ವಾಪಸ್’ನತ್ತ ಭಯಗ್ರಸ್ತ ಕಾಂಗ್ರೆಸ್ ?!

Bajrang Dal Ban: ನಿನ್ನೆ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಂಡ ನಂತರ ಇಂದು ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಬಜರಂಗದಳ (Bajarang Dal) ನಿಷೇಧ ಕುರಿತು ಪ್ರಸ್ತಾಪ ಮಾಡಿದ್ದಕ್ಕೆ ಎಲ್ಲೆಡೆ ವ್ಯಾಪಕ ವಿರೋಧ, ಆಕ್ರೋಶ ವ್ಯಕ್ತವಾಗುತ್ತಿರುವುದು ನಡೆಯುತ್ತಲೇ ಇದೆ. ಈ ಘಟನೆ ನಡೆದ ಬೆನ್ನಲ್ಲೇ ಕಾಂಗ್ರೆಸ್‌ (Congress) ನಾಯಕರು ಡ್ಯಾಮೇಜ್‌ ಕಂಟ್ರೋಲ್‌ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಇಂದು ಮಂಗಳವಾರ ರಾತ್ರಿ ನಾಯಕರೆಲ್ಲ ಸೇರಿ ಸಮಾಲೋಚನೆ ನಡೆಸಿ, ಬಜರಂಗದಳ ನಿಷೇಧ (Bajrang Dal Ban) ಎಂಬ ಪ್ರಸ್ತಾಪವನ್ನು ವಾಪಸ್‌ ತೆಗೆದುಕೊಳ್ಳುವ ನಿರ್ಧಾರ ಮಾಡಲಿದ್ದಾರೆ ಎನ್ನಲಾಗಿದೆ. ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಂದು ಪ್ರಣಾಳಿಕೆ ಪ್ರಸ್ತಾಪದಲ್ಲಿ ಬಜರಂಗದಳ ನಿಷೇಧ ವಿಷಯ ಗಂಭೀರ ರೂಪ ಪಡೆದುಕೊಳ್ಳುವುದು ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಕಾಂಗ್ರೆಸ್‌ ಚಿಂತನೆ. ಹೀಗಾಗಿ ಈ ವಿಷಯವನ್ನು ಪ್ರಣಾಳಿಕೆಯಿಂದ ತೆಗೆದು ಹಾಕಲು ಪಕ್ಷದ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಾ ಇದರ ವಿರುದ್ಧ ಕಿಡಿಕಾರಿದ್ದಾರೆ. ಬಜರಂಗದಳ, ಸಾಮಾಜಿಕವಾಗಿ, ಧಾರ್ಮಿಕವಾಗಿ ಕೆಲಸ ಮಾಡುವಂತಹ ಸಂಘಟನೆ. ಪಿಎಫ್‌ಐ ನಂತ ಭಯೋತ್ಪಾದನಾ ಚಟುವಟಿಕೆ ಹೊಂದಿರುವ ದೇಶವಿರೋಧಿ ಸಂಘಟನೆಗೆ ಬಜರಂಗದಳವನ್ನು ಹೋಲಿಸುವುದು ಸರಿಯಲ್ಲ ಎಂಬ ಮಾತನ್ನು ಖಾರವಾಗಿಯೇ ಹೇಳಿದ್ದಾರೆ.

Leave A Reply

Your email address will not be published.