Smartphone Unlock Tips: ಮೊಬೈಲ್ ಲಾಕ್ ಮರೆತರೆ ಅನ್ಲಾಕ್ ಮಾಡಲು ಈ ಸಿಂಪಲ್ ಟ್ರಿಕ್ಸ್ ಬಳಸಿ!

Smartphone unlock Tips: ಮೊಬೈಲ್ (Mobile) ಲಾಕ್ ಮರೆತು ಹೋಗೋದು ಸಾಮಾನ್ಯ. ಹೆಚ್ಚಾಗಿ ಆಪ್ ಗಳಿಗೆ (App) ಹಾಕಿರುವ ಲಾಕ್ ಮರೆತುಹೋಗಿರುತ್ತದೆ. ಯಾವಾಗಲಾದರೂ ಒಮ್ಮೆ ಆಪ್ ಓಪನ್ ಮಾಡಿದ್ರೆ ಲಾಕ್ ಮರೆತಿರುತ್ತದೆ. ಮೊಬೈಲ್ ಲಾಕ್ ಪ್ಯಾಟರ್ನ್ (mobile lock pattern) ಒಪನ್ ಮಾಡಲು ಶತಪ್ರಯತ್ನ ಮಾಡಬೇಕಾಗುತ್ತದೆ. ಕೆಲವು ಪ್ರಯತ್ನಗಳ ಬಳಿಕ ಅನ್ ಲಾಕ್ ಆಗುತ್ತದೆ, ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ಆ ಪ್ಯಾಟ್ರನ್ ನೆನಪಾಗಲ್ಲ. ಆಗ ಫೋನ್ ಅನ್ ಲಾಕ್ ಮಾಡಲು ಒಂದೇ ದಾರಿ ಎಂದು ಮೊಬೈಲ್ ಶಾಪ್‌ಗೆ ತೆಗೆದುಕೊಂಡು ಹೋಗುತ್ತೇವೆ. ಈ ರೀತಿ ಮಾತ್ರವಲ್ಲದೆ, ಈ ಸಿಂಪಲ್ ಟ್ರಿಕ್ಸ್ (Smartphone  unlock Tips) ಮೂಲಕವೂ ಮೊಬೈಲ್ ಅನ್ ಲಾಕ್ ಮಾಡಬಹುದು. ಹೇಗೆ? ಇಲ್ಲಿದೆ ನೋಡಿ ಮಾಹಿತಿ.

ಲಾಕ್ ಮೊಬೈಲ್ ಅನ್ ಲಾಕ್ ಮಾಡೋದು ಹೇಗೆ?

• ಹೇಗೂ ನಿಮ್ಮ ಮೊಬೈಲ್ ಲಾಕ್ ಮರೆತಿರುತ್ತೀರ ಮೊಬೈಲ್ ಓಪನ್ ಮಾಡಲು ಸಾಧ್ಯವಿಲ್ಲ. ಹಾಗಿರುವಾಗ ಮೊದಲು ಮತ್ತೊಂದು ಫೋನ್ ಅಥವಾ ಕಂಪ್ಯೂಟರ್‌ನಿಂದ (computer) google.com/android/devicemanager ಗೆ ಭೇಟಿ ನೀಡಿ.
• Google ಖಾತೆಗೆ ಸೈನ್ ಇನ್ ಆಗಿ. ಅನ್ಲಾಕ್ ಮಾಡಲು ಬಯಸುವ ಪಟ್ಟಿಯಿಂದ ಫೋನ್ ಆಯ್ಕೆಮಾಡಿ.
• ‘ನಿಮ್ಮ ಫೋನ್ ಲಾಕ್ ಮಾಡಿ’ ಆಯ್ಕೆಗೆ ಕ್ಲಿಕ್ ಮಾಡಿ.
• ಹೊಸ ಪಾಸ್‌ವರ್ಡ್ ಅನ್ನು ಟೈಪ್ ಮಾಡಿ. ಕೆಳಗೆ ನೀಡಿರುವ ಲಾಕ್ ಬಟನ್ ಕ್ಲಿಕ್ ಮಾಡಿ.
• ಫೋನ್ ಅನ್ಲಾಕ್ (Phone Unlock) ಮಾಡಲು ಹೊಸ ಪಾಸ್ವರ್ಡ್ ಅನ್ನು ಟೈಪ್ ಮಾಡಿ.

1. https://findmymobile.samsung.com/ ಭೇಟಿ ನೀಡಿ.
2. ID ಮತ್ತು ಪಾಸ್‌ವರ್ಡ್ ಹಾಕಿ ಲಾಗಿನ್ ಆಗಿರಿ.
3. ‘ಅನ್ಲಾಕ್’ ಆಯ್ಕೆ ಕ್ಲಿಕ್ ಮಾಡಿ
4. ಸ್ಮಾರ್ಟ್ಫೋನ್ ಅನ್ಲಾಕ್ ಮಾಡಲು ನಿಮ್ಮ ಖಾತೆಯ ಪಾಸ್ವರ್ಡ್ ಅನ್ನು ದೃಢೀಕರಿಸಿ.

• Google ಸಹಾಯಕವನ್ನು ಸರಿಯಾಗಿ ಹೊಂದಿಸಿದ್ದರೆ, ‘ಅನ್ಲಾಕ್ ವಿತ್ ವಾಯ್ಸ್’ ಆಯ್ಕೆ ಇರುತ್ತದೆ.
• ಇದು ನಿಮ್ಮ ಪೂರ್ವ-ರೆಕಾರ್ಡ್ ಮಾಡಿದ ಧ್ವನಿಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.
• ಈ ವೈಶಿಷ್ಟ್ಯವು ಆನ್ ಆಗಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್ ಅನ್ಲಾಕ್ ಮಾಡಲು ‘ಓಕೆ ಗೂಗಲ್’ ಎಂದು ಹೇಳಬಹುದು.

ಇದನ್ನೂ ಓದಿ: ನೀವು ಈ ತಪ್ಪುಗಳನ್ನು ಮಾಡಿದ್ರೆ, ಮೈ ಫುಲ್​ ಸಾಲವಾಗುತ್ತೆ, ಹುಷಾರ್​!

Leave A Reply

Your email address will not be published.