ಚುನಾವಣೆಗೆ ಮತಯಾಚನೆಗೆ ಬಂದಿದ್ದ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಲ್ಯಾಂಡಿಂಗ್ ಸಮಸ್ಯೆ
Election ಕಲಬುರಗಿ: ವಿಧಾನಸಭೆ ಚುನಾವಣೆ( Election) ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ರಾಜಕೀಯ ನಾಯಕರು ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾಯಕರು ಪಣತೊಟ್ಟಿದ್ದಾರೆ. ಇದೀಗ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಿಂದ ಬೀದರ್ಗೆ ಹೋಗತ್ತಿದ್ದ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮರಳಿ ಆಳಂದ ಪಟ್ಟಣಕ್ಕೆ ಕಾದು ಹೋಗುವ ಸ್ಥಿತಿ ಎದರಾಯಿತು.
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಿಂದ ಟೇಕಾಫ್ ಆಗಿದ್ದ ಹೆಲಿಕಾಪ್ಟರ್, ಬೀದರ್ ಏರ್ಬೇಸ್ನಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ಮಳೆ ಹಿನ್ನೆಲೆಯಲ್ಲಿ ಬೀದರ್ನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಸಮಸ್ಯೆ ಉಂಟಾಗಿದೆ. ಆಳಂದ ಪಟ್ಟಣದಿಂದ ಟೇಕಾಫ್ ಆದ ಯೋಗಿ ಇದ್ದ ಹೆಲಿಕಾಪ್ಟರ್ ಕೇವಲ 10 ನಿಮಿಷದಲ್ಲೇ ಆಳಂದ ಪಟ್ಟಣಕ್ಕೆ ವಾಪಸ್ಸಾಗಿದೆ.
ಇನ್ನು ಆಳಂದ ಪಟ್ಟಣದಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಯೋಗಿ ಆದಿತ್ಯನಾಥ್ ಅವರು ಹೆಲಿಕಾಪ್ಟರ್ನಲ್ಲಿಯೇ ಕುಳಿತಿದ್ದರು. ಬೀದರ್ ಏರ್ಬೇಸ್ನಿಂದ ಲ್ಯಾಂಡಿಗ್ ಕ್ಲಿಯರನ್ಸ್ ಸಿಗುವವರಗೆ ಆಳಂದ ಪಟ್ಟಣದಲ್ಲೇ ಇದ್ದರು.ಲ್ಯಾಂಡಿಗ್ ಕ್ಲಿಯರನ್ಸ್ ಸಿಕ್ಕ ನಂತರ ಯೋಗಿ ಅವರು ಬೀದರ್ನ ಏರ್ಬೇಸ್ಗೆ ತೆರಳಿ ಅಲ್ಲಿಂದ ಲಕ್ನೋಗೆ ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಭಾಗಿಯಾಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಪರ ಮತಯಾಚನೆ ನಡೆಸಿದರು.
ಇದನ್ನೂ ಓದಿ:Narendra Modi : ರೋಡ್ ಶೋ ವೇಳೆ ಮೋದಿಯತ್ತ ಮೊಬೈಲ್ ಎಸೆದ ಅಭಿಮಾನಿ! ಸ್ವಲ್ಪದರಲ್ಲೇ ಪಾರಾದ ಪ್ರಧಾನಿ!