P.M. Narendra Modi: ನಾಳೆ ಪ್ರಧಾನಿ ಮೋದಿ ಅಬ್ಬರ ಮತ ಪ್ರಚಾರ : ವಾಹನ ಸವಾರರೇ.. ಈ ಸಂಚಾರ ಮಾರ್ಗ ನಿರ್ಬಂಧ

Prime Minister Narendra Modi: ಮೇ.10 ರಂದು ಕರ್ನಾಟಕದಲ್ಲಿ ವಿಧಾನ ಸಭೆ ಚುನಾವಣೆ ಹಿನ್ನೆಲೆ ರಾಜ್ಯದೆಲ್ಲೆಡೆ ದೇಶದ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi ) ಅಬ್ಬರದ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗುವ ಮೂಲಕ ರಣತಂತ್ರ ರೂಪಿಸುತ್ತಿದ್ದಾರೆ. ನಾಳೆ ಶನಿವಾರ(ಎ.29)ರಂದು ಪ್ರಧಾನಿ ಮೋದಿ ಮಧ್ಯಾಹ್ನ 2 ರಿಂದ ರಾತ್ರಿ 7.30ರ ವರೆಗೆ ಮೋದಿ ರೋಡ್‌ ಶೋವನ್ನು ನಡೆಸಲಿದ್ದಾರೆ. ಸಿಲಿಕಾನ್‌ ಸಿಟಿಗೆ ಮೋದಿ ಆಗಮಿಸುತ್ತಿರೋದ್ರಿಂದ ಬಹುತೇಕ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುವ ಎಲ್ಲಾ ಸಾಧ್ಯತೆಗಳಿದ್ದು ವಾಹನ ಸವಾರರು ಕೊಂಚ ಸಂಚಾರ ನಿರ್ಬಂಧ ಕಡೆ ಗಮನ ಹರಿಸಬೇಕಾಗಿದೆ ಇಲ್ಲವಾದಲ್ಲಿ ನಾಳೆ ರಸ್ತೆಯುದ್ಧಕ್ಕೂ ಟ್ರಾಫಿಕ್ಸ್‌ ಸಮಸ್ಯೆ ಸುಳಿಯಲ್ಲಿ ಸುತ್ತಬೇಕಾಗುತ್ತದೆ.

 

ಸಂಚಾರ ನಿರ್ಬಂಧ :
ಸಿಲಿಕಾನ್‌ ಸಿಟಿ ಬೆಂಗಳೂರಿಗೆ ನವೋ ಆಗಮಿಸುವ ಕಾರಣದಿಂದಾಗಿ ಹಳೆ ಏರ್ಪೋರ್ಟ್ ರಸ್ತೆ,ಕಬ್ಬನ್ ರಸ್ತೆ,ಅಂಬೇಡ್ಕರ್ ರಸ್ತೆ, ಕೃಂಬಿಗಲ್ ರಸ್ತೆ, ದೇವಾಂಗ ರಸ್ತೆ, ಕೇಂಬ್ರಿಡ್ಜ್ ಲೇಔಟ್ ರಸ್ತೆ, ಡಿಕನ್​ಸನ್ ರಸ್ತೆ, ಲಾಲ್ ಭಾಗ್ ವೆಸ್ಟ್ ಗೇಟ್ ರಸ್ತೆ, ಕೆಆರ್. ಸರ್ಕಲ್, ಆರ್​​ವಿ ಕಾಲೇಜ್ ರಸ್ತೆ, ಲಾಲ್ ಭಾಗ್ ಮುಖ್ಯ ರಸ್ತೆ
ಬಸನವಗುಡಿ 50 ಅಡಿ ಕೆನರಾ ಬ್ಯಾಂಕ್ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದೆ.

ಪರ್ಯಾಯ ಮಾರ್ಗ:

ಮಾಗಡಿ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಬರುವ ವಾಹನಗಳು ತಾವರೆಕೆರೆ ಜಂಕ್ಷನ್​ನಲ್ಲಿ ಬಲತಿರುವು ಪಡೆದು ಹೆಮ್ಮಿಗೆಪುರ ಕೊಮ್ಮಘಟ್ಟ ಕೆಂಗೇರಿ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದಾಗಿದೆ.
ಮಾಗಡಿ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ತಾವರೆಕೆರೆ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಸೊಂಡೇಕೊಪ್ಪ ನೆಲಮಂಗಲ ಮೂಲಕ ಸಂಚರಿಸಬಹುದು.

ತುಮಕೂರು ಕಡೆಯಿಂದ ಬಂದು ನೈಸ್ ರಸ್ತೆಯಲ್ಲಿ ಸಂಚರಿಸುವ ಸರಕು ವಾಹನಗಳು ನೆಲಮಂಗಲ ಸೊಂಡೇಕೊಪ್ಪ ಬೈಪಾಸ್‌ನಲ್ಲಿ ಬಲತಿರುವು ಪಡೆದು ಸೊಂಡೇಕೊಪ್ಪ ತಾವರೆಕೆರೆ – ಹೆಮ್ಮಿಗೆಪುರ – ಕೊಮ್ಮಘಟ್ಟ ಕೆಂಗೇರಿ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದು.

ನಗರದ ಒಳಭಾಗದಿಂದ ಮಾಗಡಿ ಕಡೆಗೆ ಸಂಚರಿಸುವ ವಾಹನಗಳು ಎಂಸಿ ಸರ್ಕಲ್‌ನಲ್ಲಿ ಎಡತಿರುವು ಪಡೆದು ಮೈಸೂರು ರಸ್ತೆ ಕೆಂಗೇರಿ – ಕೊಮ್ಮಘಟ್ಟ – ಹೆಮ್ಮಿಗೆಪುರ – ತಾವರೆಕೆರೆ ಮೂಲಕ ಸಂಚರಿಸಬಹುದು.
ನಾಯಂಡಹಳ್ಳಿ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಬರುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಮೈಸೂರು ರಸ್ತೆಗೆ ಚಲಿಸಿ ಕೆಂಗೇರಿ ಆರ್ ಆರ್ ಕಾಲೇಜು ಮೂಲಕ – ರಾಮೋಹಳ್ಳಿ, ಚಂದ್ರಪ್ಪ ಸರ್ಕಲ್ – ತಾವರೆಕೆರೆ ಮೂಲಕ ಮಾಗಡಿ ರಸ್ತೆ ಮತ್ತು ತುಮಕೂರು ರಸ್ತೆಗೆ ಸಂಚರಿಸಬಹುದು.

ಸಿಎಂಟಿಐ ಜಂಕ್ಷನ್‌ನಿಂದ ನಾಯಂಡಹಳ್ಳಿ ಮೈಸೂರು ರಸ್ತೆ ಕಡೆಗೆ ಹೋಗುವ ವಾಹನಗಳು ಗೊರಗುಂಟೆಪಾಳ್ಯ – ವೆಸ್ಟ್ ಆಫ್ ಕಾರ್ಡ್ ರಸ್ತೆ – ಎಂ.ಸಿ ಸರ್ಕಲ್ – ವಿಜಯನಗರ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದು.
ಹಳೇ ರಿಂಗ್ ರಸ್ತೆಯಲ್ಲಿ ಕೆಂಗೇರಿ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಬರುವ ವಾಹನಗಳು ಉಲ್ಲಾಳ ಜಂಕ್ಷನ್​​ನಲ್ಲಿ ಎಡತಿರುವು ಪಡೆದು ಉಲ್ಲಾಳ ವಿಲೇಜ್, ರಾಮಸಂದ್ರ ಬ್ರಿಡ್ಜ್ ಹೆಮ್ಮಿಗೆಪುರ ತಾವರೆಕೆರೆ ಮೂಲಕ ತುಮಕೂರು ರಸ್ತೆಗೆ ಸಂಚರಿಸಬಹುದು.

ಒಟ್ಟಾರೆಯಾಗಿ ಈ ಬಾರಿಯ ವಿಧಾನ ಸಭೆ ಚುನಾವಣೆಗೆ ಬಿಜೆಪಿ ಗೆಲವಿಗಾಗಿ ಭರ್ಜರಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಏಪ್ರಿಲ್ 29ರಿಂದ ಮೇ 7ರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ರಾಜ್ಯಕ್ಕೆ ಆಗಮಿಸುವ ಮೂಲಕ ಮತದಾರರ ಸೆಳೆಯೋದಕ್ಕೆ ಮುಂದಾಗಿದಂತೂ ನಿಜ .

ಇದನ್ನು ಓದಿ: Weekend With Ramesh: ಈ ಸಾರಿಯ ‘ ವೀಕೆಂಡ್ ವಿತ್ ರಮೇಶ್’ ಎಪಿಸೋಡಿಗೆ ಬಂದಿದೆ ದಾಖಲೆಯ TVR – ಅದ್ರ ಗೆಸ್ಟ್ ಯಾರು ಗೊತ್ತಾ ? 

Leave A Reply

Your email address will not be published.