Fake call and messages: ಮೇ.01 ರಿಂದ ನಿಮ್ಮ ಮೊಬೈಲ್ ಗೆ ಬರೋದೇ ಇಲ್ಲ ನಕಲಿ ಕರೆ ಹಾಗೂ ಮೆಸೇಜ್!

Fake call and messages: ಇಂದಿನ ದಿನಗಳಲ್ಲಿ ಮೊಬೈಲ್ ಬಳಕೆದಾರರಿಗೆ ಉಪಯೋಗ ಎಷ್ಟಿದೆಯೋ ಅಷ್ಟೇ ಸಮಸ್ಯೆಗಳು ಕೂಡ ಕಾಡುತ್ತಿದೆ. ಅದೆಷ್ಟೋ ವಂಚಕರ ಬಲೆಗೆ ಬಿದ್ದು ಬಳಕೆದಾರರು ಪರದಾಡುವಂತೆ ಆಗಿದೆ. ಹೌದು. ನಕಲಿ ಕರೆಗಳು, ನಕಲಿ ಮೆಸೇಜ್ (Fake call and messages) ಕಿರಿಕಿರಿಗೆ ಸೋತು ಹೋಗಿದ್ದಾರೆ. ಇದೀಗ ಇಂತಹ ಸಮಸ್ಯೆಗಳಿಗೆ ಬಿಗ್ ರಿಲೀಫ್ ದೊರಕಿದೆ.

ಟ್ರಾಯ್ ಇದೀಗ ಟೆಲಿಕಾಂ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಇನ್ಮುಂದೆ ಬಳಕೆದಾರರಿಗೆ ಯಾವುದೇ ಅನಗತ್ಯ ಕರೆ, ಅನಗತ್ಯ ಮೆಸೇಜ್ ಬರುವುದಿಲ್ಲ. ಯಾಕೆಂದರೆ ಫೇಕ್ ಕಾಲ್ ಹಾಗೂ ಮೆಸೇಜ್‌ಗೆ ಟ್ರಾಯ್ ಕಡಿವಾಣ ಹಾಕಿದ್ದು, ಮೇ.1 ರಿಂದ ಈ ಅಪ್ಡೇಟ್ ಬರಲಿದೆ.

ಮೇ.01 ರಿಂದ ಟೆಲಿಕಾಂ ಕಂಪನಿಗಳು ಅನಗತ್ಯ ಕಾಲ್ ಹಾಗೂ ಸಂದೇಶ ಫಿಲ್ಟರ್ ಮಾಡಲಿದೆ. ಟೆಲಿಕಾಂ ಕಂಪನಿಗಳಿಂದ ನೀಡಲಾಗಿರುವ ಎಲ್ಲಾ ಹೆಡ್ಡರ್‌(ನೋಂದಣಿಯಾದ ಬಳಿಕ ನೀಡಲಾಗುವ ವಿಶೇಷ ನಂಬರ್‌ ಹಾಗೂ ಅಕ್ಷರಗಳ ಗುಚ್ಛ)ಗಳು ಮತ್ತು ಮೆಸೇಜ್‌ ಟೆಂಪ್ಲೇಟ್‌ಗಳನ್ನು ಪರಿಶೀಲನೆ ನಡೆಸಲಿದೆ. ಜಿಯೋ, ಎರ್ಟೆಲ್ ಸೇರಿದಂತೆ ಟೆಲಿಕಾಂ ಕಂಪನಿಗಳು ಆರ್ಟಿಫೀಶಿಯಲ್ ಇಂಟೆಲೆಜೆನ್ಸಿ ಮೊರೆ ಹೋಗಿದ್ದು, ಅನಗತ್ಯ ಕರೆ ಹಾಗೂ ಸಂದೇಶ ನಿಯಂತ್ರಣಕ್ಕೆ AI ಮೂಲಕ ಕಾರ್ಯನಿರ್ವಹಿಸಲು ಮುಂದಾಗಿದೆ.

ಈಗಾಗಲೇ ಟೆಲಿಕಾಂ ಕಂಪನಿಗಳು ಆರ್ಟಿಫೀಶಿಯಲ್ ಇಂಟೆಲೆಜೆನ್ಸಿ ಮೂಲಕ ಫೇಕ್ ಹಾಗೂ ಹಾಗೂ ಫೇಕ್ ಮೆಸೇಜ್‌ಗೆ ಕಡಿವಾಣ ಹಾಕಲಿದೆ. ಮೊಬೈಲ್‌ಗಳಿಗೆ ಬರುವ ಅನಗತ್ಯ ಮೆಸೇಜ್‌ಗಳಿಗೆ ಕಡಿವಾಣ ಹಾಕುವಂತೆ ಟೆಲಿಕಾಂ ಆಪರೇಟರ್‌ಗಳಿಗೆ ನಿಯಂತ್ರಕ ಸಂಸ್ಥೆ ಟ್ರಾಯ್‌ ಗುರುವಾರ ಸೂಚನೆ ನೀಡಿದೆ.

ಹಾಗೆಯೇ, ಅಪರಿಚಿತ ನಂಬರ್‌, ಸ್ಪಾಯಮ್‌ ಅಥವಾ ಅನಪೇಕ್ಷಿತ ಕರೆಗಳ ಸಮಸ್ಯೆಯನ್ನು ನಿವಾರಿಸಲು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಹೊಸ ಮಾರ್ಗ ಕಂಡು ಹಿಡಿದಿದೆ. ಫೋನ್‌ನಲ್ಲಿ ಸೇವ್‌ ಆಗಿರದ ನಂಬರ್‌ಗಳಿಂದ ಯಾರಾದರೂ ಕರೆ ಮಾಡಿದರೆ ಕರೆ ಮಾಡಿದ ವ್ಯಕ್ತಿಯ ಹೆಸರು ನಿಮ್ಮ ಮೊಬೈಲ್‌ನಲ್ಲಿ ಕಂಡುಬರುವಂತೆ ಮಾಡುವ ಹೊಸ ಉಪಕ್ರಮವನ್ನು ಟ್ರಾಯ್‌ ಶೀಘ್ರವೇ ಜಾರಿಗೆ ತರಲು ಸಜ್ಜಾಗಿದೆ.ಟೆಲಿಕಾಂ ಆಪರೇಟರ್‌ ಬಳಿ ಲಭ್ಯವಿರುವ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ದಾಖಲೆಯನ್ನು ಆಧರಿಸಿ ಕರೆ ಮಾಡಿದವರ ಹೆಸರನ್ನು ತಿಳಿಯುವಂತೆ ಮಾಡಲಾಗುತ್ತದೆ.

 

ಇದನ್ನು ಓದಿ: French Fries: ಫ್ರೆಂಚ್ ಫ್ರೈಸ್ ಅತಿಹೆಚ್ಚು ಸೇವನೆ ಮಾಡುತ್ತೀರಾ? ಹಾಗಾದ್ರೆ ಎಚ್ಚರ ಆರೋಗ್ಯಕ್ಕೆ ಕುತ್ತು 

Leave A Reply

Your email address will not be published.