JDS Manifesto For Karnataka Election 2023: ಜೆಡಿಎಸ್‌ನಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ; ರೈತನನ್ನು ಮದುವೆಯಾದ್ರೆ 2 ಲಕ್ಷ, ವರ್ಷಕ್ಕೆ 5 ಸಿಲಿಂಡರ್‌ ಉಚಿತ ಸೇರಿ ಭರಪೂರ ಭರವಸೆ ನೀಡಿದ ದಳಪತಿಗಳು!

JDS Manifesto For Karnataka-Election: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಇನ್ನು ಕೇವಲ 13ದಿನ ಬಾಕಿ ಇದೆ. ಈ ವೇಳೆ ಜೆಡಿಎಸ್‌(JDS Manifesto For Karnataka-Election) ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಚುನಾವಣಾ ದೃಷ್ಟಿಯಿಂದ ಹಲವು ಭರಪೂರ ಯೋಜನೆಗಳನ್ನು ದಳಪತಿಗಳು ಘೋಷಣೆ ಮಾಡಿದ್ದಾರೆ. ಮುಸ್ಲಿಮರಿಗೆ ಮತ್ತೆ ಶೇ.4ರಷ್ಟು ಮೀಸಲಾತಿಯನ್ನು ನೀಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದು, ರೈತರ ಮಕ್ಕಳನ್ನ ಮದುವೆಯಾಗುವವರಿಗೆ 2 ಲಕ್ಷ ರೂ. ನೀಡುತ್ತೇವೆ, ವರ್ಷಕ್ಕೆ 5 ಸಿಲಿಂಡರ್‌ ಉಚಿತವಾಗಿ ನೀಡುತ್ತೇವೆ ಎಂದು ಹೇಳಿದ್ದಾರೆ.

ಹೌದು, ರಾಜ್ಯದಲ್ಲಿ ಈಗಾಗಲೇ 123 ಸ್ಥಾನ ಪಡೆದು ಸ್ವತಂತ್ರ ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳುತ್ತಿರುವ ಕುಮಾರಸ್ವಾಮಿ ಅವರು ತಮ್ಮ ಪಂಚರತ್ನ ಯಾತ್ರೆಯಲ್ಲಿ ರೈತರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಹಂಚಿಕೊಂಡಿರುವ ಹಾಗೂ ತಮ್ಮ ಮುಂದೆ ಇಟ್ಟಿರುವ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಅಂದಹಾಗೆ ಒಟ್ಟು 9 ವಿಭಾಗಗಳಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಜೆಡಿಎಸ್‌ ಬಿಡುಗಡೆ ಮಾಡಿದ್ದು, ಸಾಮಾಜಿಕ ಭದ್ರತೆಗಳು, ಪಂಚರತ್ನ ಯೋಜನೆ, ಕೈಗಾರಿಕಾ ಅಭಿವೃದ್ಧಿ, ಸಾರಿಗೆ ಮತ್ತು ಪ್ರವಾಸೋದ್ಯಮ, ಜಲಧಾರೆ, ರಸ್ತೆ ಅಭಿವೃದ್ಧಿ-ಸಂಪರ್ಕ ಸೇತುವೆಗಳು, ಇಂಧನ ವಲಯ, ಆಡಳಿತ ಸುಧಾರಣೆ, ಕೃಷಿ ಮತ್ತು ಹೈನುಗಾರಿಕೆಯ ವಿಭಾಗದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ.

ಜೆಡಿಎಸ್‌ ಪ್ರಣಾಳಿಕೆಯ ಪ್ರಮುಖ ಅಂಶಗಳು
• ರಾಜ್ಯ ಸರ್ಕಾರ ರದ್ದು ಮಾಡಿರುವ ಮುಸ್ಲಿಮರ ಶೇ.4ರಷ್ಟು ಮೀಸಲಾತಿ ಮರು ಜಾರಿ.
• ಕಲಾವಿದರ ಮಾಸಾಶನವನ್ನು 2 ಸಾವಿರ ರೂ.ನಿಂದ 4 ಸಾವಿರಕ್ಕೆ ಏರಿಕೆ.
• ಆರಕ್ಷಕರಿಗೆ ಅಭಯ, ನ್ಯಾಯಯುತ ವೇತನ ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು
• ಪಂಚರತ್ನ ಯೋಜನೆಗಳ ಜಾರಿ.
• ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌
ಡಿಗ್ರಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಸ್ಕೂಟರ್‌ ವಿತರಣೆ.
• ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮೆಡಿಕಲ್‌, ಇಂಜಿನಿಯರಿಂಗ್‌ಗೆ ಉಚಿತ ಪ್ರವೇಶ.
• ಕೃಷಿ ಪಂಪಸೆಟ್‌ಗೆ 24/7 ಉಚಿತ ಗುಣಮಟ್ಟದ ವಿದ್ಯುತ್‌ ಸೌಲಭ್ಯ ಮತ್ತು ಸೋಲಾರ್‌ ಪಂಪ್‌ಗಳ ಅಳವಡಿಕೆ.

• ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಪ್ರತಿಎಕರೆಗೆ 10,000 ರೂ. ಸಹಾಯ ಧನ.
• ರೈತ ಯುವಕರನ್ನು ಮದುವೆ ಆಗುವ ಯುವತಿಯರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ.
• ಪ್ರತಿ ಕೃಷಿ ಕಾರ್ಮಿಕ ಕುಟುಂಬಕ್ಕೆ ಮಾಸಿಕ 2000 ರೂ. ಸಹಾಯಧನ.
• ಪ್ರತಿ ಆಟೋ ಚಾಲಕನಿಗೆ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ.
• ನೋಂದಾಯಿತ ಖಾಸಗಿ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಮಾಸಿಕ 2 ಸಾವಿರ ರೂ. ಸಹಾಯಧನ
• ಹಿರಿಯ ನಾಗರೀಕರ ಮಾಸಾಶನವನ್ನು 1,200 ರೂ.ನಿಂದ 5000 ರೂ.ಗಳಿಗೆ ಏರಿಕೆ.
• ವೃತ್ತಿನಿರತ ವಕೀಲರ ರಕ್ಷಣೆಗೆ ಕಾಯಿದೆ, ನೂತನವಾಗಿ ನೋಂದಾಯಿತ ವಕೀಲರ ಮಾಸಿಕ ಭತ್ಯೆ 2 ಸಾವಿರದಿಂದ 3 ಸಾವಿರಕ್ಕೆ ಏರಿಕೆ.

• ಗರ್ಭಿಣಿ ತಾಯಂದರಿಗೆ ಅಗತ್ಯತೆ ಪೂರೈಕೆಗೆ 6 ತಿಂಗಳ ಕಾಲ 6,000 ರೂ. ಭತ್ಯೆ.
• ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲಮನ್ನಾ
ವಿಧವಾ ವೇತನ 900 ರೂ.ನಿಂದ 2,500 ರೂ.ಗಳಿಗೆ ಹೆಚ್ಚಳ.
• ವರ್ಷಕ್ಕೆ 5 ಅಡುಗೆ ಅನಿಲ ಸಿಲಿಂಡರ್ ಉಚಿತ
ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕರಿಗೆ ಮತ್ತು ಮಿನಿ ಅಂಗನವಾಡಿ ಕರ‍್ಯರ‍್ತೆಯರಿಗೆ ರೂ. 5000 ವರೆಗೆ ಹೆಚ್ಚಿನ ವೇತನ.
• ಕನಿಷ್ಟ 15 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಕಾರ್ಯಕರ್ತೆಯರಿಗೆ ಪಿಂಚಣಿ.

ಪ್ರಣಾಳಿಕೆ ಘೋಷಣೆಯಾದ ಬೆನ್ನಲ್ಲೇ ಮಾತನಾಡಿದ ಎಚ್ಡಿಕೆ ‘ಈ ಹಿಂದೆ ನಾನು ಮುಖ್ಯಮಂತ್ರಿಯಾದರೆ ರೈತರ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿದಂತೆ, ಸಾಲ ಮನ್ನಾ ಮಾಡಿದ್ದೆನು. ಜೊತೆಗೆ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಇದೇ ಅಧಿಕಾರಿಗಳನ್ನು ಇಟ್ಟುಕೊಂಡು 25 ಸಾವಿರ ಸಾಲಮನ್ನ ಮಾಡಿದೆ. ರಾಜ್ಯದಲ್ಲಿ ರೆವಿನ್ಯೂ ಇಲಾಖೆ ಒಂದೆ ಅಲ್ಲ, ಆರೋಗ್ಯ ಇಲಾಖೆ ಸೇರಿ ಹಲವಾರು ಇಲಾಖೆಯಲ್ಲಿ ಸಮಸ್ಯೆ ಇದೆ. ಮೆಡಿಕಲ್ ಕಾಲೇಜು ಅರ್ಜಿ ಹಾಕೋಕೆ ಎಷ್ಟು ಹಣ ಪಡೆದರು ಎನ್ನುವುದು ಕೂಡ ನನಗೆ ಮಾಹಿತಿ ಇದೆ. ಇದೆಲ್ಲದಕ್ಕೂ ಅಂತಿಮ ಇತಿಶ್ರಿ ಎಳೆಯಬೇಕು ಅಂತಲೇ ಸ್ವತಂತ್ರ ಸರ್ಕಾರ ಕೇಳ್ತಾ ಇರೋದು ಎಂದು ಹೇಳಿದರು.

 

ಇದನ್ನು ಓದಿ: Mobile phone: ಓದುತ್ತಿರುವ ಮಕ್ಕಳಿಗೆ ಮೊಬೈಲ್ ಫೋನ್ ನೀಡುವುದು ಸೂಕ್ತವೇ? ಪೋಷಕರೇ ಈ ವಿಚಾರಗಳನ್ನು ತಿಳ್ಕೊಳ್ಳಿ 

Leave A Reply

Your email address will not be published.