Jagadish shettar: ಈ ಬಾರಿ ಚುನಾವಣೆಯಲ್ಲಿ ಜಗದೀಶ್‌ ಶೆಟ್ಟರ್‌ ಗೆದ್ದೇ ಗೆಲ್ಲುತ್ತಾರೆ; ರಕ್ತದಲ್ಲಿ ಪತ್ರ ಬರೆದ ಅಭಿಮಾನಿ? ಏನಿದೆ ಗೊತ್ತಾ?

Share the Article

Jagadish shettar: ಹುಬ್ಬಳ್ಳಿ: ವಿಧಾನಸಭೆ ಚುನಾವಣೆ ಇನ್ನೇನು ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ರಂಗೇರುತ್ತಿದೆ. ಈಗಾಗಲೇ ಮೂರು ಪಕ್ಷದ ನಾಯಕರು ಅಖಾಡಕ್ಕೆ ಇಳಿದಿದ್ದು, ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಮತದಾರರನ್ನು ಸೆಳೆಯಲು ಮೂರು ಪಕ್ಷದ ನಾಯಕರು ನಾನಾ ರಣತಂತ್ರ ರೂಪಿಸುತ್ತಿದ್ದಾರೆ. ಈಗಾಗಲೇ ಮತದಾರರಿಗೆ ಆಮಿಷಕ್ಕಾಗಿ ಮದ್ಯ, ಹಣ, ಸೀರೆ, ಕುಕ್ಕರ್‌ ಗಳನ್ನು ಹಂಚಿದ್ದಾರೆ. ಹೀಗಾಗಿ ಚುನಾವಣೆವರೆಗೆ ಬಹುತೇಕ ಕಡೆಗಳಲ್ಲಿ ಚೆಕ್‌ ಪೋಸ್ಟ್‌ ತೆರೆಯಲಾಗಿದೆ.

ಇದೀಗ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಜಗದೀಶ್‌ ಶೆಟ್ಟರ್‌ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ತಾರೆ ಎಂದು ಅಭಿಮಾನಿಯೊಬ್ಬರು ರಕ್ತದಲ್ಲಿ ಪತ್ರ ಬರೆಯುವ ಮೂಲಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ. ಹೌದು ಕಾಂಗ್ರೆಸ್‌ ಕಾರ್ಯಕರ್ತ ಮಂಜುನಾಥ್‌ ಎಂಬಾತ ಚುನಾವಣೆಯಲ್ಲಿ ಜಗದೀಶ್‌ ಶೆಟ್ಟರ್‌ (Jagadish shettar)  ಗೆಲ್ಲುತ್ತಾರೆ ಎಂದು ರಕ್ತದಲ್ಲಿ ಪತ್ರದಲ್ಲಿ ಮೂಲಕ ಬರೆದಿದ್ದು, ಎಲ್ಲರ ಗಮನಸೆಳೆದಿದೆ.

ಪತ್ರದಲ್ಲೇನಿದೆ?
ಮಾನ್ಯ ಜಗದೀಶ್‌ ಶೆಟ್ಟರ್‌ 100ಕ್ಕೆ ನೂರರಷ್ಟು ಗೆದ್ದೆ ಗೆಲ್ಲುತ್ತಾರೆ. ನಾನು ರಕ್ತದಲ್ಲಿ ಬರೆದುಕೊಡುತ್ತೇನೆ. ಈ ಬಾರಿ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಬರುತ್ತದೆ. ಜೈ ಕಾಂಗ್ರೆಸ್‌.. ಎಂದು ಶೆಟ್ಟರ್‌ ಅಭಿಮಾನಿ ರಕ್ತದಲ್ಲಿ ಬರೆದಿದ್ದಾರೆ.

ಇತ್ತೀಚೆಗೆ ಜಗದೀಶ್‌ ಶೆಟ್ಟರ್‌ ಬಿಜೆಪಿಗೆ ರಾಜೀನಾಮೆ ಸಲ್ಲಿಸಿ, ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಚುನಾವಣೆ ಎದುರಿಸುತ್ತಿರುವ ಮಾಜಿ ಸಿಎಂ ಜಗದೀಶ್‌ ಶೆಟ್ಟರ್ ಸೋಲುತ್ತಾರೆ ಎಂಬುದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದರು. ಹೀಗಾಗಿ ಜಗದೀಶ್‌ ಶೆಟ್ಟರ್‌ ಸೋಲಿಸಲು ಬಿಜೆಪಿಯವರು ಪಣ ತೊಟ್ಟಿದ್ದಾರೆ. ಎಲ್ಲವನ್ನೂ ಪಡೆದು ಈಗ ಪಕ್ಷ ಬಿಟ್ಟು ಹೋಗಿದ್ದಾರೆ. ನಂಬಿಕೆ ದ್ರೋಹ ಮಾಡಿದ್ದಾರೆ. ಅವರನ್ನು ಸೋಲಿಸುವ ಹೊಣೆ ನನ್ನದು ಎಂದು ಶೆಟ್ಟರ್‌ ವಿರುದ್ಧ ಯಡಿಯೂರಪ್ಪ ಕುಟುಕಿದ್ದರು.

ಇದನ್ನೂ ಓದಿ: Kadaba: ಕಡಬದಲ್ಲಿ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ | ಸುಳ್ಯದಲ್ಲಿ ಮತ್ತೊಮ್ಮೆ ಅತ್ಯಧಿಕ ಅಂತರಗಳಿಂದ ಬಿಜೆಪಿಯನ್ನು ಗೆಲ್ಲಿಸೋಣ‌‌ : ಎ ವಿ ತೀರ್ಥರಾಮ

Leave A Reply