Celebrities: ಈ ಖ್ಯಾತ ಸೆಲೆಬ್ರಿಟಿಗಳಿಗಿದೆ ಕೆಲ ಕೆಟ್ಟ ಸ್ವಭಾವಗಳು !!

Celebrities: ಪ್ರತಿಯೊಬ್ಬ ವ್ಯಕ್ತಿಯ ನಡವಳಿಕೆಗಳು ವಿಭಿನ್ನವಾಗಿರುತ್ತದೆ. ಅದರಲ್ಲೂ ಸ್ಟಾರ್ ಸೆಲೆಬ್ರಿಟಿಗಳ (celebrities) ನಡವಳಿಕೆಯಲ್ಲಿ ಬಹಳ ವ್ಯತ್ಯಾಸ ಕಾಣುತ್ತದೆ. ಕೆಲವರು ಮೊದಲಿದ್ದ ಹಾಗೆ ಮುಗ್ಧತೆ, ಸಹಾನೂಭೂತಿಯಿಂದ ಇದ್ದರೆ, ಇನ್ನೂ ಕೆಲವರು ಸಿನಿಮಾ ಹಿಟ್ ಆದಂತೆ ನಡವಳಿಕೆಯಲ್ಲಿ ಆಕಾಶ- ಭೂಮಿಯಷ್ಟು ಬದಲಾವಣೆ ಇರುತ್ತದೆ. ಹಣ ಗಳಿಸಿ, ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಂತರ ಸೆಲೆಬ್ರಿಟಿಗಳ ನಡವಳಿಕೆಯೇ ಬದಲಾಗುತ್ತದೆ. ಅವರ ಕೆಲವೊಂದು ಸ್ವಭಾವಗಳು ಜನರಿಗೆ ಇಷ್ಟ ಆಗೋಲ್ಲ. ಯಾವ ಸೆಲೆಬ್ರಿಟಿಗಳ? ಹಾಗೂ ಯಾವ ಸ್ವಭಾವ? ತಿಳಿಯೋಣ.

ಬಾಲಿವುಡ್​ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ (Aishwarya Rai) ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ಸೈ ಎನಿಸಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಸದಾ ಸುದ್ಧಿಯಲ್ಲಿರುತ್ತಾರೆ. ಸದ್ಯ ಐಶ್ವರ್ಯಾ ರೈ ಕೆಲವೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರು ಕಠೋರವಾಗಿ ನಡೆದುಕೊಳ್ಳುತ್ತಾರೆ. ಅಭಿಮಾನಿಗಳ ಜೊತೆ ಅವರು ನಡೆದುಕೊಳ್ಳುವ ರೀತಿ ಕೆಲವರಿಗೆ ಇಷ್ಟ ಆಗುವುದಿಲ್ಲ.

ಕರೀನಾ ಕಪೂರ್ (kareena kapoor) ಸಹಕಲಾವಿದರ ಬಗ್ಗೆ ಕೆಟ್ಟ ಕಮೆಂಟ್ ಹಾಕುತ್ತಾರೆ. ಹಾಗಾಗಿ ಅವರು ಹಲವರಿಗೆ ಇಷ್ಟ ಆಗುವುದಿಲ್ಲ. ಅಮಿತಾಭ್ ಬಚ್ಚನ್ (amithab bachchan) ಪತ್ನಿ ಜಯಾ ಬಚ್ಚನ್​ಗೆ (Jaya bachchan) ಪಾಪರಾಜಿಗಳು ಮುತ್ತಿಕೊಂಡರೆ ಇಷ್ಟ ಆಗುವುದಿಲ್ಲ. ಅವರು ಸಿಟ್ಟಾಗುತ್ತಾರೆ.

ಬಾಲಿವುಡ್​ನ ಬಹು ಬೇಡಿಕೆಯ ನಟ ರಣಬೀರ್ ಕಪೂರ್ (Ranbir Kapoor). ಹಲವು ಹಿಟ್ ಸಿನಿಮಾ ನೀಡಿದ್ದು, ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ನಟಿ ಆಲಿಯಾಳನ್ನು (actress Alia) ವಿವಾಹವಾಗಿದ್ದು, ಇವರಿಗೆ ಮುದ್ದಾದ ಹೆಣ್ಣು ಮಗಳಿದ್ದಾಳೆ. ರಣಬೀರ್​ಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಸಣ್ಣ ಕಿರಿಕಿರಿ ಆದರೂ ಸಿಟ್ಟಾಗುತ್ತಾರೆ.

ಕಂಗನಾ ರಣಾವತ್ (kangana ranavath) ನಿರ್ದೇಶಕಿ, ನಿರ್ಮಾಪಕಿ, ನಟಿಯೂ ಹೌದು. ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದ ಕಂಗನಾ ಸಂಬಂಧ ಇಲ್ಲದ ವಿವಾದಗಳಲ್ಲಿ ಮೂಗು ತೂರಿಸಲು ಹೋಗುತ್ತಾರೆ. ಅವರಿಗೆ ಬಾಲಿವುಡ್​ನಲ್ಲಿ ಬಹುತೇಕರನ್ನು ಕಂಡರೆ ಆಗುವುದಿಲ್ಲ ಎಂದು ಹೇಳಲಾಗಿದೆ.

ಕಾಫಿ ವಿತ್ ಕರಣ್ (coffee with Karan) ಶೋ ಮೂಲಕ ಜನರ ಮೆಚ್ಚುಗೆ ಗಳಿಸಿರುವ ಕರಣ್ (Karan) ಬಾಲಿವುಡ್​ನ ವಿವಾದಾತ್ಮಕ ನಿರ್ಮಾಪಕರಲ್ಲಿ ಒಬ್ಬರು ಎನ್ನಲಾಗಿದೆ‌‌. ಇವರು ಇಷ್ಟ ಇಲ್ಲದವರನ್ನು ಇಂಡಸ್ಟ್ರಿಯಿಂದ ಹೊರ ಹಾಕಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಾರೆ ಎಂದು ಹೇಳಲಾಗಿದೆ.

ಖ್ಯಾತ ಸೆಲೆಬ್ರಿಟಿ ಅಮಿರ್ ಖಾನ್ (Aamir Khan) ಸ್ನಾನ ಮಾಡಲು ಇಷ್ಟಪಡುವುದಿಲ್ಲವಂತೆ. ಈ ವಿಷಯವನ್ನು ಅವರ ಪತ್ನಿ ಕಿರಣ್ ರಾವ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಮಿರ್ ಖಾನ್ ನ ಈ ಹವ್ಯಾಸ ಪತ್ನಿಗೆ ಇಷ್ಟವಿಲ್ಲ ಎಂದೂ ಹೇಳಿದ್ದಾರೆ.

ಸಲ್ಮಾನ್ ಖಾನ್ (Salman Khan) ಬಾಲಿವುಡ್​ನ ಬೇಡಿಕೆಯ ಹೀರೋ. ಆದರೆ, ಇತ್ತೀಚೆಗೆ ಕಡಿಮೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸದ್ಯ ಕಿಸ್ ಕಾ ಬಾಯ್ ಕಿಸ್ ಟಿ ಜಾನ್ (kis ka bhai kis ki jaan) ಚಿತ್ರದಲ್ಲಿ ಪೂಜಾ ಹೆಗ್ಡೆಗೆ (Pooja Hegde) ನಾಯಕನಾಗಿ ನಟಿಸಿದ್ದಾರೆ. ಆದರೆಲ ಈ ನಟ ಕೆಲವು ಕಡೆಗಳಲ್ಲಿ ಸಿಟ್ಟಿನಿಂದ ನಡೆದುಕೊಳ್ಳುತ್ತಾರೆ. ಅವರು ರಿವೇಂಜ್ ತೀರಿಸಿಕೊಳ್ಳುವ ಗುಣವನ್ನು ಹೊಂದಿದ್ದಾರೆ ಎನ್ನಲಾಗಿದೆ. ಇದು ಹಲವರಿಗೆ ಇಷ್ಟವಾಗುವುದಿಲ್ಲ.

ಇದನ್ನೂ ಓದಿ: Lokayukta Raid: ಈ BBMP ಅಧಿಕಾರಿ ಬಳಿ ಇವೆ 400 ಬ್ಲೇಸರ್, ಅವುಗಳ ಬೆಲೆ ಕೇಳಿದ್ರೆ ಬೆವೆತು ಹೋಗ್ತೀರಾ !

Leave A Reply

Your email address will not be published.