White hair turn black tips: ಬಿಳಿ ಕೂದಲ ಚಿಂತೆಯೇ? ತೆಂಗಿನೆಣ್ಣೆಗೆ ಈ ಒಂದು ವಸ್ತು ಬೆರೆಸಿ ನೋಡಿ ಕೂದಲು ಕಪ್ಪಾಗುವುದು ಖಂಡಿತ!!!

White hair turn Black tips: ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು (white hair) ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಚಿಗುರು ಮೀಸೆಯ ಯುವಕರ ಕೂದಲು ಕೂಡ ಬೆಳ್ಳಗಾಗುತ್ತಿದೆ. ಹಲವರಲ್ಲಿ ಟೆನ್ಶನ್ ನಿಂದಾಗಿಯೂ ಬಿಳಿ ಕೂದಲಿನ ಸಮಸ್ಯೆ (white hair problem) ಉಂಟಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಬಿಳಿ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಕಲರಿಂಗ್​ ಪೌಡರ್​ಗಳನ್ನು ಬಳಸುತ್ತಾರೆ. ಅನೇಕರು ಕೂದಲನ್ನು ಕಪ್ಪಗಾಗಿಸಲು (White hair turn Black tips) ಕೆಮಿಕಲ್​ ಮಿಶ್ರಿತ ಹೇರ್​ ಕಲರ್​ಗಳನ್ನು ತಲೆಗೂದಲಿಗೆ ಬಳಿದುಕೊಳ್ಳುತ್ತಾರೆ.

ಆದರೆ, ಈ ಕೆಮಿಕಲ್ ಮಿಶ್ರಿತ ಕಲರಿಂಗ್ ನಿಂದ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುವುದಿಲ್ಲ. ಅಲ್ಲದೆ, ಅಂಗಡಿಗಳಲ್ಲಿ ಸಿಗುವ ರಾಸಾಯನಿಕ ಕಲರ್, ಪೌಡರ್ ಗಳಿಂದ ಕೂದಲು ಉದುರುವಂತಹ ಸಮಸ್ಯೆಗಳು ಉದ್ಭವಿಸುತ್ತದೆ. ಅದೂ ಸಣ್ಣ ಪ್ರಾಯದಲ್ಲಿ ಕೆಮಿಕಲ್ ಯುಕ್ತ ಬಣ್ಣ ಹಾಕಿಕೊಂಡಲ್ಲಿ ಕೂದಲ ಬುಡಕ್ಕೆ ಶಾಶ್ವತ ಡ್ಯಾಮೇಜ್ ಆಗಿ ಮತ್ತಷ್ಟು ಕೂದಲು ಬೆಳ್ಳಗಾಗುವ ಸಂಭವ ಹೆಚ್ಚು.

ಇನ್ನು ಕೂದಲು ಬೆಳ್ಳಗಾಗಲು ಕಾರಣ ಏನು ಗೊತ್ತಾ?

ಮುಖ್ಯವಾಗಿ ಮೆಲನಿನ್ ಉತ್ಪಾದಿಸುವ ಕಾಂಡಕೋಶಗಳು ಸರಿಯಾಗಿ ಕೆಲಸ ಮಾಡದ ಕಾರಣ ಕೂದಲು ಬೆಳ್ಳಗಾಗುತ್ತದೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಪ್ರೋಟೀನ್ ಕೊರತೆ ಮತ್ತು ಕಬ್ಬಿಣಾಂಶದ ಕೊರತೆಯಿಂದಲೂ ಕೂದಲು ಬೆಳ್ಳಗಾಗುತ್ತವೆ ಎಂದು ಇತರ ಅಧ್ಯಯನಗಳು ಹೇಳಿದೆ. ಬಿಳಿ ಕೂದಲು ಕಪ್ಪಾಗಲು ಮನೆಮದ್ದು ಇಲ್ವಾ? ಇಲ್ಲಿದೆ ನೋಡಿ. ತೆಂಗಿನೆಣ್ಣೆಗೆ ಈ ಒಂದು ವಸ್ತು ಬೆರೆಸಿದರೆ ಸಾಕು ಬಿಳಿ ಕೂದಲಿನ ಸಮಸ್ಯೆ ನಿವಾರಣೆ ಆಗುತ್ತದೆ.

ತೆಂಗಿನೆಣ್ಣೆ ಮತ್ತು ನಿಂಬೆರಸ:
ತೆಂಗಿನೆಣ್ಣೆ (coconut oil) ಹೆಚ್ಚಾಗಿ ಎಲ್ಲಾರೂ ಕೂದಲಿಗೆ ಹಚ್ಚುತ್ತಾರೆ. ಇದು ಕೂದಲನ್ನು ಕಪ್ಪಾಗಿಸುವುದರ ಜೊತೆಗೆ ದೃಡ ಮತ್ತು ಬೆಳವಣಿಗೆಗೆ ಸಹಕಾರಿಯಾಗಿದೆ. ಬಿಳಿ ಕೂದಲು ಕಪ್ಪಾಗಲು ತೆಂಗಿನೆಣ್ಣೆಗೆ ನಿಂಬೆ ರಸವನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಬೇಕು. ಪ್ರತಿದಿನ ಹೀಗೆ ಮಾಡಿದರೆ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಅಲ್ಲದೆ, ಈ ಮಿಶ್ರಣ ಕೂದಲಿಗೆ ಉತ್ತಮ ಪೋಷಣೆಯನ್ನು ಕೂಡಾ ನೀಡುತ್ತದೆ. ಆದರೆ ತೆಂಗಿನ ಎಣ್ಣೆ ಮತ್ತು ಲಿಂಬೆ ರಸದ ಪ್ರಮಾಣವು 3:1 ಅನುಪಾತದಲ್ಲಿ ಇರಲಿ. ಅಂದರೆ, 3 ಚಮಚ ತೆಂಗಿನ ಎಣ್ಣೆಗೆ 1 ಚಮಚ ಲಿಂಬೆ ರಸ ಸಾಕು.

ತೆಂಗಿನೆಣ್ಣೆ ಮತ್ತು ನೆಲ್ಲಿಕಾಯಿ :
ತೆಂಗಿನೆಣ್ಣೆ ಮತ್ತು ನೆಲ್ಲಿಕಾಯಿ (gooseberry) ಮಿಶ್ರಣ ಬಿಳಿ ಕೂದಲಿಗೆ ಉತ್ತಮ ಪರಿಹಾರ. ನೆಲ್ಲಿಕಾಯಿ ಹಲವಾರು ರೀತಿಯ ಪೋಷಕಾಂಶ ಮತ್ತು ಆಯುರ್ವೇದ ಗುಣಗಳನ್ನು ಹೊಂದಿವೆ. ಅದೇ ರೀತಿ ನೆಲ್ಲಿಕಾಯಿ ನಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ನೆಲ್ಲಿಕಾಯಿಯಲ್ಲಿ ಕಬ್ಬಿಣ ಮತ್ತು ವಿಟಮಿನ್ ಸಿ ಹೇರಳವಾಗಿದ್ದು, ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಇವೆರಡೂ ಮಾಂತ್ರಿಕ ಶಕ್ತಿಯುಳ್ಳ ಮನೆಮದ್ದುಗಳು. ಇವುಗಳ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ.

ತಯಾರಿಸುವ ವಿಧಾನ: 4 ಚಮಚ ತೆಂಗಿನ ಎಣ್ಣೆಯಲ್ಲಿ 2 ರಿಂದ 3 ಚಮಚ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ. ಈ ಮಿಶ್ರಣ ತಣ್ಣಗಾದ ನಂತರ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ. ರಾತ್ರಿ ಹಚ್ಚಿ ಬೆಳಗ್ಗೆ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ. ಕೆಲವೇ ದಿನಗಳಲ್ಲಿ ನಿಮ್ಮ ಬಿಳಿ ಕೂದಲು ಕಪ್ಪಾಗಾಗಲಿದೆ‌. ಇದರ ಜತೆಗೆ ಪೌಷ್ಠಿಕ ಅನ್ನಿಸುವ ಆಹಾರ ಸೇವಿಸಿರಿ. ವಿಟಮಿನ್ ಡಿ ದೇಹಕ್ಕೆ ಸಿಗುವಂತಾಗಲು ಮತ್ತು ಮೆಲನಿನ್ ಉತ್ತೇಜಿತವಾಗಲು ಬಿಸಿಲಿಗೆ ಅಡ್ಡಾಡಿ. ಪೊದೆ ಸೊಂಪು ಕೂದಲು ನಿಮ್ಮದಾಗಲಿ.

ಇದನ್ನೂ ಓದಿ: Coffee: ಇಲ್ನೋಡಿ ಹೊಸ ಸುದ್ದಿ, ಕಾಫಿ ಕುಡಿದರೆ ಕಪ್ಪಗಾಗ್ತೀವ ಇಲ್ವಾ? ಇಂಟೆರೆಸ್ಟಿಂಗ್‌ ಮಾಹಿತಿ ಇಲ್ಲಿದೆ!

Leave A Reply

Your email address will not be published.