Karnataka Assembly Polls: ‘ಏನ್ ಬಸೂ, ಹೆಂಗೈತೆ ಕ್ಯಾ೦ಪೇನ್ ?’ ಸಿಎಂ ಬೆನ್ನಿಗೆ ಗುದ್ದಿ ಸಿದ್ದು ತಮಾಷಿ, ಬೊಮ್ಮಾಯಿ ಬೊಂಬಾಟ್ ಉತ್ರ ಕೇಳಿ ಖರ್ಗೆ ತಕ್ಷಣಕ್ಕೆ ಖುಷಿ !

Bommai met Siddaramaiah : ಚುನಾವಣಾ ಸಂದರ್ಭದಲ್ಲಿ ಎದುರಾಳಿಗಳ ಮೇಲೆ ಬಿರುಸು ಬಾಣ ಚಕ್ರ ಮುಂತಾದುವುಗಳನ್ನು ಪರಸ್ಪರ ಅಸ್ತನ ಪ್ರತ್ಯಸ್ತರಗಳಾಗಿ ಬಳಸಿಕೊಂಡು ಹೋರಾಡುತ್ತಿರುವ ಪಕ್ಷಗಳ ಪ್ರಮುಖ ನಾಯಕರು ಪರಸ್ಪರ ಎದುರಾದರೆ ಹೇಗೆ ವರ್ತಿಸಬಹುದು. ಜಲಸಾಮಾನ್ಯರು ಅಂದುಕೊಂಡಂತೆ ಅವರೇನು ಎದುರಿಗೆ ಸಿಕ್ಕಾಗ ಕಚ್ಚಾಟಕ್ಕೆ ಇಳಿಯಲ್ಲ. ಪರಸ್ಪರ ದೂಷಿಸಿಕೊಳ್ಳುವುದು ಬಿಡಿ, ಮುಖ ಕೂಡಾ ಸಿಂಡರಿಸಿ ಮುಖ ಅತ್ಲಾಗೆ ತಿರುಗಿಸಿಕೊಳ್ಳುವುದಿಲ್ಲ. ಮತ್ತೆ ಅವರು ಹೇಗಾಡುತ್ತಾರೆ ಗೊತ್ತ ? ಅಂತಹ ಒಂದು ಸನ್ನಿವೇಶ ಇವತ್ತು ಬಹಳ ಅಪರೂಪಕ್ಕೆ ಎದುರಾಗಿತ್ತು.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆದಿದ್ದು ಅದೇ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಈ ಮೂರೂ ಜನ ಏಕಕಾಲದಲ್ಲಿ ವಿಮಾನ ನಿಲ್ದಾಣದಲ್ಲಿ ಸಂಗಮವಾಗಿದ್ದಾರೆ (Bommai met Siddaramaiah ). ಜನ ಅದನ್ನು ತ್ರಿವೇಣಿ ಸಂಗಮ ಅಂತ ಕೂಡಾ ಕರೆದದ್ದಿದೆ.

ಅಲ್ಲಿ ಅವರು ಆಕಸ್ಮಿಕವಾಗಿ ಮುಖಾಮುಖಿಯಾದಾಗ ಆತ್ಮೀಯವಾಗಿ ಕೈಕುಲುಕಿ ಹರಟಿದ್ದಾರೆ. ಈ ಸಂದರ್ಭ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಗಲಿಗೆ ಎರಡು ಏಟು ಕೊಟ್ಟು ” ಏನ್ ಬಸೂ, ಹೆಂಗೈತೆ ಕ್ಯಾ0ಪೇನು ” ಎಂದು ತಮಾಷಿ ಮಾಡಿದ್ದಾರೆ. ” ನೋಡಣ್ಣ, ಹಿಂಗೈತೆ. ಈ ಸಲ ಕಪ್ಪು. ನಮ್ಡೆ ಬಿಡಣ್ಣ” ಎಂದು ಡೈಲಾಗು ಹೊಡೆದಿದ್ದಾರೆ. ಯಾವ ಜೋಕಿಗೂ ನಗದ ಮಲ್ಲಿಕಾರ್ಜುನ ಖರ್ಗೆಯವರ ಮುಖದಲ್ಲಿ ಕೂಡಾ ಕಿರು ನಗೆ ಕ್ಷಣಗಳ ಕಾಲ ಇಣುಕಿದೆ.

ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಿಂದ ಬಂದಿಳಿದಿದ್ದರು. ನಂತರ ಚಿಕ್ಕೋಡಿಯತ್ತ ತೆರಳಿದರು. ಬಸವರಾಜ ಬೊಮ್ಮಾಯಿ ಹುಕ್ಕೇರಿ ತಾಲ್ಲೂಕಿನ ಯಮಕನಮರಡಿಯತ್ತ ತೆರಳಿದರು. ಮಧ್ಯೆ ಮಾಜಿ ಸಚಿವ ಡಿ.ಬಿ.ಇನಾಮದಾರ ಅವರಿಗೆ ಅಂತಿಮ ನಮನ ಸಲ್ಲಿಸಿ ನೇಗಿನಹಾಳದಿಂದ ಆಗಮಿಸಿದ ಸಿದ್ದರಾಮಯ್ಯ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

ಇದನ್ನೂ ಓದಿ: BS Yediyurappa: ನಾನು ರಕ್ತದಲ್ಲಿ ಬರೆದು ಕೊಡುವೆ, ಆತ ವಿನ್ ಆಗಲ್ಲ: ಯಡಿಯೂರಪ್ಪ ಕೋಪದಿಂದ ಹೀಗಂದದ್ದು ಯಾರ ಬಗ್ಗೆ ?

Leave A Reply

Your email address will not be published.