Bollywood: ಅಂಡರ್ ವರ್ಲ್ಡ್ ಡಾನ್​ಗಳ ಮೋಡಿಗೆ ಸಿಲುಕಿ ಭವಿಷ್ಯ ಕಳಕೊಂಡ ಖ್ಯಾತ ಬಾಲಿವುಡ್ ಬ್ಯೂಟಿಗಳಿವರು! ಮಾಫಿಯಾಗೆ ಸಿಲುಕಿದ ಇವರೆಲ್ಲರ ಕಥೆ ಏನಾಯ್ತು?

Bollywood Actress: ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಮಿಂಚುತ್ತಿರೋ ಸಂದರವಾದ ನಟಿಯರೆಲ್ಲ ದೊಡ್ಡ ದೊಡ್ಡ ನಟರೊಂದಿಗೋ ಅಥವಾ ಶ್ರೀಮಂತ ಉದ್ಯಮಿಗಳ ಜೊತೆಗೋ ವಿವಾಹವಾಗಿ ನೆಮ್ಮದಿಯಾಗಿ ಇರುತ್ತಾರೆ ಎಂದು ಹಲವರು ಭಾವಿಸುತ್ತಾರೆ. ಅಂತೆಯೇ ಹಲವರು ಸಿನಿಮಾ ಬ್ಯೂಟಿಗಳು ಆ ರೀತಿಯ ಚಂದದ ಬದುಕನ್ನು ಕಂಡಿದ್ದಾರೆ. ಆದರೆ ಇದರ ನಡುವೆ ಭೂಗತ ಲೋಕದ ಮಾಫಿಯಾಗೆ ಬಿದ್ದ ಖ್ಯಾತ ನಟಿಯರೂ (Bollywood Actress) ಇದ್ದಾರೆ.

ಹೌದು, ಬಾಲಿವುಡ್​ ಭೂಗತಪಾತಕಿಗಳ (Underworld) ಕೈಯಲ್ಲಿ ಕುಣಿಯುತ್ತಿದೆ ಎಂಬ ಮಾತು ಇಂದು – ನಿನ್ನೆಯದ್ದಲ್ಲ. ಭೂಗತ ಜಗತ್ತು ಮತ್ತು ಗ್ಲಾಮರ್ ನಡುವಣ ಸಂಬಂಧ ಜಗಜ್ಜಾಹೀರವಾಗಿದೆ. ಅಂತೆಯೇ ಹಲವು ಆಸೆ ಆಕಾಂಕ್ಷೆಗಳಿಗೆ ಮರುಳಾಗಿ ಭೂಗತ ಪಾತಕಿಗಳ ಮೋಡಿಗೆ ಸಿಲುಕಿ ಭವಿಷ್ಯ ಕಳಕೊಂಡಿದ್ದಾರೆ ಕೆಲವು ಖ್ಯಾತನಾಮ ಬಾಲಿವುಡ್​ ನ ಖ್ಯಾತ ನಟಿಯರು.

ಅಂದಹಾಗೆ ಒಂದೊಮ್ಮೆ ಚಿತ್ರರಂಗವನ್ನೇ ಆಳಿದ ನಟಿಯರು ಹೇಗೆ ಈ ಪಾತಕಿಗಳ ಸೆಳೆತಕ್ಕೆ ಒಳಗಾದರು ಎಂಬ ಮಾಹಿತಿ ವೈರಲ್​ ಆಗುತ್ತಿದೆ. ಒಬ್ಬ ನಟಿ ಜೈಲಿಗೆ ಹೋಗಬೇಕಾಗಿ ಬಂದರೆ, ಮತ್ತೊಬ್ಬ ನಟಿ ಡ್ರಗ್ ದಂಧೆ ಪ್ರಕರಣದಲ್ಲಿ ತಪ್ಪಿತಸ್ಥಳಾಗಿದ್ದು, ಆಕೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅವರ ಪೈಕಿ ಕೆಲವರ ಪರಿಚಯ ಇಲ್ಲಿದೆ.

ಮಂದಾಕಿನಿ (Mandakini)- ನಟಿ ಮಂದಾಕಿನಿ. ‘ರಾಮ್ ತೇರಿ ಗಂಗಾ ಮೈಲಿ’ ಚಿತ್ರದ ಮೂಲಕ ಫೇಮಸ್ ಆಗಿದ್ದರು. ಇವರು ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲೆಗೆ ಬಿದ್ದರು. ಬಾಲಿವುಡ್​ನಲ್ಲಿ ಉತ್ತುಂಗದಲ್ಲಿ ಇರುವಾಗಲೇ ದಾವೂದ್​ ಸೆರೆಯಲ್ಲಿ ಸಿಕ್ಕಿರು. ಭವಿಷ್ಯ ಕಳೆದುಕೊಂಡರು. ದಾವೂದ್ ಜೊತೆಗಿನ ಫೋಟೋ ವೈರಲ್ (Photo Viral) ಆಗುತ್ತಿದ್ದಂತೆಯೇ ಸಿನಿಮಾ ಅಲ್ಲಿಗೇ ನಿಂತಿತು. ಅವಕಾಶಗಳು ಕುಸಿದವು. 1996ರ ಸಿನಿಮಾ ‘ಜೋರ್​ದಾರ್’ ಅವರ ಕೊನೆಯ ಚಿತ್ರ. ಇದಕ್ಕಿದ್ದಂತೆಯೇ ನಟಿ ಉದ್ಯಮದಿಂದ ಕಣ್ಮರೆಯಾಗಿ ಹಲವು ವರ್ಷ ಯಾರಿಗೂ ಕಾಣಿಸಿಕೊಳ್ಳಲೇ ಇಲ್ಲ.

ಮಮತಾ ಕುಲಕರ್ಣಿ- ಮಮತಾ ಕುಲಕರ್ಣಿ (Mamata Kulkarni) ಆ ಕಾಲದಲ್ಲಿಯೇ ನಗ್ನ ಚಿತ್ರಕ್ಕೆ ಪೋಸ್​ ಕೊಟ್ಟು ಫೇಮಸ್​ ಆಗಿದ್ದ ನಟಿಯೀಕೆ. ಸೌಂದರ್ಯದ ಘನಿಯಂತಿದ್ದ ಮಮತಾಗೆ ಭೂಗತ ಪಾತಕಿ ಛೋಟಾ ರಾಜನ್ ಜೊತೆ ಸಂಬಂಧ ಉಂಟಾಯಿತು. ನಂತರ, ಈಕೆಯ ಹೆಸರು ವಿಕ್ಕಿ ಗೋಸ್ವಾಮಿಯೊಂದಿಗೆ ತಳುಕು ಹಾಕಿಕೊಂಡಿತ್ತು. ಇವರಿಬ್ಬರೂ 2000 ಕೋಟಿ ರೂಪಾಯಿ ಡ್ರಗ್ ದಂಧೆ ಪ್ರಕರಣದಲ್ಲಿ ಆರೋಪಿಗಳಾದ ಬಳಿಕ ಮಮತಾ ಬದುಕು ನರಕವಾಯಿತು.


ಮೋನಿಕಾ ಬೇಡಿ – ನಟಿ ಮೋನಿಕಾ ಬೇಡಿ ಅವರದ್ದು ಇನ್ನೊಂದು ಕಥೆ. ಸಲ್ಮಾನ್ ಖಾನ್, ಸುನಿಲ್ ಶೆಟ್ಟಿ ಮತ್ತು ಗೋವಿಂದ ಅವರಂತಹ ನಾಯಕರ ಜೊತೆ ಕೆಲಸ ಮಾಡಿದ್ದ ಮೋನಿಕಾ ಭೂಗತ ಪಾತಕಿ ಅಬು ಸಲೇಂ ಅವರೊಂದಿಗಿನ ಸಂಬಂಧ ಹೊಂದಿದ್ದರು. ಇದನ್ನು ಖುದ್ದು ಅವರೇ ಬಹಿರಂಗಪಡಿಸಿದ್ದರು. ಇಸ್ಲಾಂಗೆ ಮತಾಂತರಗೊಂಡು ಅಬು ಸಲೇಂ ಅವರನ್ನು ವಿವಾಹವಾದರು. ಆದರೆ ಆಮೇಲಿನದ್ದು ನರಕದ ಬಾಳು. ಮೋನಿಕಾ ಮತ್ತು ಅಬು ಸಲೇಂ ಅವರನ್ನು 2002ರಲ್ಲಿ ಲಿಸ್ಬನ್ ಪೊಲೀಸರು ನಕಲಿ ಪಾಸ್​ ಪೋರ್ಟ್​ಗಳನ್ನು ಬಳಸಿ ಪೋರ್ಚುಗಲ್​ಗೆ ಪ್ರವೇಶಿಸಿದ್ದಕ್ಕಾಗಿ ಬಂಧಿಸಿದ್ದರು. ಅವರನ್ನು 2005 ರಲ್ಲಿ ಭಾರತಕ್ಕೆ ಹಸ್ತಾಂತರಿಸಲಾಯಿತು. ಎರಡು ವರ್ಷಗಳ ಜೈಲು ಶಿಕ್ಷೆಯ ನಂತರ, ಮೋನಿಕಾ 2007 ರಲ್ಲಿ ಬಿಡುಗಡೆಯಾದರು.

ಅನಿತಾ ಅಯೂಬ್ (Anitha Ayub)- ದಾವೂದ್​ ಇಬ್ರಾಹಿಂ ತೆಕ್ಕೆಗೆ ಬಿದ್ದ ಇನ್ನೋರ್ವ ನಟಿ ಅನಿತಾ ಅಯೂಬ್ (Anitha Ayub). ಇವರು ಕೂಡ ಸಾಕಷ್ಟು ಹೆಸರು ಮಾಡಿದ್ದರು. ಅಸಲಿಗೆ ಇವರು ಪಾಕಿಸ್ತಾನದ ನಟಿ. ದಾವೂದ್ ಇಬ್ರಾಹಿಂಗೆ ನಿಕಟವಾಗಿದ್ದರು. ಇದು ಎಷ್ಟರ ಮಟ್ಟಿಗೆ ಮುಂದುವರೆಯಿತು ಎಂದರೆ ಒಮ್ಮೆ ಪಾಕಿಸ್ತಾನಿ ನಿರ್ದೇಶಕ ಜಾವೇದ್ ಸಿದ್ದಿಕಿ (Javed siddiqui) ತಮ್ಮ ಚಿತ್ರಕ್ಕೆ ಅನಿತಾ ಅಯೂಬ್ ಅವರನ್ನು ರಿಜೆಕ್ಟ್ ಮಾಡಿದ್ದ ಕಾರಣಕ್ಕೆ ಅವರ ಕೊಲೆಯಾಗಿ ಹೋಯಿತು. ಅದಕ್ಕೆ ಕಾರಣ ಕೂಡ ದಾವೂದ್​ ಎನ್ನುವುದು ತಿಳಿದುಬಂತು. ಇದಾದ ಬಳಿಕವೂ ಅನಿತಾ ಕೆಲ ಕಾಲ ಬಾಲಿವುಡ್​ನಲ್ಲೂ ಕೆಲಸ ಮಾಡಿದ್ದರೂ ಕೊನೆಗೆ ಕಣ್ಮರೆಯಾದರು.

ಹಿನಾ ಕೌಸರ್​- ಇನ್ನು 70ರ ದಶಕದಲ್ಲಿ ಸಕತ್​ ಫೇಮಸ್​ ಆಗಿದ್ದ ನಟಿ, ಸಿನಿಮಾ ನಿರ್ದೇಶಕ ಕೆ. ಆಸಿಫ್ ಮಗಳು ಹಿನಾ ಕೌಸರ್. 1991 ರಲ್ಲಿ ದರೋಡೆಕೋರ ಇಕ್ಬಾಲ್ ಮಿರ್ಚಿಯನ್ನು ಮದುವೆಯಾದರು. ಸಿನಿಮಾ ನಿಲ್ಲಿಸಿ ಇಕ್ಬಾಲ್ ಮಿರ್ಚಿ (Iqbal Mirchi) ಅವರೊಂದಿಗೆ ಇವರು ಲಂಡನ್​ನಲ್ಲಿ ನೆಲೆಸಿದ್ದರು. ಇಕ್ಬಾಲ್ ಮಿರ್ಚಿ 2013ರಲ್ಲಿ ನಿಧನರಾದ ಬಳಿಕ ದರೋಡೆಕೋರನ ಪತ್ನಿ ಎಂಬ ಕಾರಣಕ್ಕೆ ಎಲ್ಲಿಯೂ ಅವಕಾಶ ಸಿಗಲೇ ಇಲ್ಲ.

ಇದನ್ನೂ ಓದಿ: D Boss Apology: ಕೊನೆಗೂ ಮಾಧ್ಯಮಗಳ ಕ್ಷಮೆ ಕೇಳಿದ ನಟ ದರ್ಶನ್, ಅವತ್ತು ಮುನಿಸು ಯಾಕಾಗಿತ್ತು ಗೊತ್ತಾ ?

Leave A Reply

Your email address will not be published.