Weekend With Ramesh: ಮಗೂಗೆ ಎದೆಹಾಲು ನಿಲ್ಸಿ ಹೆಂಡ್ತಿ ಸ್ಟೇಜ್ ಹತ್ತಿ ನಾಟಕ ಆಡಿದ್ಲು: ಮಂಡ್ಯ ಲವ್ಸ್ ಸರೋಜಾ ಲವ್ ಸ್ಟೋರಿಲಿ ಇದೆ ಗಮ್ಮತ್ತು !

Weekend With Ramesh Season-5 : ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ವಾರ ಮಂಡ್ಯ ರಮೇಶ್ (Weekend With Ramesh Season-5   ) ಅವರನ್ನು ಅತಿಥಿಯಾಗಿ ಕರೆಸಲಾಗಿತ್ತು. ನಟ ಮಂಡ್ಯ ರಮೇಶ್ ಅವರು ಇಂದು ‘ನಟನ’ ಸಂಸ್ಥೆ ಕಟ್ಟಿ ರಂಗಸೇವೆ ಮಾಡುತ್ತಲಿದ್ದಾರೆ. ಇದರ ಜತೆ ಸಿನಿಮಾ, ಧಾರಾವಾಹಿಗಳಲ್ಲಿ ಸಕ್ರಿಯವಾಗಿದ್ದಾರೆ. ಅಲ್ಲದೆ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ರಂಗಭೂಮಿಯನ್ನೇ ಉಸಿರಾಗಿಸಿಕೊಂಡಿದ್ದ ಮಂಡ್ಯ ರಮೇಶ್, ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡು ಈ ಹಂತದ ವರೆಗೆ ಬೆಳೆದವರು. ಸದ್ಯ ಅವರ ಜೀವನದ ಕೆಲವು ಘಟನೆಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

ಮುಖ್ಯವಾಗಿ ಮಂಡ್ಯ ರಮೇಶ್ ಅವರು ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಸರೋಜ ಅವರನ್ನು ಮೊದಲು ನೋಡಿದ್ದು ಎಲ್ಲಿ? ಪ್ರೀತಿ-ಪ್ರೇಮ ಯಾವಾಗ ಶುರುವಾಯ್ತು? ಎಂಬ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಮಗು ಹುಟ್ಟಿದ ಬಳಿಕ ನಾಟಕಗಳಲ್ಲಿ ನಟಿಸೋದು, ದೇಶ ವಿದೇಶ ಸುತ್ತೋದು ಎಷ್ಟು ಕಷ್ಟ ಆಯ್ತು ಎಂದು ಕೂಡ ಮಂಡ್ಯ ರಮೇಶ್ ದಂಪತಿ ಹೇಳಿಕೊಂಡಿದ್ದಾರೆ.

ಮಂಡ್ಯ ರಮೇಶ್ ಹಾಗೂ ಸರೋಜಾ ಅವರು ಮೊದಲು ನೀನಾಸಂನಲ್ಲಿ ಭೇಟಿ ಮಾಡಿದ್ದರು. ಒಂದು ಸಾರಿ ನೀನಾಸಂನಲ್ಲಿ ಮಂಡ್ಯ ರಮೇಶ್ ಅವರು ಸರೋಜ ರೂಮ್‌ಗೆ ಬಂದು “ಇಲ್ಲಿ ಶಿಸ್ತಿನಿಂದ ಇರಬೇಕು, ನಾವು ಯಾಕೆ ಬಂದಿದ್ದೇವೋ ಅದರ ಕಡೆಗೆ ಗಮನ ಕೊಡಬೇಕು. ನೀನು ಶಿಸ್ತನಿಂದ ಇದ್ರೆ ಆಮೇಲೆ ಶಿಸ್ತು ನಿನ್ನ ಕಾಪಾಡುತ್ತೆ , ಮುಂದಕ್ಕೆ ಕರೆದುಕೊಂಡು ಹೋಗುತ್ತೆ . ನಿನಗೆ ಏನು ಬೇಕೋ ಅದನ್ನೇ ಮಾಡಿದ್ರೆ ಎಡವಟ್ಟು ಆಗತ್ತೆ” ಅಂತ ಹೇಳಿದ್ದರಂತೆ.

ನಂತರ ನೀನಾಸಂನಲ್ಲಿ ಒಂದು ಚಟುವಟಿಕೆ ವೇಳೆ ಸರೋಜ ಅವರ ಹಿಂದೆ ರಮೇಶ್ ನಿಂತಿದ್ದರಂತೆ. ಆಗಲೇ ಎಲ್ಲರೂ ಏನೋ ಇದೆ ಅಂತ ರಮೇಶ್‌ಗೆ ರೇಗಿಸಲು ಆರಂಭಿಸಿದ್ದರು.

ಅದಾಗಿ ಒಂದು ವಾರದ ಬಳಿಕ ರಮೇಶ್ ಅವರಿಗೆ ಅಪಘಾತ ಆಗಿತ್ತು. ಆಸ್ಪತ್ರೆಯಲ್ಲಿ ರಮೇಶ್ ಅವರಿಗೆ ಒಂದು ವಾರಗಳ ಕಾಲ ಮೂರ್ಛೆ ತಪ್ಪೋದು, ಎಚ್ಚರ ಆಗೋದು ಆಗುತ್ತಿತ್ತಂತೆ. ಒಂದು ದಿನ ರಮೇಶ್ ಅವರನ್ನು ಸರೋಜಾ ನೋಡಿಕೊಳ್ಳುತ್ತಿದ್ದರು. ಅದನ್ನು ನೋಡಿ ರಮೇಶ್ ಅವರ ಅಕ್ಕ “ನಾವಿದ್ದಾಗ ಇವಳ್ಯಾಕೆ ನಿನ್ನ ಟ್ರೀಟ್‌ಮೆಂಟ್ ಮಾಡ್ತಿದ್ದಾಳೆ, ಏನು ವಿಶೇಷ” ಅಂತ ಪ್ರಶ್ನೆ ಕೇಳಲು ಆರಂಭಿಸಿದರು.

ಮನಸ್ಸಿನಲ್ಲಿ ಏನೂ ಇಲ್ಲದಿದ್ದರೂ ಕೂಡ ಎಷ್ಟೋ ಪ್ರೇಮ ಪ್ರಸಂಗಗಳು ಬೇರೆಯವರು ಹೇಳಿ ಹೇಳಿ ಹುಟ್ಟತ್ತಂತೆ ಎಂದು ರಮೇಶ್ ಹೇಳಿದ್ದಾರೆ. ಅಪಘಾತ ಆದಬಳಿಕ ಪ್ರೇಮದ ಗಳಿಗೆಗಳು ಹುಟ್ಟಲು ಆರಂಭಿಸಿದವಂತೆ.

ಕೊನೆಗೂ ಇವರಿಬ್ಬರು ಮದುವೆಯಾದರು. ಮಗು ಹುಟ್ಟಿತು. ಇಬ್ಬರು ಕಲಾವಿದರು ಜರ್ಮನಿಯಲ್ಲಿ ನಾಟಕವೊಂದರಲ್ಲಿ ನಟಿಸಬೇಕಿತ್ತು. ಆ ವೇಳೆ ಮಗಳು ದಿಶಾ ಚಿಕ್ಕವಳು. ಮಗಳನ್ನು ಎತ್ತಿಕೊಂಡು ಗಲೀಜು ಮಾಡಿಕೊಂಡರೆ ಕಾಸ್ಟ್ಯೂಮ್ ಹಾಳಾಗುತ್ತದೆ ಅಂತ ಮುಟ್ಟದೆ ಮಗಳನ್ನು ಸಂತೈಸುತ್ತಿದ್ದರಂತೆ.

“ಜರ್ಮನಿಯಲ್ಲಿ ನಾಟಕದ ಸಮಯದಲ್ಲಿ ಮಗು ತುಂಬ ಅತ್ತಾಗ ಸರೋಜ ಅವರು ಎದೆಹಾಲು ಕುಡಿಸುತ್ತಿದ್ದರು. ಆಮೇಲೆ ನಾಟಕ ಶುರು ಆಯ್ತು ಅಂತ ಅವರು ಎದೆಯಿಂದ ಮಗುವನ್ನು ಕಿತ್ತಿಟ್ಟು ನಾಟಕ ಮಾಡಲು ಆರಂಭಿಸಿದರು. ಎಲ್ಲರೂ ಯಾಕೆ ಸರೋಜ ಅವರು ಇಷ್ಟು ಬೆವತರು ಅಂತ ಅಂದುಕೊಂಡರು. ಆದರೆ ಎದೆಯಿಂದ ಮಗುವನ್ನು ಕಿತ್ತಿಟ್ಟು ಬಂದಿದ್ದರಿಂದ ಇಡೀ ಮೈ ಹಾಲಾಗಿ ಹೋಗಿತ್ತು” ಎಂದು ಮಂಡ್ಯ ರಮೇಶ್ ಅವರು ಹೇಳಿದ್ದಾರೆ.

ಮುಖ್ಯವಾಗಿ ಮಂಡ್ಯ ರಮೇಶ್ ಅವರಿಗೆ ರಂಗಭೂಮಿ ಎಂದರೆ ಅದು ಅವರಿಗೆ ಎಲ್ಲವೂ ಆಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಸಾಕಷ್ಟು ತರಬೇತಿಗಳ ಟ್ರೈನಿಂಗ್ ಸೆಂಟರ್‌ಗಳು ತೆರೆದುಕೊಂಡಿವೆ. ಹೀಗಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ.

ಇನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಖುರ್ಚಿಯಲ್ಲು ಕುಳಿತವರಿಗೆ ಒಂದಿಷ್ಟು ಸಪ್ರೈಸ್‌ಗಳು ಇದ್ದೆ ಇರುತ್ತೆ. ಈ ಬಾರಿ ಮಂಡ್ಯ ರಮೇಶ್ ಅವರಿಗೆ ದಿ.ಮಾಸ್ಟರ್ ಹಿರಣ್ಣಯ್ಯ ಅವರ ಆಶೀರ್ವಾದವೇ ಸಪ್ರೈಸ್ ಆಗಿತ್ತು.

ಅಭಿಮಾನಿ ಅನ್ನದಾತರಿಗೆ ಧನ್ಯವಾದಗಳು ಎಂದ ಕೂಡಲೇ ಮಂಡ್ಯ ರಮೇಶ್ ಅವರ ಮುಖ ಆಶ್ಚರ್ಯದಿಂದ ಕೂಡಿತ್ತು. “ರಂಗಭೂಮಿ ವಿಚಾರದಲ್ಲಿ ಕಷ್ಟಪಡುವವರು ಯಾರು..? ಅದನ್ನು ಸದಾ ಜಾಗೃತವಾಗಿಡುವವರು ಯಾರು..? ಅದೊಂದು ಗುಂಪಾದ್ರೆ. ಇದರ ಫಲವನ್ನು ಉಣ್ಣೋರು ಯಾರು..? ನಾಟಕಕಾರರ ಹಣೆಬರಹ ಏನು ಅಂದ್ರೆ ಇದನ್ನು ವೃತ್ತಿಯಾಗಿ ಸ್ವೀಕಾರ ಮಾಡಿ ಬಿಟ್ಟಿದ್ದೀವಿ. ಅಂದ್ರೆ, ಇದ್ರಿಂದ ನಾವೂ ಜೀವನೋಪಾಯ ಮಾಡಬೇಕು” ಎಂದಿದ್ದಾರೆ.

ವಿಶೇಷವೆಂದರೆ ಹಿರಣ್ಣಯ್ಯ ಅವರು 2019ರಲ್ಲಿಯೇ ನಿಧನರಾಗಿದ್ದಾರೆ. ಆದರೆ ಮಂಡ್ಯ ರಮೇಶ್ ಬಗ್ಗೆ ಈಗ ಅವರ ಮಾತು ಪ್ರಸಾರವಾಗಿದೆ. ಅಂದ್ರೆ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ತಯಾರಿ ಕುರಿತು ಶ್ಲಾಘನೆ ಕೊಡಲೇ ಬೇಕು.

ದಿ. ಹಿರಣ್ಣಯ್ಯ ಹೇಳುವ ಪ್ರಕಾರ “ಬೇರೆ ಬೇರೆ ಮೂಲದಿಂದ ಬಂದಿರುವ ಹಣ, ತನ್ನ ಸಂಪಾದನೆಯಿಂದ ಬಂದಿರುವ ಹಣವನ್ನೆಲ್ಲಾ ಸುರಿದು ರಂಗಭೂಮಿಯನ್ನು ಬೆಳೆಸುತ್ತಾ ಇದ್ದಾರೆ. ಮೈಸೂರಿನಲ್ಲಿ ಒಂದು ರಂಗಮಂದಿರ ಮಾಡಿದ್ದಾನೆ. ಅದರ ಆರಂಭಕ್ಕೆ ಹೋದಾಗ‌ ಮುಂದೆ ನಿಮ್ಮ ಸಹಾಯ ಬೇಕಾಗುತ್ತೆ ಎಂದಿದ್ದ. ಅಯ್ಯ ನೀನು ವೈಯಕ್ತಿಕವಾಗಿ ಬೇಡಿದರು, ರಂಗಭೂಮಿಗಾಗಿ ಬೇಡಿದರು ನಾನು ನಿಮ್ಮವನೆ. ಯಾವಾಗ ಬೇಕಾದರೂ ಬಳಸಿಕೊ ಎಂದಿದ್ದೆ.

ಅಷ್ಟೇ ಅಲ್ಲ ಮಂಡ್ಯ ರಮೇಶ್ ಛಲವಾದಿ. ಹಿಡಿದ ಹಠವನ್ನು ಬಿಡುವುದಿಲ್ಲ. ಮಂಡ್ಯ ರಮೇಶ್‌ನಂತವರು ಇನ್ನು ಹೆಚ್ಚೆಚ್ಚು ಹುಟ್ಟಿ ಬರಬೇಕು” ಎಂದು ಆಶೀರ್ವಾದ ಮಾಡಿದ್ದಾರೆ. ಜೊತೆಗೆ ವೀಕೆಂಡ್ ವಿತ್ ಶೋನಲ್ಲೂ ಕೂಡ ಯಾರಾದರೂ ಸಹಾಯ ಮಾಡಿದರೆ ಆ ಹಣವನ್ನು ರಂಗಭೂಮಿಗೆ ಹಾಕಲು ಯೋಚಿಸುವ ಬಗ್ಗೆ ಮಾತನಾಡಿದ್ದಾರೆ.

ಮಂಡ್ಯ ರಮೇಶ್ ಕಿವಿ ಮಾತು ಕೂಡ ಹೇಳಿದ್ದಾರೆ. ಆಗಿನ ಕಾಲದಲ್ಲಿ ಕಲಾವಿದರಾಗುವುದು ಸುಲಭವಾಗಿರಲಿಲ್ಲ. ಆದರೆ ಈಗ ಹಾಗಿಲ್ಲ. ಹೊಸ ಆವಿಷ್ಕಾರ ಮಾಡುತ್ತಾ ಅವಕಾಶ ನೀಡಬೇಕು. ಯಾರನ್ನಾದರು ಕೇಳಿದ್ರೆ ಏನು ಮಾಡ್ತೀಯಪ್ಪ ಅಂತ. ಸರ್ ಹೀರೋ ಆಗ್ಬೇಕು ಅಂತಾರೆ. ಏನ್ ಆಗ್ತೀಯಪ್ಪ ಸರ್ ಯಶ್ ಆಗ್ತೀನಿ, ದರ್ಶನ್ ಆಗ್ತೀನಿ. ಆಯ್ತು ಅದಕ್ಕೆ ಏನು ಮಾಡ್ತಾ ಇದ್ದೀಯಾ.ಏನು ಮಾಡದೆ ಇದ್ದರೆ ಹೇಗೋ ಆಗೋದು” ಎಂದು ಪ್ರಶ್ನಿಸಿದ್ದಾರೆ.

ಹೀಗೆ ಮಂಡ್ಯ ರಮೇಶ್ ಅವರು ತಮ್ಮ ಜೀವನದ ಹಲವಾರು ಘಟನೆಗಳನ್ನು ಹಚ್ಚಿಕೊಂಡು, ಜೊತೆಗೆ ಯುವ ಪೀಳಿಗೆಗೆ ಅಡಿಗಲ್ಲು ಮೊದಲು ಗಟ್ಟಿಯಾಗಿರಬೇಕೆಂದು ಸಲಹೆ ನೀಡಿದ್ದಾರೆ.

 

ಇದನ್ನು ಓದಿ: Teeth care: ಪೋಷಕರೇ ಎಚ್ಚರ..!! ನಿಮ್ಮ ಮಕ್ಕಳು ಯಾವ ರೀತಿಯ ‘ಟೂತ್ ಪೇಸ್ಟ್’ ಬಳಸುತ್ತಾರೆ? ಅಧ್ಯಯನದಿಂದ ಶಾಕಿಂಗ್ ಮಾಹಿತಿ ಬಹಿರಂಗ!! 

Leave A Reply

Your email address will not be published.