Actress Ramya: ದುಡ್ಡು ಕೊಟ್ಟು ಜನ ಸೇರಿಸೋ ಬದಲು, ನಮ್ಮನ್ನು ಸ್ಟಾರ್ ಪ್ರಚಾರಕರನ್ನಾಗಿ ಮಾಡಿ ಜನ ಸೇರಿಸುತ್ತಾರೆ ಅಷ್ಟೆ ! ವೈರಲ್ ಆಯ್ತು ನಟಿ ರಮ್ಯಾ ಹೇಳಿಕೆ!

Actress Ramya : ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly) ಮೇ 10ರಂದು ನಡೆಯಲಿದ್ದು, ಚುನಾವಣೆಗೆ ದಿನಗಣನೆ ಶುರುವಾಗಿದೆ. ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರೆ, ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲು ಮತದಾರರು ತಯಾರಾಗಿದ್ದಾರೆ. ಇನ್ನು ಪಕ್ಷಗಳು ಗೆಲುವಿನ ಮಂತ್ರ ಪಠಿಸುತ್ತ ಜಯಭೇರಿ ಬಾರಿಸಲು ಸ್ಟಾರ್ ಪ್ರಚಾರಕರೆಂಬ ಹೊಸ ಸಂಪ್ರದಾಯ ಸೃಷ್ಟಿಸಿಕೊಂಡರು ಅವರ ಮೂಲಕ ಪ್ರಚಾರದ ಅಕಾಡಕ್ಕಿಳಿದಿವೆ. ಸದ್ಯ ಇದೀಗ ಸ್ವತಃ ಸ್ಟಾರ್ ಪ್ರಚಾರಕಿ ಆಗಿರುವ ರಮ್ಯಾ( Actress Ramya) ಅವರು ಸಿನಿಮಾ ತಾರೆಯರು ಮತಗಳನ್ನು ತಂದು ಕೊಡುವಷ್ಟು ಪ್ರಭಾವಿಯಲ್ಲ ಎಂದು ಹೇಳಿದ್ದಾರೆ.

 

ಹೌದು, ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ಎದುರಾಳಿಗಳನ್ನು ಮಣಿಸಲು ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಸಿನಿಮಾ ತಾರೆಯರು ಕಾಣಿಸಿಕೊಳ್ಳುತ್ತಿರುವುದರಿಂದ ಮತ್ತಷ್ಟು ರಂಗು ಪಡೆದಿದೆ. ಆದರೆ ಈ ನಡುವೆ ಸಂದರ್ಶನವೊಂದರಲ್ಲಿ ರಾಜಕೀಯ, ಸಿನಿಮಾ ಮತ್ತು ಸಿನಿಮಾ ನಟ-ನಟಿಯರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿರುವ ಬಗ್ಗೆ ಮಾತನಾಡಿದ ರಮ್ಯಾ, “ಸಿನಿಮಾ ತಾರೆಯರು ಮತದಾರರನ್ನು ನಿರ್ದಿಷ್ಟ ಪಕ್ಷಕ್ಕೆ ಮತ ಹಾಕುವಂತೆ ಪ್ರೇರೇಪಣೆ ಮಾಡುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ಜನರನ್ನು ಸೆಳೆಯಲು ನಟರು ಯಶಸ್ವಿಯಾಗುತ್ತಾರೆ. ಆದರೆ ಅದು ಮತವಾಗಿ ಬದಲಾಗುವುದಿಲ್ಲ, ಈ ವಿಷಯ ರಾಜಕಾರಣಿಗಳಿಗೂ ಗೊತ್ತಿದೆ,” ಎಂದು ತಿಳಿಸಿದ್ದಾರೆ.

ಅಂದಹಾಗೆ ನಟ ಕಿಚ್ಚ ಸುದೀಪ್(Kiccha Sudeep) ಬಿಜೆಪಿ ಪರವಾಗಿ ಪ್ರಚಾರಕ್ಕಿಳಿದಿದ್ದು ಬಸವರಾಜ ಬೊಮ್ಮಾಯಿ(Basavaraj Bommai) ಪರ ರೋಡ್ ಶೋ ನಡೆಸಿದ್ದಾರೆ. ಇನ್ನು ನಟಿಯರಾದ ಪ್ರೇಮಾ, ಶ್ರುತಿ, ತಾರಾ ಅನುರಾಧ ಸಹ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಮತ್ತೊಂದೆಡೆ ನಟಿ ರಮ್ಯಾ, ಸಾಧುಕೋಕಿಲ, ಉಮಾಶ್ರೀ, ಅವರುಗಳು ಕಾಂಗ್ರೆಸ್​ನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಆದರೆ ಈ ನಡುವೆ ಸ್ವತಃ ಸ್ಟಾರ್ ಪ್ರಚಾರಕಿ ಆಗಿರುವ ರಮ್ಯಾ ಅವರು ಸ್ಟಾರ್ ಪ್ರಚಾರಕರ ಕುರಿತು ನೀಡಿದ ಹೇಳಿಕೆ ಕೊಂಚ ಚರ್ಚೆಗೆ ಗ್ರಾಸವಾಗಿದೆ.

ಅಲ್ಲದೆ ಮುಂದೆ ಮಾತನಾಡಿದ ಅವರು “ಜನರನ್ನು ಸೇರಿಸಲು ಹಣ ನೀಡಬೇಕಾಗುತ್ತದೆ, ಅದರ ಬದಲು ಸ್ಟಾರ್ ನಟ-ನಟಿಯರನ್ನು ಕರೆತಂದರೆ ಜನರು ತಾವಾಗಿಯೇ ಬರುತ್ತಾರೆ. ನೆರೆದ ಜನರಿಗೆ ಅಭ್ಯರ್ಥಿ ಹೇಗೆ ತನ್ನ ವಿಷಯ ಮುಟ್ಟಿಸುತ್ತಾನೆ ಎಂಬುದು ಮುಖ್ಯ. ನಟ ಅಥವಾ ನಟಿಯರು ಹೇಳಿದ ಮಾತ್ರಕ್ಕೆ ಜನರು ಮತ ಹಾಕುವುದಿಲ್ಲ. ಜನ ಸೇರಿಸಲು ಮಾತ್ರ ಸಿನಿಮಾ ತಾರೆಯರು ನೆರವಾಗುತ್ತಾರೆ,” ಎಂದು ಅಭಿಪ್ರಾಯಪಟ್ಟರು.

ಇನ್ನು ಇದೇ ವೇಳೆ ನಟ ಸುದೀಪ್ ಅವರು ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿರುವ ಕುರಿತು ಮಾತನಾಡಿದ ರಮ್ಯಾ, “ಅದು ಅವರ ವೈಯಕ್ತಿಕ ಆಯ್ಕೆ. ಅವರು ನನ್ನ ಆತ್ಮೀಯ ಸ್ನೇಹಿತ, ಬಿಜೆಪಿಗೆ ಬೆಂಬಲ ನೀಡುವ ಮುನ್ನ ನನ್ನ ಬಳಿ ಚರ್ಚಿಸಿದ್ದರು. ಅವರಿಗೆ ಬೇರೆ ಪಕ್ಷಗಳಿಂದವೂ ಆಫರ್​ಗಳು ಬಂದಿದ್ದವು. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬಹಳ ಆತ್ಮೀಯರಾಗಿರುವ ಕಾರಣ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ” ಎಂದರು.

ಇದನ್ನೂ ಓದಿ: Kirthi Shetty : ಕೊನೆಗೂ ತನ್ನ ದೇಹಸಿರಿ ತೋರಿಸಲು ಮುಂದಾದ ಕರಾವಳಿ ಚೆಲುವೆ ಕೀರ್ತಿ ಶೆಟ್ಟಿ! ಕಾರಣವೇನು ಗೊತ್ತಾ?

Leave A Reply

Your email address will not be published.