Home Breaking Entertainment News Kannada Krithi Shetty : ಕೊನೆಗೂ ಬಿಕಿನಿಯಲ್ಲಿ ದೇಹಸಿರಿ ತೆರೆದಿಡಲು ಮುಂದಾದ ಕರಾವಳಿ ಚೆಲುವೆ ಕೀರ್ತಿ ಶೆಟ್ಟಿ...

Krithi Shetty : ಕೊನೆಗೂ ಬಿಕಿನಿಯಲ್ಲಿ ದೇಹಸಿರಿ ತೆರೆದಿಡಲು ಮುಂದಾದ ಕರಾವಳಿ ಚೆಲುವೆ ಕೀರ್ತಿ ಶೆಟ್ಟಿ ! ಕಾರಣವೇನು ಗೊತ್ತಾ?

Krithi Shetty
Image source: India.com

Hindu neighbor gifts plot of land

Hindu neighbour gifts land to Muslim journalist

Krithi Shetty : ಸಿನಿಮಾ ರಂಗ ಪ್ರವೇಶಿಸಿ, ಅತೀ ಚಿಕ್ಕ ವಯಸ್ಸಿನಲ್ಲೇ ಗೆಲುವು ಕಂಡು, ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿ ಅಂದ್ರೆ ಅದು ಕರಾವಳಿ ಬೆಡಗಿ ಕೀರ್ತಿ ಶೆಟ್ಟಿ. ಸದ್ಯ ಈಕೆ ಟಾಲಿವುಡ್‌ನ(Tollywood) ಸ್ಟಾರ್ ನಟಿಯಾಗಿ ಪ್ರಮೋಟ್ ಆಗಿದ್ದಾರೆ. ‘ಉಪ್ಪೆನ'(Uppena) ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈಕೆತ ಮೊದಲ ಸಿನಿಮಾವೇ 100 ಕೋಟಿ ಕ್ಲಬ್ ಸೇರಿತ್ತು. ಕಾಲಿ ಟಾಲಿವುಡ್‌ನಲ್ಲೇ ನಟಿಸುತ್ತಿದ್ದ ನಟಿಯೀಗ ತಮಿಳು ಸಿನಿಮಾದಲ್ಲೂ ನಟಿಸುತ್ತಿದ್ದು, ಸದ್ಯ ಬಿಕಿನಿ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.

ಹೌದು, ಕೃತಿ ಶೆಟ್ಟಿ (Krithi Shetty) ಮುಂದೆ ಈಗ ಬಿಕಿನಿ ಆಫರ್‌ ಇದೆ! ಕೃತಿ ಶೆಟ್ಟಿಗೆ ಹೊಸ ಸಿನಿಮಾ ಆಫರ್ ಬಂದಿದ್ದು ಈ ಸಿನಿಮಾದಲ್ಲಿ ಕೃತಿ ಬಿಕಿನಿಯಲ್ಲಿ ಕಾಣಿಸಿಕೊಳ್ಳಬೇಕಿದೆ. ಇದಕ್ಕೆ ಕೃತಿ ಓಕೆ ಕೂಡ ಎಂದಿದ್ದಾರಂತೆ. ಸಿನಿಮಾ ಆಯ್ಕೆಯಲ್ಲಿ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಇಷ್ಟಪಡದ ಕೃತಿ ಎಲ್ಲರೂ ದೇಹ ಸಿರಿಯನ್ನು ಸಲೀಸಾಗಿ ತೋರಿಸುತ್ತಿರುವಾಗ ತಾವ್ಯಾಕೆ ಹಿಂದೆ ಬೀಳಬೇಕು ಎಂದುಕೊಂಡಿದ್ದು, ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ ಎನ್ನುವ ಸುದ್ದಿ ಇದೆ.

ಆರಂಭದಲ್ಲಿ ಯಶಸ್ಸು ಕಂಡ ಕೃತಿ ಶೆಟ್ಟಿ ಇತ್ತೀಚೆಗೆ ಹಿನ್ನೆಡೆ ಅನುಭವಿಸಿದ್ದರು. ಹೀಗಾಗಿ ಸಿನಿಮಾ ಆಯ್ಕೆಯಲ್ಲಿ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಈ ನಟಿ ಸಿದ್ಧವಿಲ್ಲ. ಈ ಕಾರಣಕ್ಕೆ ಸಿಕ್ಕಿರೋ ದೊಡ್ಡ ಆಫರ್ ಅನ್ನು ಮಿಸ್ ಮಾಡಿಕೊಳ್ಳಲ್ಲೂ ಧೈರ್ಯವಿಲ್ಲ. ಹೀಗಾಗಿ ಸಿನಿಮಾದಲ್ಲಿ ಬಿಕಿನಿ ತೊಡುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋದು ಸುದ್ದಿ. ಪ್ರೇಕ್ಷಕರಿಗೆ ಇದಾಗಲೇ ಬಹುತೇಕ ಎಲ್ಲಾ ನಟಿಯರು ಗ್ಲಾಮರ್ ಡೋಸ್ ನೀಡಲು ಬಿಕಿನಿ ತೊಟ್ಟಿರುವಾಗ ತಾವೇಕೆ ಹಿಂದೆ ಬೀಳುವುದು ಎಂದು ಕೃತಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ತಮ್ಮ ದೇಹ ಸೌಂದರ್ಯವನ್ನು ತೋರಿಸಬೇಕು ಎಂದರೆ ಸುಮ್ಮನೆಯೆ? ಇದಕ್ಕಾಗಿ ನಟಿ ಭಾರಿ ಡಿಮಾಂಡ್​ ಮಾಡಿದ್ದಾರೆ ಎನ್ನುವ ಸುದ್ದಿ ಇದೆ. ಸದ್ಯ ತಮ್ಮ ಚಿತ್ರಗಳಿಗೆ ನಟಿ 2 ಕೋಟಿ ರೂಪಾಯಿಗಳನ್ನು ಸರಾಸರಿ ಪಡೆಯುತ್ತಿದ್ದಾರೆ. ಆದರೆ ಇದೀಗ ಬಿಕಿನಿ ತೊಡುವ ದೃಶ್ಯಕ್ಕೆ 4-5 ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿದ್ದು, ಇದಕ್ಕೆ ನಿರ್ಮಾಪಕರೂ ಓಕೆ ಎಂದಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.

ಅಂದಹಾಗೆ ಮುಂಬೈನಲ್ಲಿ. ಚಿಕ್ಕವಯಸ್ಸಿನಲ್ಲೇ ಕ್ಯಾಮರಾ ಫೇಸ್ ಮಾಡಿದ್ದ ನಟಿ ಈಗ ಟಾಲಿವುಡ್ ಬೇಡಿಕೆಯ ನಟಿ. ಈಕೆಗೆ 10 ವರ್ಷವಿರುವಾಗಲೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.17ನೇ ವಯಸ್ಸಿನಲ್ಲೇ ಹೃತಿಕ್ ರೋಷನ್ ನಟಿಸಿದ ‘ಸೂಪರ್ 30’ ಸಿನಿಮಾದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಮೊದಲ ಸಿನಿಮಾ ‘ಉಪ್ಪೆನ’ ಗೆಲ್ಲುತ್ತಿದ್ದಂತೆ ಎರಡನೇ ಸಿನಿಮಾ ‘ಬಂಗಾರ್‌ರಾಜು’ ಹೆಚ್ಚು ಸಂಭಾವನೆ ಪಡೆದಿದ್ದರಂತೆ. ಎರಡನೇ ಸಿನಿಮಾ ಕೋಟಿ ಹಣವನ್ನು ಬೇಡಿಕೆ ಇಟ್ಟಿದ್ದಾರಂತೆ. ಇನ್ನೊಂದು ನಿರ್ಮಾಪಕರು ಕೂಡ ಕೃತಿ ಶೆಟ್ಟಿ ಕೇಳಿದಷ್ಟು ಹಣ ಕೊಡುತ್ತಿದ್ದಾರಂತೆ. ಇನ್ನೊಂದು ಕಡೆ ಕೃತಿ ಶೆಟ್ಟಿ ಕೂಡ ಫುಲ್ ಡಿಮ್ಯಾಂಡ್ ಮಾಡುತ್ತಿದ್ದಾರಂತೆ.

ಹಲವು ತಿಂಗಳ ಹಿಂದೆ ಟಾಲಿವುಡ್ ಇಂಡಸ್ಟ್ರಿಯಲ್ಲಿ ಮೋಸ್ಟ್ ವಾಂಟೆಡ್ (Most wanted) ಹೀರೋಯಿನ್‌ಗಳಲ್ಲಿ ಕೃತಿ ಶೆಟ್ಟಿ ಒಬ್ಬರು. 2021ರಲ್ಲಿ ಮುಂಬೈನಲ್ಲಿ ಮನೋವಿಜ್ಞಾನವನ್ನು ಅಧ್ಯಯನ ಮಾಡುತ್ತಿರುವಾಗಲೇ ಅವರಿಗೆ ಜಾಹೀರಾತುಗಳಲ್ಲಿ ಆಫರ್​ ಬಂದಿತ್ತು. ಅಲ್ಲಿಂದಲೇ ಅವರು ಮಾಡೆಲಿಂಗ್​ನಲ್ಲಿ ಮಿಂಚಲು ಶುರು ಮಾಡಿದರು. ನಂತರ ಕಾಲೇಜು ಓದುವಾಗ ಅವರಿಗೆ ತೆಲುಗು ಚಿತ್ರರಂಗದ ಬಾಗಿಲು ತೆರೆಯಿತು. ‘ಉಪ್ಪೆನ’ ಸಿನಿಮಾ ಯಶಸ್ಸಿನ ಬೆನ್ನಲ್ಲೇ ‘ಶ್ಯಾಮ್ ಸಿಂಘರಾಯ್’, ‘ಬಂಗಾರ್‌ರಾಜು’ ಬ್ಯಾಕ್‌ ಟು ಬ್ಯಾಕ್ ಹಿಟ್ ಆಯಿತು. ಹೀಗೆ ಉತ್ತುಂಗದಲ್ಲಿ ಇರುವಾಗಲೇ ಅದೇನಾಯಿತೋ ಗೊತ್ತಿಲ್ಲ. ಅದೃಷ್ಟ ಕೈಕೊಟ್ಟಿತ್ತು. ಮಾಡಿದ ಸಿನಿಮಾಗಳೆಲ್ಲಾ ಕುಸಿದು ಹೋಯಿತು. ಒಳ್ಳೊಳ್ಳೆ ಆಫರ್‌ ಬಂದರೂ, ಇಂಡಸ್ಟ್ರಿಯಲ್ಲಿ ಅಷ್ಟೊಂದು ಸಕ್ಸಸ್‌ ಸಿಗಲೇ ಇಲ್ಲ. ಆದರೀಗ ಬಿಕನಿ ಆಫರ್ ಮೂಲಕ ನಟಿಯ ಅದೃಷ್ಟ ಖುಲಾಯಿಸುತ್ತದೆಯೇ ಎಂದು ಕಾದು ನೋಡಬೇಕಿದೆ.