Home Karnataka State Politics Updates Jagadish Shetter: ಕಾಂಗ್ರೆಸ್‌ ಸೇರಿದ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಗೆ ಆರಂಭಿಕ ಆಘಾತ ! ತಾಕತ್...

Jagadish Shetter: ಕಾಂಗ್ರೆಸ್‌ ಸೇರಿದ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಗೆ ಆರಂಭಿಕ ಆಘಾತ ! ತಾಕತ್ ಇದ್ರೆ ಶೆಟ್ಟರ್ ಗೆದ್ದು ತೋರಿಸಲೆಂದು ಸವಾಲೆಸೆದ ಕಾಂಗ್ರೆಸ್ ಕಲಿಗಳು!

Jagadish Shetter
Image source - Siasat.com

Hindu neighbor gifts plot of land

Hindu neighbour gifts land to Muslim journalist

Jagadish Shettar : ಬಿಜೆಪಿ(BJP) ಯಿಂದ ಟಿಕೆಟ್ ಕೊಡದೇ ಇದ್ದಿದ್ದಕ್ಕೆ ಮುನಿಸಿಕೊಂಡು ಕಾಂಗ್ರೆಸ್(Congress) ಪಕ್ಷ ಸೇರಿಸಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್(Jagadish Shettar), ಈಗ ಕಾಂಗ್ರೆಸ್ ನಿಂದ ಟಿಕೆಟ್ ಪಡೆದಿದ್ದಾರೆ. ಆದರೆ, ಬಿಜೆಪಿಯ ಭದ್ರಕೋಟೆಯೆನಿಸಿರುವ ಹುಬ್ಬಳ್ಳಿ ಧಾರವಾಡ(Hubballi -Dharawad) ಸೆಂಟ್ರಲ್ ಕ್ಷೇತ್ರದ ಜನರು ಈ ಬಾರಿ ಪಕ್ಷ ಬದಲಿಸಿರುವ ಅವರನ್ನು ಅಲ್ಲಿನ ಜನರು ಕೈ ಹಿಡಿಯುತ್ತಾರಾ ಎಂಬ ಪ್ರಶ್ನೆ ಉದ್ಬವಾದ ಬೆನ್ನಲ್ಲೇ ಇದೀಗ ಶೆಟ್ಟರ್ ಗೆ ಆರಂಭಿಕ ಆಘಾತ ಉಂಟಾಗಿದೆ.

ಹೌದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shetter) ಕಾಂಗ್ರೆಸ್ (Congress) ಸೇರ್ಪಡೆಗೊಂಡ ಬೆನ್ನಲ್ಲೇ ಆರಂಭಿಕ ಆಘಾತ ಉಂಟಾಗಿದೆ. ಶೆಟ್ಟರ್ ವಿರುದ್ಧ ಧಾರವಾಡ (Dharawada) ಜಿಲ್ಲಾ ಕಾಂಗ್ರೆಸ್‌ನಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅಭಿಮಾನಿಗಳ ಆಕ್ರೋಶಕ್ಕೆ ಶೆಟ್ಟರ್ ಗುರಿಯಾಗಿದ್ದಾರೆ. ಯಾಕೆಂದರೆ ಪಕ್ಷದಲ್ಲಿ ಅಶಿಸ್ತಿನ ವಾತಾವರಣ ನಿರ್ಮಾಣವಾಗಿದ್ದು ಸಿದ್ದರಾಮಯ್ಯ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಗಿರೀಶ ಗದಿಗೆಪ್ಪಗೌಡ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ!

ತನ್ನ ಉಚ್ಛಾಟನೆಯಿಂದ ಕೆಂಡಾಮಂಡಲರಾದ ಗಿರೀಶ ಗದಿಗೆಪ್ಪಗೌಡ ಜಗದೀಶ್ ಶೆಟ್ಟರ್ ವಿರುದ್ಧ ಅಸಮಾಧಾನಗೊಂಡಿದ್ದು, ಶೆಟ್ಟರ್ ಕಾಂಗ್ರೆಸ್‌ಗೆ ಬಂದಮೇಲೆ ಪಕ್ಷದಲ್ಲಿ ಬೇರೆಯ ರೀತಿಯ ವಾತಾವರಣ ನಿರ್ಮಾಣವಾಗಿದೆ. ಇದು ಸರಿಯಲ್ಲ ಎಂದು ಶೆಟ್ಟರ್‌ ಹಾಗೂ ಅವರ ಬೆಂಬಲಿಗರ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಇಷ್ಟೇ ಅಲ್ಲದೆ ಶೆಟ್ಟರ್ ಅವರ ಆಪ್ತ ನಾಗೇಶ್ ಕಲಬುರಗಿಯಲ್ಲಿ ನಮ್ಮನ್ನು ಹಿಡಿತದಲ್ಲಿಟ್ಟಿಕೊಂಡು ನಿಯಂತ್ರಣ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲಾ ಉಸ್ತುವಾರಿ ಪಿ.ವಿ ಮೋಹನ್, ಶೆಟ್ಟರ್‌ರನ್ನು ಸಿಎಂ ಮಾಡುತ್ತೇವೆ ಅಂತ ಹೇಳುತ್ತಿದ್ದಾರೆ. ಶೆಟ್ಟರ್ ಅವರು ಸೌಮ್ಯ ಸ್ವಭಾವದವರಲ್ಲ. ಅವರಿಗೆ ಬೇರೆಯದ್ದೆ ಮುಖವಿದೆ. ಇದರೊಂದಿಗೆ ಶೆಟ್ಟರ್ ಪಕ್ಷಕ್ಕೆ ಬಂದ್ಮೇಲೆ ಪಂಚಮಸಾಲಿಗಳನ್ನು ತುಳಿಯುತ್ತಿದ್ದಾರೆ. ಶೆಟ್ಟರ್ ಅದು ಹೇಗೆ ಚುನಾವಣೆ ಗೆಲ್ಲುತ್ತಾರೆ ನಾವು ನೋಡುತ್ತೇವೆ. ಇನ್ಮುಂದೆ ಶೆಟ್ಟರ್ ವರ್ಸಸ್ ಪಂಚಮಿಸಾಲಿಗಳು ಎಂದು ಸವಾಲೆಸಿದ್ದಾರೆ.

ಅಂದಹಾಗೆ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಇತಿಹಾಸವನ್ನು ನೋಡೋದಾದ್ರೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ. ಒಬ್ಬರು – ಎಸ್.ಆರ್. ಬೊಮ್ಮಾಯಿ ಹಾಗೂ ಮತ್ತೊಬ್ಬರು ಜಗದೀಶ್ ಶೆಟ್ಟರ್. ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ತಂದೆ ಎಸ್.ಆರ್. ಬೊಮ್ಮಾಯಿ ಅವರನ್ನು ಶೆಟ್ಟರ್ ಇದೇ ಕ್ಷೇತ್ರದಲ್ಲಿ 1994ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸೋಲಿಸಿ ಗೆಲುವು ಸಾಧಿಸಿದ್ದರು. ಆಗಿನಿಂದಲೂ ಶೆಟ್ಟರ್ ಅವರೇ ಇಲ್ಲಿ ಸತತವಾಗಿ ಜಯ ಸಾಧಿಸುತ್ತಾ ಬಂದಿದ್ದಾರೆ. ಆದರೆ, ಈ ಬಾರಿ ಪಕ್ಷ ಬದಲಿಸಿರುವ ಅವರನ್ನು ಅಲ್ಲಿನ ಜನರು ಕೈ ಹಿಡಿಯುತ್ತಾರಾ ಎಂಬುದು ಕುತೂಹಲದ ಪ್ರಶ್ನೆ.

ಇದನ್ನೂ ಓದಿ: Karnataka Election -2023 : ಈ ಶಾಸಕನ ವಿರುದ್ಧ ತೊಡೆ ತಟ್ಟಿ ಒಂದೇ ವಾಹನದಲ್ಲಿ ಬಂದು ನಾಮಪತ್ರ ಸಲ್ಲಿಸಿದ ಇಬ್ಬರು ಪಕ್ಷೇತರ ಅಭ್ಯರ್ಥಿಗಳು