Karnataka 2nd PUC Supplementary Exam 2023: ಅನುತ್ತೀರ್ಣಗೊಂಡ ವಿದ್ಯಾರ್ಥಿಗಳೇ ನಿರಾಶರಾಗಬೇಡಿ! ನಿಮಗೊಂದು ಮಾಹಿತಿ ಇಲ್ಲಿದೆ, ಓದಿ!!
Karnataka 2nd-PUC Supplementary Exam 2023: 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ (Karnataka 2nd PUC Exam 2023 result) ಈಗಾಗಲೇ ಹೊರಬಿದ್ದಿದೆ. ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆ (dakshina kannada) ಪ್ರಥಮ (95.33%) ಸ್ಥಾನ ಪಡೆದಿದ್ದು, ಉಡುಪಿ ಜಿಲ್ಲೆ (Udupi) (95.24%) ನಂತರದ ಸ್ಥಾನವನ್ನು ಬಾಚಿಕೊಂಡಿದೆ. ಮೂರನೆ ಸ್ಥಾನ ಕೊಡಗು (Kodagu) ಜಿಲ್ಲೆ (90.55%) ಅಲಂಕರಿಸಿದೆ. ಪರೀಕ್ಷೆಯಲ್ಲಿ ಹಲವರು ಪಾಸ್ ಆಗಿದ್ದರೆ ಕೆಲವರು ಫೇಲ್ (fail) ಆಗಿರುತ್ತಾರೆ. ಪಾಸ್ ಆದವರು ಖುಷಿಯಿಂದ ಸಿಹಿ ಹಂಚಿ ಮುಂದಿನ ಹೆಜ್ಜೆಗೆ ಯೋಜನೆ ರೂಪಿಸುತ್ತಿದ್ದರೆ, ಫೇಲ್ ಆದವರು ಚಿಂತೆಗೀಡಾಗಿರುತ್ತಾರೆ. ಆದರೆ, ಅನುತ್ತೀರ್ಣಗೊಂಡ ವಿದ್ಯಾರ್ಥಿಗಳೇ ನಿರಾಶರಾಗಬೇಡಿ, ಯಾಕೆ ಗೊತ್ತಾ? ಇಲ್ಲಿದೆ ನೋಡಿ ನಿಮಗೆ ಮಹತ್ವದ ಮಾಹಿತಿ.
ಹೌದು, ಈ ಬಾರಿಯ ಪರೀಕ್ಷೆಯಲ್ಲಿ ಫೇಲ್ ಆಗಿರುವೆ ಎಂದು ಚಿಂತಿಸುವ ಅಗತ್ಯವಿಲ್ಲ. 2023ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ (Karnataka 2nd-PUC Supplementary Exam 2023) ನಡೆಯಲಿದೆ. ನೀವು ಈ ಪರೀಕ್ಷೆ ಬರೆದು ಪಾಸ್ ಆಗಬಹುದು. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು ಆಗಸ್ಟ್ ಆಗಸ್ಟ್ 12ರಿಂದ 25 ರವರೆಗೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ
ಫೇಲ್ ಆದ ವಿದ್ಯಾರ್ಥಿಗಳು (Karnataka 2nd PUC Exam 2023 failed students) ಮತ್ತೆ ಪರೀಕ್ಷೆ ಬರೆಯಲು ಶುಲ್ಕ ಪಾವತಿಸಬೇಕು. ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ಫೇಲ್ ಆಗಿದ್ದು, ಅದರ ಪರೀಕ್ಷೆ ಬರೆಯಲು 140 ರೂ. ಪಾವತಿಸಬೇಕು. 2 ವಿಷಯಕ್ಕೆ 270 ರೂ. 3 ಅಥವಾ ಹೆಚ್ಚಿನ ವಿಷಯಗಳಿಗೆ 400 ರೂ. ಶುಲ್ಕವನ್ನು ಪಾವತಿಸಬೇಕು. ಆದರೆ, ಈ ಶುಲ್ಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ & ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ.
ಇನ್ನು ಫಲಿತಾಂಶ ರಿಜೆಕ್ಟ್ ಮಾಡಿದ ವಿದ್ಯಾರ್ಥಿಗಳು ಕೂಡ ಶುಲ್ಕ ಪಾವತಿಸಬೇಕಿದ್ದು, ಪ್ರಥಮ ಬಾರಿಗೆ ಒಂದು ವಿಷಯಕ್ಕೆ 175 ರೂ.ಪಾವತಿಸಬೇಕು. ಹಾಗೂ ಎರಡು & ಕೊನೆಯ ಸಲ ಒಂದು ವಿಷಯಕ್ಕೆ 350 ರೂ. ಶುಲ್ಕ ಪಾವತಿಸಬೇಕಿದೆ. ಅಂಕಪಟ್ಟಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ & ಪ್ರವರ್ಗ-1ರ ವಿದ್ಯಾರ್ಥಿಗಳ ಜೊತೆಗೆ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ 50 ರೂ. ಶುಲ್ಕವನ್ನು ಪಾವತಿಸಬೇಕು.
ಏಪ್ರಿಲ್ 21 ರಿಂದ 26 ರೊಳಗೆ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು. ಗಡುವು ಕಳೆದ ನಂತರ ಹಣ ಕಟ್ಟಿದರೆ ಒಂದು ದಿನಕ್ಕೆ 50 ರೂ.ನಂತೆ ದಂಡ ಹಾಕಲಾಗುತ್ತದೆ. ಏಪ್ರಿಲ್ 26 ರ ನಂತರ ಮೇ 2ರವರೆಗೆ ಪರೀಕ್ಷಾ ಶುಲ್ಕದ ಜೊತೆಗೆ ದಂಡವೂ ಕಟ್ಟಬೇಕಾಗುತ್ತದೆ. ಹಾಗಾಗಿ ಸೂಚಿಸಿದ ದಿನಾಂಕದಂದೇ ಶುಲ್ಕ ಪಾವತಿಸಿ.
ಇದನ್ನೂ ಓದಿ: 2nd PUC Result: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ! ಯಾವ ಜಿಲ್ಲೆ ಪಡೆದುಕೊಂಡಿದೆ ಎಷ್ಟನೇ ಸ್ಥಾನ? ಇಲ್ಲಿದೆ ಕಂಪ್ಲೀಟ್ ವಿವರ!