K Annamalai: ಅಣ್ಣಾಮಲೈಗೆ 48 ಗಂಟೆಗಳ ಒಳಗೆ ಕ್ಷಮೆ ಯಾಚಿಸಲು ಲೀಗಲ್ ನೋಟಿಸ್ !

Annamalai : ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ( Annamalai) ಅವರಿಗೆ ಬುಧವಾರ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ತಮಿಳುನಾಡು ಕ್ರೀಡಾ ಸಚಿವ ಮತ್ತು ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಅವರು ಲೀಗಲ್ ನೊಟೀಸ್ ನೀಡಿದ್ದಾರೆ.

‘ ನಮ್ಮ ವಿರುದ್ಧ ಮಾಡಿರುವ ಮಾನಹಾನಿ ಆರೋಪಗಳಿಗಳಿಗೆ ಸಂಬಂಧಿಸಿದಂತೆ ಇನ್ನು 48 ಗಂಟೆಗಳಲ್ಲಿ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು’ ಎಂದು ಈ ನೋಟಿಸಿನ ಮೂಲಕ ತಿಳಿಸಲಾಗಿದೆ.

‘ನೀವು ಮಾಡಿರುವ ಎಲ್ಲಾ ಆರೋಪಗಳು ದುರುದ್ದೇಶಪೂರಿತವಾಗಿವೆ ಮತ್ತು ಸತ್ಯದಿಂದ ದೂರವಿವೆ. ನೀವು ಮಾಡಿದಂತಹ ಮಾನಹಾನಿಗೆ ಕಾನೂನಿನ ಕ್ರಮ ಜರುಗಿಸಬಹುದು. ಆದ್ದರಿಂದ ನಮ್ಮ ಕಕ್ಷಿದಾರರ ಒಳ್ಳೆಯ ಹೆಸರು ಮತ್ತು ಖ್ಯಾತಿಗೆ ಹಾನಿಯಾಗಿದ್ದು, 7 50 ಕೋಟಿ ಮಾನಹಾನಿ ಪರಿಹಾರ ಪಾವತಿಸಲು ನೀವು ಜವಾಬ್ದಾರರಾಗಿರುತ್ತೀರಿ. ಆದ್ದರಿಂದ ತಕ್ಷಣ ಕ್ಷಮೆ ಯಾಚಿಸಿ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಕಳೆದ ಏಪ್ರಿಲ್ 14 ರಂದು ‘ಡಿಎಂಕೆ ಫೈಲ್ಸ್’ ಬಿಡುಗಡೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅಣ್ಣಾಮಲೈ ಉದಯನಿಧಿ ಮತ್ತು ರೆಡ್ ಗಿಯಾಂಟ್ ಪ್ರೊಡಕ್ಷನ್ ಹೌಸ್ ವಿರುದ್ಧ ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆಂದು ಡಿಎಂಕೆ ಸಂಸದ ಮತ್ತು ಹಿರಿಯ ವಕೀಲ ಪಿ. ವಿಲ್ಸನ್ ಅವ್ರು ಕಳುಹಿಸಿರುವ ಲೀಗಲ್ ನೋಟಿಸ್‌ನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ: Shivmogga BJP Ticket : ಕೊನೆಯ ಹಂತದಲ್ಲಿ ಕೈ ತಪ್ಪಿದ ಶಿವಮೊಗ್ಗ ಟಿಕೆಟ್! ರಾಜಕೀಯ ನಿಲುವು ಪ್ರಕಟಿಸಿದ ತಂದೆ – ಮಗ!

Leave A Reply

Your email address will not be published.