Korean vlogger: ಕೊರಿಯನ್​ ವ್ಲಾಗರ್​ಗೆ ತನ್ನ ಗುಪ್ತಾಂಗ ತೋರಿಸಿದ ಪುಂಡು ಹುಡುಗ: ಕೊರಿಯನ್ ಹರಿಬಿಟ್ಟ ವಿಡಿಯೋ ನೋಡಿ ನೆಟ್ಟಿಗರ ಆಕ್ರೋಶ

Korean vlogger: ಯೂಟ್ಯೂಬರ್ಸ್ ಹಾಗೂ ವ್ಲಾಗರ್​ ಗಳು(Korean vlogger) ರಾಜ್ಯ, ದೇಶಗಳನ್ನು ಸುತ್ತಿ ಅನೇಕ ವಿಡಿಯೋಗಳನ್ನು ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡುತ್ತಾರೆ. ಅಂತೆಯೇ ಇಲ್ಲೊಬ್ಬಳು ಕೊರಿಯನ್​ ವ್ಲಾಗರ್​ ನಮ್ಮ ಭಾರತದಲ್ಲಿ ವಿಡಿಯೋ ಮಾಡಿಕೊಂಡು ಸುತ್ತಾಡುವಾಗ ನೀಚನೊಬ್ಬ ಫಾಲೋ ಮಾಡಿಕೊಂಡು ಬಂದು ತನ್ನ ಗುಪ್ತಾಂಗವನ್ನು ತೋರಿಸಿ ಅಸಭ್ಯವಾಗಿ ವರ್ತಿಸಿರೋ ಘಟನೆ ಬೆಳಕಿಗೆ ಬಂದಿದೆ.

 

ಹೌದು, ರಾಜಸ್ಥಾನ(Rajasthan)ದ ಜೋಧ್​ಪುರ(Jodpura)ದಲ್ಲಿ ಪ್ರವಾಸಿ ತಾಣಗಳನ್ನೆಲ್ಲ ವಿಡಿಯೋ ಮಾಡಿಕೊಂಡು ತಿರುಗುತ್ತಿದ್ದ ಕೊರಿಯನ್​ ವ್ಲಾಗರ್​ಗೆ ಹಿಂಬಾಲಿಸಿಕೊಂಡು ಬಂದ ಪುಂಡನೊಬ್ಬ ಚಡ್ಡಿ ಬಿಚ್ಚಿ ತನ್ನ ಗುಪ್ತಾಂಗ ಪ್ರದರ್ಶಿಸುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾನೆ.

ಅಂದಹಾಗೆ ಯುವಕ ಗುಪ್ತಾಂಗ ಪ್ರದರ್ಶಿಸಿದ ವಿಡಿಯೋವನ್ನು ಸಂತ್ರಸ್ತ ಕೊರಿಯನ್​ ವ್ಲಾಗರ್​ ಬಿಡುಗಡೆ ಮಾಡಿದ ಬಳಿಕ ಅದರ ಆಧಾರದ ಮೇಲೆ ಯುವಕನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

ಸ್ವಾತಿ ಮಾಲಿವಾಲ್​ ಆಕ್ರೋಶ
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಅವರು ಕೊರಿಯನ್ ವ್ಲಾಗರ್‌ನ ವೀಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯುವಕನ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸಿ ರಾಜಸ್ಥಾನದ ಮುಖ್ಯಮಂತ್ರಿಗೆ ಸ್ವಾತಿ ಮಾಲಿವಾಲ್​ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ಆರೋಪಿಯನ್ನು ಬಂಧಿಸಿರುವುದಾಗಿ ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.

ಹಿಂಬಾಲಿಸಿ ಅನುಚಿತ ವರ್ತನೆ
ಜೋಧ್‌ಪುರದ ಪ್ರವಾಸಿ ತಾಣದಲ್ಲಿ ಕೊರಿಯನ್​ ಯುವತಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಆಕೆಯನ್ನು ಹಿಂಬಾಲಿಸಿದ ಯುವಕನೊಬ್ಬ ಆಕೆಯ ಎದುರೇ ತನ್ನ ಗುಪ್ತಾಂಗವನ್ನು ಪ್ರದರ್ಶಿಸಿ ಹದ್ದು ಮೀರಿದ ವರ್ತನೆ ತೋರಿದ್ದ. ವಿಡಿಯೋ ರೆಕಾರ್ಡ್​ ಮಾಡಿದ್ದ ಯುವತಿ ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಳು. ವಿಡಿಯೋ ವೈರಲ್​ ಆಗಿ ಯುವಕನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಕೂಡಲೇ ಬಂಧಿಸುವಂತೆ ಒತ್ತಾಯ ಮಾಡಿದ್ದರು.

 

 

ಇದನ್ನು ಓದಿ: Treatment for stroke: ಸ್ಟ್ರೋಕ್ ಆದವರಿಗೆ ಸರಿಯಾದ ಚಿಕಿತ್ಸೆ ಯಾವುದು? ಇಲ್ಲಿದೆ ನೋಡಿ ಸಲಹೆ

 

Leave A Reply

Your email address will not be published.