ಎ.21: ಮಂಗಳೂರು ಹಾಗೂ ಶಿವಮೊಗ್ಗ ವಿಭಾಗದ ಬಿಜೆಪಿ ಮಹಿಳಾ ಕಾರ್ಯ ಪ್ರಮುಖರ ಸಭೆ

Share the Article

BJP Women Leaders :ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಶಿವಮೊಗ್ಗ ವಿಭಾಗದ ಬಿಜೆಪಿ ಮಹಿಳಾ ಕಾರ್ಯ ಪ್ರಮುಖರ (BJP Women Leaders) ಸಭೆ ಎ. 21ರಂದು ಬೆಳಗ್ಗೆ 10ಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿ ಯಲ್ಲಿ ನಡೆಯಲಿದೆ. ಈ ಕುರಿತು ಮಹಿಳಾ ಕಾರ್ಯದ ರಾಜ್ಯ ಸಹ ಸಂಚಾಲಕಿ ಶ್ಯಾಮಲಾ ಕುಂದರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಸಭೆಯಲ್ಲಿ 90ರಿಂದ 95 ಮಂದಿ ಸೇರುವ ನಿರೀಕ್ಷೆಯಿದ್ದು ಮಹಿಳಾ ಕಾರ್ಯದ ರಾಷ್ಟ್ರೀಯ ಉಪಾಧ್ಯಕ್ಷೆ ಜ್ಯೋತಿ ಶೇಥಿ, ಮಹಿಳಾ ಮೋರ್ಚಾದ ರಾಜ್ಯ ಸಹಾ ಪ್ರಭಾರಿ ಅಶ್ವಿ‌ನಿ ಎಂ.ಎನ್‌. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಹಿಳಾ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಶೆಟ್ಟಿ, ಮಹಿಳಾ ಕಾರ್ಯದ ಜಿಲ್ಲಾ ಸಂಚಾಲಕಿ ನಳಿನಿ ಪ್ರದೀಪ್‌ ರಾವ್‌, ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.

ಇದನ್ನೂ ಓದಿ: Mohiuddin Bawa: ರಂಝಾನ್ ಮಾಸದಲ್ಲಿ ಉಪವಾಸ ಹಿಡಿದ ನನ್ನನ್ನು ಸತಾಯಿಸಿ ಹಣ ಬಲಕ್ಕೆ ಟಿಕೆಟ್ ನೀಡಿದರು- ಮೊಯ್ದಿನ್ ಬಾವಾ

Leave A Reply