Congress Candidates: ಕಾಂಗ್ರೆಸ್ ನಿಂದ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ!!!

Congress Candidates : ಕಾಂಗ್ರೆಸ್ ತನ್ನ 6ನೇ ಹಾಗೂ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಬಾಕಿ ಉಳಿದ ಐದು ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ಈ ಮೂಲಕ ಕಾಂಗ್ರೆಸ್ ಈ ಬಾರಿಯ ಚುನಾವಣೆಗೆ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿ ( Congress Candidates) ಘೋಷಣೆ ಮಾಡಿದೆ.

ಕಾಂಗ್ರೆಸ್ ರಾಯಚೂರು ನಗರ ವಿಧಾಸಭಾ ಕ್ಷೇತ್ರಕ್ಕೆ ಮೊಹಮ್ಮದ್ ಶಲಾಂ, ಶಿಡ್ಲಘಟ್ಟ ವಿಧಾಸಭಾ ಕ್ಷೇತ್ರಕ್ಕೆ ಬಿ ವಿ ರಾಜೀವ್ ಗೌಡ, ರಾಜಧಾನಿ ಬೆಂಗಳೂರಿನ ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರಕ್ಕೆ (ಪರಿಶಿಷ್ಟ ಜಾತಿ ಮೀಸಲು ) ಎಸ್.ಆನಂದ್ ಕುಮಾರ್, ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಎಚ್.ಪಿ ಶ್ರೀಧರ್ ಗೌಡ, ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಇನಾಯತ್ ಅಲಿ ಎಂಬುವವರಿಗೆ ಟಿಕೆಟ್ ನೀಡಲಾಗಿದೆ.

Leave A Reply

Your email address will not be published.