Mangalore ಮೈದಾನದಲ್ಲಿ ಮರ್ಡರ್: ಹಾಡ ಹಗಲೇ ಬಿಜೆಪಿ ಕಾರ್ಯಕರ್ತನ ಹತ್ಯೆ ಸಂಬಂಧ ನಾಲ್ವರು ಅರೆಸ್ಟ್

ಮಂಗಳೂರು: ಇಲ್ಲಿನ ನೆಹರೂ ಮೈದಾನದ ಬಳಿ ಫುಟ್‌ಬಾಲ್‌ ಗ್ರೌಂಡ್‌ನಲ್ಲಿ ಬಿಜೆಪಿ ಕಾರ್ಯಕರ್ತರೋರ್ವರ (BJP Activist) ಶವ ಪತ್ತೆಯಾಗಿದ ಪ್ರಕರಣವೊಂದಕ್ಕೆ ಕುರಿತಂತೆ ಪೊಲೀಸರು (Police) ನಾಲ್ವರನ್ನು ಬಂಧಿಸಿದ್ದಾರೆ. ಹಾಗೂ ವಿಚಾರಣೆ ನಡೆಸುತ್ತಿದ್ದಾರೆ. ಮಂಗಳೂರು ನಗರದ ನೆಹರೂ ಮೈದಾನದ (Nehru Football Ground, Mangaluru) ಇಲ್ಲಿ ಬಿಜೆಪಿ ಕಾರ್ಯಕರ್ತ 45ವರ್ಷದ ಜನಾರ್ದನ ಬರಿಂಜ್‌ ಎಂಬವರ ಶವವೊಂದು ಪತ್ತೆಯಾಗಿತ್ತು. ಇದೊಂದು ಕೊಲೆ ಆಗಿರಬಹುದು ಎಂದು ಶಂಕೆ ವ್ಯಕ್ತವಾಗಿದ್ದು.

 

ಅಂದ ಹಾಗೆ ಜನಾರ್ದನ್‌ ಅವರು ಬಂಟ್ವಾಳ (Bantwal) ತಾಲೂಕಿನ ಪೊಳಲಿ ಸಮೀಪದ ಅಮ್ಮುಂಜೆ ನಿವಾಸಿ. ಇವರು ಬಿಜೆಪಿಯ ಕಾರ್ಯಕರ್ತರಾಗಿ ಕೂಡಾ ಕೆಲಸ ಮಾಡಿಕೊಂಡಿದ್ದರು. ಮಂಗಳವಾರದಂದು ಇವರ ಹತ್ಯೆಯಾಗಿದೆ. ಇವರು ಮೈದಾನದಲ್ಲಿ ಕುಳಿತು ಕೊಂಡ ಸಂದರ್ಭದಲ್ಲಿ ದುಷ್ಕರ್ಮಿಗಳು ಬಂದು ಹತ್ಯೆ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಆದರೆ ಈ ದುಷ್ಕೃತ್ಯಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ಈ ಹತ್ಯೆ ಸುದ್ದಿ ಪೊಲೀಸರಿಗೆ ತಿಳಿದ ಕೂಡಲೇ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆದರೆ ಇವರ ಕುರಿತು ಇನ್ನೂ ಕೂಡಾ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

Leave A Reply

Your email address will not be published.