Women Attacked By People: ಅಕ್ರಮ ಗಣಿಗಾರಿಕೆ ಕಾರ್ಯಾಚರಣೆ ವೇಳೆ ಮಹಿಳಾಧಿಕಾರಿಯನ್ನು ಎಳೆದೊಯ್ದ ಆಘಾತಕಾರಿ video viral

Share the Article

ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿರುವ ಜನರು ಗಣಿ ಇಲಾಖೆಯ ಮಹಿಳಾ ಅಧಿಕಾರಿ ಕಾರ್ಯಾಚರಣೆಗೆ ಬಂದಾಗ  ಎಳೆದೊಯ್ದು ಹಲ್ಲೆ(Women Attacked By People) ನಡೆಸಿದ ಆಘಾತಕಾರಿ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಪ್ರಕರಣದಲ್ಲಿ 44 ಜನರನ್ನು ಬಂಧಿಸಲಾಗಿದೆ ಮತ್ತು ಮೂವರ ವಿರುದ್ಧ ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ಪಾಟ್ನಾ ಎಸ್ಎಸ್ಪಿ ಸೋಮವಾರ ದೃಢಪಡಿಸಿದ್ದಾರೆ. ವೀಡಿಯೊದಲ್ಲಿ, ಕನಿಷ್ಠ 10-15 ಜನರು ಇರುವುದು ಬೆಳಕಿಗೆ ಬಂದಿದೆ ಮತ್ತು ಗಣಿ ಇಲಾಖೆ ಅಧಿಕಾರಿಗಳು ಈ ಪ್ರದೇಶದ ಮೇಲೆ ದಾಳಿ ನಡೆಸಿದ್ದರಿಂದ ಗೊಂದಲದ ಪರಿಸ್ಥಿತಿಯನ್ನು ಕಾಣಬಹುದಾಗಿದೆ..

3 ಅಧಿಕಾರಿಗಳಿಗೆ ಗಾಯ:

ಪಾಟ್ನಾ (ಪಶ್ಚಿಮ) ಎಸ್ಪಿ ರಾಜೇಶ್ ಕುಮಾರ್ ಮಾತನಾಡಿ, “ಈ ಪ್ರದೇಶದಲ್ಲಿ ಮರಳು ಗಣಿಗಾರಿಕೆಗೆ ಸಂಬಂಧಿಸಿದ ಕಾರ್ಯಾಚರಣೆ ನಡೆಸುತ್ತಿದ್ದಾಗ ಸಮಾಜ ವಿರೋಧಿ ಶಕ್ತಿಗಳ ಗುಂಪು ಜಿಲ್ಲಾ ಗಣಿಗಾರಿಕೆ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ. 44 ಮಂದಿಯನ್ನು ಬಂಧಿಸಲಾಗಿದ್ದು, ಜಿಲ್ಲಾ ಗಣಿ ಅಧಿಕಾರಿ ಮತ್ತು ಇಬ್ಬರು ಗಣಿ ನಿರೀಕ್ಷಕರು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

Leave A Reply