Home Breaking Entertainment News Kannada Dhoomam Movie poster: ಹೊಂಬಾಳೆ ನಿರ್ಮಾಣದಲ್ಲಿ ಬಂತು ನೋಡಿ ಫಹಾದ್ ನಟನೆಯ ʼಧೂಮಂʼ ಪೋಸ್ಟರ್‌ !

Dhoomam Movie poster: ಹೊಂಬಾಳೆ ನಿರ್ಮಾಣದಲ್ಲಿ ಬಂತು ನೋಡಿ ಫಹಾದ್ ನಟನೆಯ ʼಧೂಮಂʼ ಪೋಸ್ಟರ್‌ !

Dhoomam Movie poster

Hindu neighbor gifts plot of land

Hindu neighbour gifts land to Muslim journalist

Dhoomam Movie poster : ಮಲಯಾಳಂ ಸ್ಟಾರ್‌ ನಟ ಫಹಾದ್ ಫಾಸಿಲ್ (Fahad fazil)ಅಂದ್ರೆ ಎಲ್ಲರಿಗೂ ಗೊತ್ತೇ ಇದೆ. ಹಾಗೆಯೇ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣಾ(Aparna) ಬಾಲಮುರಳಿ ನಟಿಸಿರುವ ಹೊಸ ಚಲನ ಚಿತ್ರದ ಧೂಮಂ'(dhoomam) ಫಸ್ಟ್ ಲುಕ್ ಪೋಸ್ಟರ್ ಇದೀಗ ರಿಲೀಸ್ ಆಗಿದೆ. ಹೊಂಬಾಳೆ ಫಿಲಂಸ್(hombaale films) ಇದೀಗ ಇನ್ನೊಂದು ಹೊಸ ಚಲನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು. ಇದೀಗ ಹೊಂಬಾಳೆ ಫಿಲಂಸ್‌ನ ಫೇಸ್‌ಬುಕ್ (Facebook) ಖಾತೆಯಲ್ಲಿ ಧೂಮಂ ಪೋಸ್ಟರ್ ಬಿಡುಗಡೆಯಾಗಿದೆ. ಪ್ರೇಕ್ಷಕರಲ್ಲಿ ಈ ಸಿನಿಮಾದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದೆ.

ಧೂಮಂ ಚಲನಚಿತ್ರದ ಪೋಸ್ಟರ್( dhoomam movie poster) ಬಿಡುಗಡೆಯಾಗುವ ಸಂದರ್ಭದಲ್ಲಿ ನಟ ಫಹಾದ್ ಫಾಸಿಲ್ (Fahad fazil)ತನ್ನ ಫೇಸ್ ಬುಕ್ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ ‘ಪ್ರತಿಯೊಂದು ಹೊಗೆಯಲ್ಲೂ ರಹಸ್ಯ ಅಡಗಿದೆ.. ಮುಚ್ಚಿಡಬಾರದ ರಹಸ್ಯಗಳು. ಈ ಸಸ್ಪೆನ್ಸ್‌ಫುಲ್ ಥ್ರಿಲ್ಲಿಂಗ್ ಡ್ರಾಮಾದೊಂದಿಗೆ ಹೃದಯ ಬಡಿತದ ರೈಡ್‌ಗೆ ಸಿದ್ಧರಾಗಿ. ಇದನ್ನು ನೋಡಿದ ಅಭಿಮಾನಿಗಳು(fans) ಸಿನಿಮಾವನ್ನು ನೋಡಲು ಇನ್ನಷ್ಟು ಕಾತುರದಿಂದ ಕಾಯುತ್ತಿದ್ದಾರೆ. ಪವನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಪರ್ಣಾ ಬಾಲಮುರಳಿ(Aparna balamurali) ನಾಯಕಿಯಾಗಿ ನಟಿಸಿದ್ದಾರೆ.

ಫಹಾದ್ ಮತ್ತು ಅಪರ್ಣಾ ‘ ಮಹೇಶ್ ರಿವೆಂಜ್ ‘(Mahesh revenge) ಚಿತ್ರದ ಮೂಲಕ ಕಾಣಿಸಿಕೊಂಡು ಇದೀಗ ‘ಧೂಮಂ’ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿ ನಿಂತಿದ್ದಾರೆ. ಥ್ರಿಲ್ಲರ್ ಕಥೆಯನ್ನು ಹೊಂದಿರುವ ಈ ‘ಧೂಮಂ’ ಚಿತ್ರವನ್ನು ಯು-ಟರ್ನ್ ಮತ್ತು ಲೂಸಿಯಾ ಖ್ಯಾತಿ ಡೈರೆಕ್ಟರ್‌ ಪವನ್ ಕುಮಾರ್(Pawan Kumar) ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಹುಬಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅಂದರೆ ಮಲಯಾಳಂ, ತಮಿಳು(Tamil), ತೆಲುಗು(Telugu) ಮತ್ತು ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಸಿನಿತೆರೆಯ ಮೇಲೆ ಕಾಣಿಸಿಕೊಳ್ಳಲಿದೆ ಎಂದು ಡೈರೆಕ್ಟರ್ ಈ ಮಾತನ್ನು ತಿಳಿಸಿದ್ದಾರೆ.

ಸಿನಿಮಾದಲ್ಲಿ ರೋಷನ್ ಮ್ಯಾಥ್ಯೂ(Roshan Mathew), ಅಚ್ಯುತ್ ಕುಮಾರ್, ಜಾಯ್ ಮ್ಯಾಥ್ಯೂ, ದೇವ್ ಮೋಹನ್ ಮತ್ತು ನಂದು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಪ್ರೀತಾ ಜಯರಾಮನ್ ಛಾಯಾಗ್ರಹಣವಿದ್ದು ಸಂಪೂರ್ಣವಾಗಿ ಈ ಚಿತ್ರವನ್ನು ಚಿತ್ರೀಕರಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ(poornachandra Tejaswi) ಚಿತ್ರದ ಸಂಗೀತ ನಿರ್ದೇಶಕರು. ಕ್ರಿಯೇಟಿವ್ ನಿರ್ಮಾಪಕ ಕಾರ್ತಿಕ್ ವಿಜಯ್ ಸುಬ್ರಮಣ್ಯಂ. ಧ್ವನಿ ವಿನ್ಯಾಸ ರಂಗನಾಥ್ ರವಿ(ranganatha Ravi), ಕಲೆ ಅನೀಸ್ ನಾಟೋಡಿ, ವಸ್ತ್ರ ವಿನ್ಯಾಸ ಪೂರ್ಣಿಮಾ ರಾಮಸ್ವಾಮಿ, ಪ್ರೊಡಕ್ಷನ್ ಕಂಟ್ರೋಲರ್ ಶಿಬು ಸುಶೀಲನ್, ಪ್ರಜಾವಾಣಿ ಮಂಜು ಗೋಪಿನಾಥ್. ಈ ಚಲನಚಿತ್ರದಲ್ಲಿ ಎಲ್ಲರೂ ಇದ್ದು. ಈ ಚಿತ್ರ ತೆರೆಯ ಮೇಲೆ ಆದಷ್ಟು ಬೇಗ ಕಾಣಿಸಿಕೊಳ್ಳಲಿದೆ. ಹಾಗೆಯೇ ಈ ಚಲನಚಿತ್ರವನ್ನು(film) ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.