Maruti Super Carry: ಮಾರುತಿ ಬಿಡುಗಡೆ ಮಾಡಿದೆ ಜಬರ್ದಸ್ತ್ ಹೊಸ ಸೂಪರ್ ಕ್ಯಾರಿ ಕಾರು! ಏನಿದರ ವಿಶೇಷತೆ?

Maruti Super Carry : ಹೊಸ ವರ್ಷದಲ್ಲಿ ಆಟೊಮೊಬೈಲ್ (Automobile )ಕ್ಷೇತ್ರವು ಸಾಕಷ್ಟು ಸುಧಾರಣೆ ಕಂಡಿದ್ದು, 2023ರ ಅಂಕಿ ಅಂಶ ಪ್ರಕಾರ ಕಾರು (Car) ಉದ್ಯಮದ ಮಾರುಕಟ್ಟೆಯಲ್ಲಿ (Market ) ಭಾರತದಲ್ಲಿ( India)ಅತಿ ಹೆಚ್ಚು ಮಾರಾಟವಾದ ಟಾಪ್ 5 ಕಾರುಗಳ ಪೈಕಿ ಮಾರುತಿ ಸುಜುಕಿ(Maruti Suzuki) ಅಗ್ರಗಣ್ಯ ಸ್ಥಾನದಲ್ಲಿದ್ದು, ಇದರ ನಡುವೆ ಇದಕ್ಕೆ ಪೈಪೋಟಿ ನೀಡಲು ಉಳಿದ ಕಾರು ತಯಾರಕ ಕಂಪನಿಗಳು ಮಾರುಕಟ್ಟೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಿದೆ. ಇದೀಗ, ಮಾರುಕಟ್ಟೆಯಲ್ಲಿ ತನ್ನ ಹವಾ ಸೃಷ್ಟಿ ಮಾಡಲು ಮಾರುತಿ ಸೂಪರ್ ಕ್ಯಾರಿಯನ್ನು(Maruti Super Carry) ಭಾರತೀಯ ಮಾರುಕಟ್ಟೆಯಲ್ಲಿ ಹೊಸ ರೂಪದಲ್ಲಿ ಬಿಡುಗಡೆ ಮಾಡಿದ್ದು, ಒಟ್ಟು ನಾಲ್ಕು ರೂಪಾಂತರಗಳಲ್ಲಿ ಎಂಟ್ರಿ ನೀಡಲಿದೆ.

ಮಾರುತಿ ಸುಜುಕಿ ತನ್ನ ಲೈಟ್ ಕಮರ್ಷಿಯಲ್ ವೆಹಿಕಲ್ (LCV) ಮಾರುತಿ ಸೂಪರ್ ಕ್ಯಾರಿಯನ್ನು(Maruti Super Carry) ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದ್ದು, ಇದರ ವೈಶಿಷ್ಟ್ಯದ (Maruti Super Carry Features)ಬಗ್ಗೆ ಗಮನ ಹರಿಸಿದರೆ, ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡೂ ರೂಪಾಂತರಗಳಲ್ಲಿ ದೊರೆಯಲಿದೆ. ಮಿನಿ ಟ್ರಕ್ CNG ಡೆಕ್, ಗ್ಯಾಸೋಲಿನ್ ಡೆಕ್ ಮತ್ತು ಗ್ಯಾಸೋಲಿನ್ ಕ್ಯಾಬ್ ಚಾಸಿಸ್ ರೂಪಾಂತರಗಳಲ್ಲಿ ದೊರೆಯಲಿದೆ.

ಮಾರುತಿ ಸೂಪರ್ ಕ್ಯಾರಿಯು ಕಂಪನಿಯ 1.2L ಅಡ್ವಾನ್ಸ್ಡ್ ಕೆ-ಸೀರೀಸ್ ಡ್ಯುಯಲ್ ಜೆಟ್, ಡ್ಯುಯಲ್ VVT ಎಂಜಿನ್‌ನಿಂದ ಚಾಲಿತವಾಗಲಿದೆ. ಈ ಮಿನಿ-ಟ್ರಕ್‌ನ 4-ಸಿಲಿಂಡರ್ ಎಂಜಿನ್ ಗರಿಷ್ಠ 59.4kW (80.7PS) ಮತ್ತು 104.4Nm ಗರಿಷ್ಠ ಟಾರ್ಕ್‌ನೊಂದಿಗೆ ಉತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಮಾರುತಿ ಸುಜುಕಿ ಹೊಸ CNG ಕ್ಯಾಬ್ ಚಾಸಿಸ್ ರೂಪಾಂತರವನ್ನು ಕೂಡ ಪರಿಚಯಿಸಿದೆ. ಫ್ರಂಟ್ ಡಿಸ್ಕ್ ಬ್ರೇಕ್‌, ರಿವರ್ಸ್ ಪಾರ್ಕಿಂಗ್ ಸೆನ್ಸರ್‌, ಸೀಟ್ ಬೆಲ್ಟ್ ರಿಮೈಂಡರ್‌ ಮತ್ತು ಹೊಸ ಎಂಜಿನ್ ಇಮೊಬಿಲೈಜರ್ ಸಿಸ್ಟಮ್ ಒಳಗೊಂಡಂತೆ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಸ ಸೂಪರ್ ಕ್ಯಾರಿ ಮಿನಿ-ಟ್ರಕ್ ನಲ್ಲಿ ಒದಗಿಸಲಿದೆ.

ಹೊಸ ಎಂಜಿನ್ ಅನ್ನು ಅಪ್ಡೇಟೆಡ್ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಕನೆಕ್ಟ್ ಮಾಡಲಾಗಿದೆ. ಈ ಹೊಸ ಸೂಪರ್ ಕ್ಯಾರಿಯಲ್ಲಿ ಫ್ಲಾಟ್ ಸೀಟ್ ವಿನ್ಯಾಸವನ್ನು ನೀಡಲಾಗಿದೆ. ಇದರ ಜೊತೆಗೆ ಸೂಪರ್ ಕ್ಯಾರಿ ಎಸ್-ಸಿಎನ್‌ಜಿ ರೂಪಾಂತರ 5 ಲೀಟರ್ ತುರ್ತು ಪೆಟ್ರೋಲ್ ಟ್ಯಾಂಕ್ ಅನ್ನು ಒಳಗೊಂಡಿದೆ. ಅಂದರೆ, CNG ಸಂಪೂರ್ಣ ಖಾಲಿಯಾದಾಗ ಅದರ ಪೆಟ್ರೋಲ್ ಅನ್ನು ಬಳಕೆ ಮಾಡಬಹುದು. ಸುರಕ್ಷತಾ ವೈಶಿಷ್ಟ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಎಂಜಿನ್ ಇಮೊಬಿಲೈಸರ್ ವಸಿಸ್ಟಮ್ ಅನ್ನು ಸೇರಿಸಲಾಗಿದ್ದು, ಅದರ ಸಿಎನ್‌ಜಿ ಆವೃತ್ತಿಯಲ್ಲಿ ಸಿಎನ್‌ಜಿ ಸಂಪೂರ್ಣ ಖಾಲಿಯಾದ ನಂತರ ಕೂಡ ಸುಮಾರು 70-75 ಕಿ.ಮೀ. ವರೆಗೆ ಕ್ರಮಿಸುವ ಸಾಮರ್ಥ್ಯ ಒಳಗೊಂಡಿದೆ. ಇದು ಒಟ್ಟು ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಇಷ್ಟೆಲ್ಲ ವೈಶಿಷ್ಟ್ಯ ಒಳಗೊಂಡ ಕಾರಿನ ಬೆಲೆ ಎಷ್ಟು ಎಂಬ ಕುತೂಹಲ ಸಹಜವಾಗಿ ಕಾಡುತ್ತದೆ.

ಕಾರಿನ ಬೆಲೆ ಎಷ್ಟು?
ಈ ಕಾರು ನಾಲ್ಕು ವೆರಿಯೇಂಟ್ ಗಳಲ್ಲಿ ಬಿಡುಗಡೆಯಾಗಿದ್ದು ಇದರ ಬೆಲೆ ಹೀಗಿದೆ:
ಗ್ಯಾಸೋಲಿನ್ ಡೆಕ್ -5,30,500 ರೂಪಾಯಿ.
ಗ್ಯಾಸೋಲಿನ್ ಕ್ಯಾಬ್ ಚಾಸಿಸ್ – 5,15,500 ರೂಪಾಯಿ.
ಸಿಎನ್ ಜಿ ಡೆಕ್ – 6,30,500 ರೂಪಾಯಿ.
ಸಿಎನ್ ಜಿ ಕ್ಯಾಬ್ ಚಾಸಿಸ್ – 6,15,500 ರೂಪಾಯಿ.

ಇದನ್ನೂ ಓದಿ: PM Kisan : ಪಿಎಂ ಕಿಸಾನ್‌ ಯೋಜನೆಗೆ ಅರ್ಜಿ ಸಲ್ಲಿಸಲು ಬಂದಿದೆ ಹೊಸ ಅಪ್ಡೇಟ್‌!

 

Leave A Reply

Your email address will not be published.