Shocking News: ಕರೊನಾದಿಂದ ಮೃತಪಟ್ಟಿದ್ದ ಆ ವ್ಯಕ್ತಿ 2 ವರ್ಷಗಳ ಬಳಿಕ ಮನೆಗೆ ಬಂದ!

Man died from covid : ಇಡೀ ವಿಶ್ವವವನ್ನೇ ಕಾಡಿದ ಕೊರೋನಾ(Corona) ಮಹಾಮಾರಿಯಿಂದ ಅನೇಕ ಸಾವು ನೋವುಗಳು ಆದವು. ಸಂಬಂಧಿಕರ, ಕುಟುಂಬದವರ ಶವದ ಮುಖ ಕೂಡ ನೋಡಲಾಗದ ಕೆಟ್ಟ ಪರಿಸ್ಥಿತಿ ಅದಾಗಿತ್ತು. ಅಂತೆಯೇ ಅಂದು ಕರೊನಾದಿಂದ ಮೃತಪಟ್ಟಿದ್ದ ವ್ಯಕ್ತಿ  (Man died from Covid) ಇದೀಗ ಎರಡು ವರ್ಷಗಳ ಬಳಿಕ ಪ್ರತ್ಯಕ್ಷನಾಗಿದ್ದಾನೆ.

ಗುಜರಾತ್ ಆಸ್ಪತ್ರೆಯಲ್ಲಿ ಕಮಲೇಶ್ ಪಾಟಿದಾರ್(Kamalesh Patidar-35) ಎಂಬಾತ ಕೊರೋನಾದಿಂದ ಮೃತಟ್ಟಿದ್ದಾನೆ ಎಂದು ಆಸ್ಪತ್ರೆ ಸಿಬ್ಬಂದಿಗಳು ಘೋಷಿಸಿದ್ದರು. ಬಳಿಕ ಕುಟುಂಬದ ಸದಸ್ಯರು ಕೂಡ ಆತನ ಶವ ಸಂಸ್ಕಾರ ಮಾಡಿ ಅಂತಿಮ ವಿಧಿ ವಿಧಾನ ನೆರವೇರಿಸಿ ಸುಮ್ಮನಾಗಿದ್ದಾರು. ಆದರೆ ಅಚ್ಚರಿ ಎಂಬಂತೆ ಎಲ್ಲರೂ ಸಾವನ್ನಪ್ಪಿದ್ದಾನೆ ಎಂದು ನಿರ್ಧರಿಸಿದ್ದ ವ್ಯಕ್ತಿ ಎರಡು ವರ್ಷಗಳ ನಂತರ ಪ್ರತ್ಯಕ್ಷನಾಗಿದ್ದಾನೆ.

ಹೌದು, ಕಮಲೇಶ್ ಪಾಟಿದಾರ್ ಇದೆಲ್ಲಾ ಆಗಿ ಎರಡು ವರ್ಷಗಳ ನಂತರ ನಿನ್ನೆ(ಏ.15) ಬೆಳಿಗ್ಗೆ 6 ಗಂಟೆ ಸುಮಾರಿಗೆ ಕರೋಡ್ಕಳ ಗ್ರಾಮದ ತನ್ನ ತಾಯಿಯ ಚಿಕ್ಕಮ್ಮನ ಮನೆಯ ಬಾಗಿಲು ತಟ್ಟಿದ್ದಾನೆ. ಕುಟುಂಬಸ್ಥರು ಬಾಗಿಲು ತೆಗೆಯುತ್ತಿದ್ದಂತೆ ಒಂದು ಕ್ಷಣ ಗಾಬರಿಯಾಗಿದ್ದಾರೆ.

ಅಂದಹಾಗೆ ಕಮಲೇಶ್ ಪಾಟಿದಾರ್ ಸೋದರಸಂಬಂಧಿ ಮುಖೇಶ್ ಪಾಟಿದಾರ್ ಮಾತನಾಡಿ “ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕಿಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ಪಡೆಯುತ್ತಿದ್ದ ಕಮಲೇಶ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದರು. ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನು ಹಸ್ತಾಂತರಿಸಿದ ನಂತರ, ಕುಟುಂಬ ಸದಸ್ಯರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದರು” ಎಂದು ತಿಳಿಸಿದ್ದಾರೆ. ಆದರೆ ಎರಡು ವರ್ಷಗಳ ನಂತರ ಮನೆಗೆ ಬಂದಿರುವ ಕಮಲೇಶ್ ಇಷ್ಟು ಸಮಯ ಎಲ್ಲಿದ್ದ? ಏನು ಮಾಡುತ್ತಿದ್ದ ಎಂಬುದರ ಬಗ್ಗೆ ಅವರು ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ ಎಂದು ವರದಿಯಾಗಿದೆ.

ಇನ್ನು ಕಮಲೇಶ್ ಪಾಟಿದಾರ್ 2021 ರಲ್ಲಿ ಕರೊನಾ ಸೋಂಕಿನಿಂದ ಬಳಲುತ್ತಿದ್ದ. ವಡೋದರಾದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾನೆ ಎಂದು ಕಾನ್ವಾನ್ ಪೊಲೀಸ್ ಠಾಣಾಧಿಕಾರಿ ರಾಮ್ ಸಿಂಗ್ ರಾಥೋಡ್ ಹೇಳಿದ್ದಾರೆ. ಮೃತಪಟ್ಟಿದ್ದ ಎಂದು ಭಾವಿಸಿದ್ದ ವ್ಯಕ್ತಿ ಎರಡು ವರ್ಷಗಳ ಬಳಿಕ ಪ್ರತ್ಯಕ್ಷನಾಗಿದ್ದಾನೆ. ಈ ಬಗ್ಗೆ ಕಮಲೇಶ್​ನನ್ನು ವಿಚಾರಣೆಗೆ ಒಳಪಡಿಸಲಾಗುವುದು. ಬಳಿಕವಷ್ಟೇ ಎಲ್ಲಾ ಅನುಮಾನಗಳಿಗೆ ಉತ್ತರ ಸಿಗಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Leave A Reply

Your email address will not be published.