Arun kumar Puthila : ಪಕ್ಷೇತರ ಸ್ಪರ್ಧೆ ನಿರ್ಧಾರ ಹಿನ್ನೆಲೆ, ಸ್ವಾಮೀಜಿಗಳ ಭೇಟಿ ಮಾಡಿ ಸಲಹೆ ಪಡೆಯುತ್ತಿರುವ ಅರುಣ್ ಪುತ್ತಿಲ

Arun kumar Puthila : ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ಸ್ಪರ್ಧಿಸುವ ನಿಟ್ಟಿನಲ್ಲಿ ಅರುಣ್ ಕುಮಾರ್ ಪುತ್ತಿಲ (Arun kumar Puthila) ಅವರು ದಕ್ಷಿಣ ಕನ್ನಡ ಜಿಲ್ಲೆಗಳ ಸ್ವಾಮೀಜಿಗಳನ್ನು ಭೇಟಿ ಮಾಡಿ ಅವರಿಂದ ಸಲಹೆ ಪಡೆಯುತ್ತಿದ್ದಾರೆ.

 

ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಹಿಂದು ಕಾರ್ಯಕರ್ತರ ಒತ್ತಾಯ ನಡೆದಿತ್ತು.

ಅರುಣ್ ಕುಮಾರ್ ಪುತ್ತಿಲ ಅವರ ಅಭಿಮಾನಿಗಳು ಟ್ವಿಟ್ ಅಭಿಯಾನ ನಡೆಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಸ್ಥಾನದ ಅವಕಾಶ ಸಿಗದಾಗ ಬೆಂಬಲಿಗರು ತುರ್ತು ಸಭೆ ನಡೆಸಿ ಅರುಣ್ ಕುಮಾರ್ ಪುತ್ತಿಲ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಒತ್ತಾಯ ಮಾಡಿರುವ ಘಟನೆ ಎ.12ರಂದು ಸಂಜೆ ಪುತ್ತೂರು ಕೊಟೇಚಾ ಹೋಲ್‌ನಲ್ಲಿ ನಡೆದಿತ್ತು.

ಈ ಸಂದರ್ಭ ಅರುಣ್ ಕುಮಾರ್ ಪುತ್ತಿಲ ಅವರು ಎರಡು ದಿನದೊಳಗೆ ಬೆಂಬಲಿಗರ ಯೋಚನೆ ಸಾಕಾರಗೊಳಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದರು. ಇದೀಗ ಇನ್ನು ಒಂದೇ ದಿನವಿದ್ದು, ಈಗಾಗಲೇ ಅರುಣ್ ಕುಮಾರ್ ಪುತ್ತಿಲ ಅವರು ಜಿಲ್ಲೆಯ ವಿವಿಧ ಮಠ ಮಂದಿರಳಿಗೆ ಭೇಟಿ ಅಲ್ಲಿ ಸ್ವಾಮಿಜಿಗಳಿಂದ ಸಲಹೆ ಪಡೆಯುತ್ತಿದ್ದಾರೆ. ಎ.14ರಂದು ಮಾಣಿಲ ಶ್ರೀಗಳನ್ನು ಭೇಟಿ ಮಾಡಿರುವುದಾಗಿ ತಿಳಿದು ಬಂದಿದೆ.

Leave A Reply

Your email address will not be published.