Retirement Age of Govt Employees : ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಇಳಿಸಿದ ಕೇಂದ್ರ ಸರ್ಕಾರ ? Fact Sheet ಈಗ ಲಭ್ಯ

Retirement Age of Govt-Employees : ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ (Retirement Age of Govt-Employees) ಇಳಿಸಲು ಹೊರಟಿದೆ; ಈ ಬಗೆಗಿನ ಪತ್ರಿಕೆಯೊಂದರ ವರದಿಯ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಮೋದಿ ಸರ್ಕಾರವು ಸರ್ಕಾರಿ ಉದ್ಯೋಗಿಗಳ ನಿವೃತ್ತಿ ನಿಯಮಗಳನ್ನು ಬದಲಾಯಿಸಲು ಹೊರಟಿದೆ ಎಂದು ದೂರಲಾಗಿತ್ತು.

 

ಸರ್ಕಾರಿ ನೌಕರರು ಎರಡು ರೀತಿಯಲ್ಲಿ ನಿವೃತ್ತರಾಗುತ್ತಾರೆ. 60 ವರ್ಷ ವಯಸ್ಸಿನ ಮುಂಚೆ ಅಥವಾ ತಮ್ಮ 33 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ. ಅಂದರೆ, ಯಾರಾದರೂ 60 ವರ್ಷ ವಯಸ್ಸನ್ನು ತಲುಪಿಲ್ಲದೆ ಇದ್ದರೂ ಅವರು ನಿವೃತ್ತರಾಗಬೇಕಿದೆ. ಆದರೆ 33 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದರೆ, ಅವರು ನಿವೃತ್ತರಾಗುತ್ತಾರೆ ಅಂಥ ಹೇಳಲಾಗುತ್ತಿತ್ತು.

ಈ ಸುದ್ದಿ ನಿಜವೇ ಎಂಬ ಬಗ್ಗೆ ಇದೀಗ ಫ್ಯಾಕ್ಟ್ ಚೆಕ್ ನಡೆದಿದ್ದು ಸತ್ಯ ವಿಷ್ಯ ಈಗ ಹೊರಬಿದ್ದಿದೆ. ವೈರಲ್ ಆಗುತ್ತಿರುವ ಸ್ಕ್ರೀನ್‌ಶಾಟ್ 2019 ರಲ್ಲಿ ಹಿಂದಿ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ನಿವೃತ್ತಿ ಯೋಜನೆಗೆ ಸಂಬಂಧಿಸಿದಂತೆ ಆಧಾರರಹಿತ ಊಹಾಪೋಹಗಳನ್ನು ಮಾಡಲಾಗಿದೆ. ದಿನಾಂಕ ಬದಲಿಸಿ ಮತ್ತೆ ಈಗ ಅದೇ ಸುದ್ದಿ ವೈರಲ್ ಅನ್ನು ಕೆಲವರು ಮಾಡುತ್ತಿದ್ದಾರೆ. ನಿವೃತ್ತಿ ವಯಸ್ಸಿನ ಬದಲಾವಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಬಳಿ ಅಂತಹ ಯಾವುದೇ ಯೋಜನೆ ಮತ್ತು ಯೋಚನೆ ಇಲ್ಲ ಎಂಬ ಮಾಹಿತಿ ಲಭ್ಯ ಆಗಿದೆ.

 

ಇದನ್ನು ಓದಿ : RBI: RBI ನಿಂದ ಹೊಸ ನಿಯಮ ಜಾರಿ ; ನಿಮ್ಮ ಬಳಿ ಹಳೆಯ ಹರಿದ ನೋಟು ಇದ್ದರೆ ಇಲ್ಲಿದೆ ಮಹತ್ವದ ಮಾಹಿತಿ!! 

Leave A Reply

Your email address will not be published.