Veteran Actress Leelavathi : ಹಿರಿಯ ನಟಿ ಲೀಲಾವತಿ ಜೊತೆ ಕೇಳಿ ಬರುತ್ತಿರುವ ಮಹಾಲಿಂಗ ಭಾಗವತರ್ ಹಿನ್ನೆಲೆ ಏನು?

Actress leelavathi: ಹಿರಿಯ ನಟಿ ಲೀಲಾವತಿ (Actress leelavathi)ಯಾರಿಗೆ ಗೊತ್ತಿಲ್ಲ ಹೇಳಿ. ಹಿಂದಿನ ಸಿನಿಮಾಗಳಲ್ಲಿ ಲೀಲಾವತಿ ಎಂದರೆ ಎಲ್ಲರಿಗೂ ಬಲು ಅಚ್ಚುಮೆಚ್ಚು. ಆದರೆ ಸ್ವಲ್ಪ ದಿನಗಳಿಂದ ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್(Vinod Raj) ಇಬ್ಬರ ಬಗ್ಗೆನೇ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಏನಂದ್ರೆ ಅಣ್ಣಾವ್ರ ಕುಟುಂಬಕ್ಕೆ ತುಂಬಾನೇ ತೀರ ಹತ್ತಿರವಾಗಿದ್ದ ವ್ಯಕ್ತಿ ಪ್ರಕಾಶ್ ರಾಜ್ ಮೇಹು. ಇವರು ನೀಡಿದಂತಹ ಮಾತು ಈಗ ಎಲ್ಲರ ಬಾಯಲ್ಲೂ ಚರ್ಚೆಯಲ್ಲಿದೆ..

 

ಹಿರಿಯ ನಟ ಲೀಲಾವತಿ ಹಾಗೂ ಡಾ.ರಾಜ್‌ಕುಮಾರ್ (Dr Rajkumar)ನಡುವಿನ ಸಂಬಂಧ ಇನ್ನೂ ಹಾಗೆಯೇ ಉಳಿದು ಬಿಟ್ಟಿದೆ. ಮುಂಚೆಯಿಂದಾನು ಇವರಿಬ್ಬರ ಸಂಬಂಧವನ್ನು ಎಲ್ಲಿಯೂ ಮುಕ್ತವಾಗಿ ಮಾತನಾಡದೆ ಯಾರ ಮುಂದೆಯೂ ಬಿಚ್ಚಿಟ್ಟಿರಲಿಲ್ಲ. ಆದರೂ, ಬಹಳ ದಶಕಗಳಿಂದ ಲೀಲಾವತಿ(leelavati) ಹಾಗೂ ಅಣ್ಣಾವ್ರ ನಡುವಿನ ಸಂಬಂಧದ ಬಗ್ಗೆ ಸಿನಿತೆರೆಮರೆಯಲ್ಲಿ ಚರ್ಚೆಯಾಗಿದ್ದೂ ಇದೆ. ಇದೇನೂ ದೊಡ್ಡ ವಿಷ್ಯ ಅಲ್ಲ ಬಿಡಿ. ಆದ್ರೆ

ಈಗ ಪ್ರಕಾಶ್ ರಾಜ್ ಮೇಹು (Prakash Raj mehu)ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಅವರ ಕೌಟುಂಬಿಕ ರಹಸ್ಯವನ್ನು ಹೊರಹಾಕಿದ್ದರು. ಇದೀಗ ವಿನೋದ್ ರಾಜ್ ಗೆ ಮದುವೆ ಆಗಿ ಅವನಿಗೆ ಒಬ್ಬ ಮಗನಿರುವ ವಿಷಯ ಸಾಕ್ಷಿ ಸಮೇತವಾಗಿ ಸಾಮಾಜಿಕ ಜಾಲತಾಣ ವಾದ ಫೇಸ್ಬುಕ್ (Facebook)ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನಿಂದ ಶುರುವಾಗಿದ್ದ ಚರ್ಚೆ ಇದೀಗ ಮಹಾಲಿಂಗ ಭಾಗವತರ್ (mahalinga bhagavatar)ಅಲ್ಲಿಯವರೆಗೂ ವಿಷಯ ಮುಟ್ಟಿದೆ. ಇಷ್ಟು ಮಾತನ್ನು ಹೇಳಿದಾಗ ಯಾರು ಈ ಮಹಾಲಿಂಗ ಭಾಗವತರ್? ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು.

ಪ್ರಕಾಶ್ ರಾಜ್ ಮೇಹು ಪ್ರಸ್ತಾಪಿಸಿದ್ದ ಅ 2 ವಿಷಯಗಳಾದರು ಯಾವುದು?

ಪ್ರಕಾಶ್ ರಾಜ್ ಮೇಹು(Prakash Raj mehu) ಫೇಸ್‌ಬುಕ್‌ನಲ್ಲಿ ವಿನೋದ್ ರಾಜ್ ಅವರ ಜೀವನದ ಬಗ್ಗೆ ಸಂಬಂಧಿಸಿದ ಕೆಲವು ಪ್ರಮುಖವಾದ ವಿಷಯ ಮತ್ತು ಫೋಟೊವನ್ನು (photo)ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಮಾಡಿದ ಬಳಿಕ ಎರಡು ವಿಷಯಗಳನ್ನು ಪ್ರಸ್ತಾಪ ಮಾಡಿದ್ದರು. ಮೊದಲನೆಯದು ಎಲ್ಲರೂ ಅಂದುಕೊಳ್ಳುವ ರೀತಿ ವಿನೋದ್ ರಾಜ್(Vinod Raj) ಯಾವುದೇ ಮದುವೆಯನ್ನೇ ಆಗದೆ ತಾಯಿಯ ಸೇವೆಯಲ್ಲಿ ನಿರತರಾಗಿದ್ದಾರೆ ಅನ್ನುವವರಿಗೆ ಇಲ್ಲಿದೆ ನೋಡಿ ಮಾಹಿತಿ ಎಂದು. ಈ ಕೆಳಗಿನ ಫೋಟೋದಲ್ಲಿ ಸೋಫಾಮೇಲೆ ಕುಳಿತಿರುವ ವ್ಯಕ್ತಿಗಳನ್ನು ನೀವು ಗಮನಿಸಬಹುದು. ಅದು ಯಾರಪ್ಪ ಅಂದ್ರೆ ವಿನೋದ್ ರಾಜ್ ಹೆಂಡತಿ ಮತ್ತು ಮಗ. ಇವರು ಚೆನ್ನೈನಲ್ಲಿ (Chennai) ವಾಸವಾಗಿದ್ದಾರೆ ಇದೀಗ ಮಗ ಇಂಜಿನಿಯರಿಂಗ್ (engineering) ವಿದ್ಯಾಭ್ಯಾಸ ಮಾಡುತ್ತಿದ್ದಾನೆ ಎಂಬ ವಿಷಯದ ಬಗ್ಗೆ ಪ್ರಸ್ತಾಪಿಸಿದರು.

ಎರಡನೇ ವಿಷಯ ಏನಂದರೆ ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ (mahalinga bhagavathar)ಅಂತ ಮತ್ತು ಈ ಕೆಳಗೆ ಕೊಟ್ಟಿರುವ ಲೀಲಾವತಿಯವರ ಚನ್ನೈ ಆಸ್ತಿಯ ಪತ್ರ ಹಾಗೇ ಅದು ತಮಿಳು ಭಾಷೆಯಲ್ಲಿದೆ(Tamil language). ಅದರಲ್ಲಿ ಬರೆದಿದ್ದನ್ನು ಓದುವಾಗ ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (lilavati Ammal)(ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ ಹಾಗಾಗಿ ಮಹಾಲಿಂಗ ಭಾಗವತರ್ ಅವರ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿದ್ದರು. ಹಾಗಿದ್ದರೆ, ಮಹಾಲಿಂಗ ಭಾಗವತರ್ ಅವರ ಹಿನ್ನೆಲೆ ಏನಿರಬಹುದು.

ಅಷ್ಟಕ್ಕೂ ಈ ಮಹಾಲಿಂಗ ಭಾಗವತರ್ ಯಾರು?

ಲೀಲಾವತಿಯವರ ಪತಿ ಮಹಾಲಿಂಗ ಭಾಗವತರ್ ಅಂತ ಪ್ರಕಾಶ್ ರಾಜ್ ಮೇಹು ಫೇಸ್‌ಬುಕ್‌ನಲ್ಲಿ ಈ ವಿಷಯವನ್ನು ಹೆಚ್ಚಿನ ಮಾಹಿತಿ ಜೊತೆಗೆ ಎಲ್ಲರ ಮುಂದೆ ಪ್ರಸ್ತಾಪಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಲೀಲಾವತಿ ಅವರ ಹೆಸರು ಮಹಾಲಿಂಗ ಭಾಗವತರ್ ಅವರೊಂದಿಗೆ ಓಡಾಡುತ್ತಿದೆ. ಹಾಗಾದರೆ ಈ ವ್ಯಕ್ತಿ ಹಿನ್ನೆಲೆಯೇನು? ಮಹಾಲಿಂಗ ಭಾಗವತರ್ ಬಗ್ಗೆ ಹೇಳಬೇಕೆಂದರೆ ಲೀಲಾವತಿ ಅವರ ಹಾಗೇನೇ ಇವರು ಕೂಡ ಒಬ್ಬರು ಪ್ರಸಿದ್ಧ ನಟರು ಹೌದು.

ಇವರು ಚಿತ್ರರಂಗಕ್ಕೆ ಕಾಲಿಡುವ ಮೊದಲು ತನ್ನ ಜೀವನವನ್ನು ನಾಟಕಗಳನ್ನು ಮಾಡಿ ಇನ್ನೊಬ್ಬರನ್ನು ನಗಿಸುವ ರೀತಿಯಲ್ಲಿ ತನ್ನದೇ ಸ್ವತಹ ನಾಟಕ ಕಂಪನಿ(company) ನಡೆಸುತ್ತಿದ್ದರು. ನಾಟಕಗಳನ್ನು ಮಾಡುತ್ತಾ ಹೋಗುವಾಗ ಇವರು ನಟಿ ಲೀಲಾವತಿಯವರನ್ನು ಗುರುತಿಸಿ ರಂಗಭೂಮಿಗೆ ಕರೆದುಕೊಂಡು ಬಂದವರು ಎಂಬ ವಿಷಯ ತಿಳಿದಿದೆ. ಆದರೆ ಬಹಳಷ್ಟು ನಷ್ಟದಿಂದ ನಾಟಕ ಕಂಪನಿ ಮುಚ್ಚಿದಾಗ, ಸುಬ್ಬಯ್ಯ ನಾಯ್ಡು (subbayya Naidu)ನಾಟಕ ಕಂಪನಿ ಸೇರಿಕೊಂಡರು. ಅಲ್ಲೇ ನಟನೆಯಲ್ಲಿ ಅವಕಾಶಗಳನ್ನು ಗಿಟ್ಟಸಿಕೊಂಡರು. ಹೀಗಾಗಿ ನಾಟಕ ಕಂಪನಿಯಲ್ಲಿ ಕೆಲಸ ಮಾಡುವಾಗಿನಿಂದಲೇ ಮಹಾಲಿಂಗ ಭಾಗವತರ್(mahalinga bhagavathar) ನಟಿ ಲೀಲಾವತಿ ಇವರಿಬ್ಬರಿಗೂ ಪರಿಚಯವಿತ್ತು ಎನ್ನಲಾಗಿದೆ.

ಲೀಲಾವತಿ ಜೊತೆ ಮೈಸೂರಿನಿಂದ ಮದ್ರಾಸಿಗೆ

ಸುಬ್ಬಯ್ಯ ನಾಯ್ಡು ನಾಟಕ ಕಂಪನಿಯಲ್ಲೂ ಕೆಲಸ ಕಡಿಮೆ ಆಯಿತು. ಈ ವೇಳೆ ನಟಿ ಲೀಲಾವತಿ ಜೊತೆ ನಟಿಸೋ ಹಂಬಲದಿಂದ ಮೈಸೂರಿನಿಂದ ಮದ್ರಾಸಿನ ಕಡೆಗೆ ಪಯಣ ಬೆಳೆಸಿದ್ದರು. ಈ ಸಮಯದಲ್ಲಿ ಲೀಲಾವತಿಯವರಿಗೆ ಇನ್ನಷ್ಟು ಅವಕಾಶ ಕೊಡುತಿದ್ದರು ಎಂದು ತಿಳಿದುಬಂದಿದೆ.

ಸದ್ಯ ಇದೀಗ ಪ್ರಕಾಶ್ ರಾಜ್ ಮೇಹು ಅವರು ದೊಡ್ಡಮಟ್ಟದಲ್ಲಿ ಸಿಡಿಲು ಬಡಿ ವಂತಹ ಮಾಹಿತಿಯನ್ನು ತಿಳಿಸಿದಾಗ ಚಿತ್ರರಂಗದಲ್ಲಿ ಮತ್ತೆ ಎಲ್ಲರೂ ಪ್ರಸ್ತಾಪಿಸುವಂತಹ ಮಾತು ಆಗಿಬಿಟ್ಟಿದೆ. ಪ್ರಕಾಶ್ ರಾಜ್ ಮೇಹು ಬಳಿಕ ಸ್ವತ: ಲೀಲಾವತಿಯರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಹಾಗೆಯೇ ಮುಖಕ್ಕೆ ತಿರುಗೇಟು ನೀಡುವ ಮೂಲಕ ವಿನೋದ್ ರಾಜ್ ಕೂಡ ಯ್ಯೂಟ್ಯೂಬ್‌ ಚಾನೆಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

Leave A Reply

Your email address will not be published.