Bike Price: ಬೈಕ್ ಪ್ರಿಯರಿಗೆ ಮಹತ್ವದ ಸುದ್ದಿ! ಕೆ300 ಆರ್ – ಕೆ 300 ಎನ್ ಬೈಕುಗಳ ಬೆಲೆಯಲ್ಲಿ ಭಾರೀ ಇಳಿಕೆ!

Bike Price : ಬೈಕ್ (Bike)ಅಂದರೆ ಸಾಕು!!! ಹುಡುಗರ ಪಾಲಿನ ಗರ್ಲ್ ಫ್ರೆಂಡ್ ಇದ್ದಂತೆ. ಎಲ್ಲೇ ಹೋದರು ಬಂದರೂ ಯುವಜನತೆಗೆ ಬೈಕ್ ಮೇಲಿನ ವ್ಯಾಮೋಹ ಕಡಿಮೆ ಅಗುವಂತಹದಲ್ಲ. ಇಂದು ಮಾರುಕಟ್ಟೆಯಲ್ಲಿ ಹೊಸ ಹೊಸ ವೈಶಿಷ್ಟ್ಯದ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದೀಗ, ಬೈಕ್ ಪ್ರಿಯರಿಗೆ ಬಂಪರ್ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. 300 ಆರ್‌(K300 R) – ಕೆ300 ಎನ್‌ (K300N) ಬೈಕುಗಳ (Bike Price) ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ.

ಬಿಎಂಡಬ್ಲ್ಯೂ ಜಿ 310 ಆರ್‌ಆರ್‌ಗಿಂತಲೂ ಕೆ300 ಎನ್‌ 15,000 ರೂ.ನಷ್ಟು ಇಳಿಕೆ ಕಂಡಿದೆ. ಕೆಟಿಎಂ 250 ಡ್ಯೂಕ್‌ಗಿಂತ 18,000 ರೂ. ಅಗ್ಗವಾಗಿದ್ದು, ಕೆ300 ಅವಳಿಗಳು ಒಂದೇ ಪ್ಲಾಟ್‌ಫಾರಂ ಮೇಲೆ ಅಭಿವೃದ್ಧಿ ಆಗಿದೆ. ಬಿಡಿ ಭಾಗಗಳೆಲ್ಲಾ ಬಹುತೇಕ ಒಂದೇ ರೀತಿಯದ್ದಾಗಿದ್ದು, ಕೆ300 ಆರ್‌ನಲ್ಲಿ ಫುಲ್ ಪೇರಿಂಗ್ ಮತ್ತು ಕ್ಲಿಪ್‌-ಆನ್‌ ಹ್ಲಾಂಡ್ಲ್‌ಬಾರ್‌ಗಳಿದ್ದರೆ, ಕೆ300 ಎನ್‌ನ್ಲಿ ನೇಕೆಡ್‌ ಸ್ಟ್ರೀಟ್‌ಫೈಟರ್‌ ವಿನ್ಯಾಸವನ್ನ ಹೊಂದಿದೆ.

ಕೀವೇ K300 R ಸುತ್ತಲೂ LED ಲೈಟಿಂಗ್, ಮಿಶ್ರಲೋಹದ ಚಕ್ರಗಳು ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಒಳಗೊಂಡಿದೆ. K300 R ಬಗ್ಗೆ ಹೆಚ್ಚಿನ ವಿವರಗಳು ಇನ್ನೂ ಬಹಿರಂಗಗೊಳ್ಳಬೇಕಾಗಿದೆ. BMW G 310 RR ನೊಂದಿಗೆ ನೀಡಲಾಗುವ ವೈಶಿಷ್ಟ್ಯಗಳು ಎಲ್ಲಾ LED ಲೈಟಿಂಗ್‌ಗಳನ್ನು ಒಳಗೊಂಡಿವೆ, ನಾಲ್ಕು ರೈಡಿಂಗ್ ಮೋಡ್‌ಗಳನ್ನು (ಟ್ರ್ಯಾಕ್, ಅರ್ಬನ್, ರೈನ್, ಸ್ಪೋರ್ಟ್), 5.0-ಇಂಚಿನ ಬಣ್ಣದ TFT ಡಿಸ್ಪ್ಲೇ, ದ್ವಿ-ದಿಕ್ಕಿನ ಕ್ವಿಕ್‌ಶಿಫ್ಟರ್ ಮತ್ತು ಎಳೆತ ನಿಯಂತ್ರಣವನ್ನು ಹೊಂದಿದೆ.

ಈ ಹಿಂದೆ 2.65-2.85 ಲಕ್ಷ ರೂ.ವರೆಗೆ ಇದ್ದ ಕೆ300 ಈಗ ಭಾರೀ ಇಳಿಕೆಯಾಗಿದ್ದು, 2.55 ಲಕ್ಷ ರೂ.ಗಳಿಗೆ ದೊರೆಯಲಿದೆ. ಕೆ300 ಆರ್‌ನ ಬೆಲೆಯು 2.99-3.19 ಲಕ್ಷ ರೂಗಳಿಂದ ದರ ಇಳಿಕೆ ಕಂಡು 2.65 ಲಕ್ಷ ರೂ.ಗಳಿಗೆ ದೊರೆಯಲಿದೆ. ಕೀವೇ.ಬೆಲೆ ಪರಿಷ್ಕರಣೆಯ ಮೂಲಕ ಟಿವಿಎಸ್‌ನ ಅಪಾಚೆ ಆರ್‌ಆರ್‌ 310 ಹಾಗೂ ಬಿಎಂಡಬ್ಲ್ಯೂ ಜಿ 310 ಆರ್‌ಆರ್‌ಗಳೊಂದಿಗೆ ಬೆಲೆ ಸಮರಕ್ಕೆ ಸಜ್ಜಾಗಿದೆ.

 

ಇದನ್ನು ಓದಿ : Cyber ​​harassment: ಮಹಿಳೆಯರೇ, ಈ ಮಾಹಿತಿ ತಿಳಿಯಿರಿ ಸೈಬರ್​ ಕಿರುಕುಳದಿಂದ ತಪ್ಪಿಸಿಕೊಳ್ಳಿ!! 

Leave A Reply

Your email address will not be published.