Meghana Raj Sarja :ರಾಜಕೀಯ ನಿಲುವಿನ ಬಗ್ಗೆ ಸ್ಯಾಂಡಲ್‌ ವುಡ್‌ ನಟಿ ಮೇಘನಾ ರಾಜ್ ಹೇಳಿದ್ದೇನು?

Share the Article

Meghana Raj Sarja : ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದ್ದಂತೆ ಚುನಾವಣೆ ಕಾವು ರಂಗೇರಿದೆ. ಈಗಾಗಲೇ ಕೆಲ ನಾಯಕರು ಪಕ್ಷದಿಂದ ಪಕ್ಷಕ್ಕೆ ಹಾರಾಟ ನಡೆಸಿದ್ದಾರೆ. ಇತ್ತೀಚಿಗೆ ಕಿಚ್ಚ ಸುದೀಪ್ ಮತ್ತು ಸುಮಲತಾ ಅವರು
ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದ್ದರು. ಸಾಧು ಕೋಕಿಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಚಿತ್ರರಂಗದಿಂದ ರಾಜಕೀಯಕ್ಕೆ ಹಲವು ಕಲಾವಿದರು ಎಂಟ್ರಿ ಕೊಡ್ತಿದ್ದಾರೆ. ಮೇಘನಾ ರಾಜ್‌ ಸರ್ಜಾ ಕೂಡಾ ರಾಜಕೀಯ ಸೇರಲಿದ್ದು ಅವರು ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.ಈಗ ರಾಜಕೀಯ ಪ್ರವೇಶದ ಬಗ್ಗೆ ಮೇಘನಾ ರಾಜ್ (Meghana Raj Sarja) ಪ್ರತಿಕ್ರಿಯೆ ನೀಡಿದ್ದಾರೆ.

ರಾಜಕೀಯದ ಬಗ್ಗೆ ನಾನು ಹೆಚ್ಚಾಗಿ ಏನು ಯೋಚನೆ ಮಾಡಿಲ್ಲ. ಜನಸೇವೆ ಮಾಡುವುದಕ್ಕೆ ಖಂಡಿತಾ ಒಳ್ಳೆಯ ವೇದಿಕೆಯಾಗಿದೆ. ಈ ಕ್ಷೇತ್ರ ದೊಡ್ಡ ವೇದಿಕೆ ಆದರೆ ರಾಜಕೀಯ ಬರುವ ಬಗ್ಗೆ ನಾನು ಯೋಚನೆ ಮಾಡಿಲ್ಲ ಎಂದು ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ರಾಜಕೀಯ ಎಂಟ್ರಿ ಬಗ್ಗೆ ಸದ್ಯಕ್ಕೆ ಆಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಇತ್ತೀಚೆಗೆ ನಟಿ ಮೇಘನಾ ರಾಜ್‌ ಸರ್ಜಾ ‘ತತ್ಸಮ ತದ್ಭವ’ ಸಿನಿಮಾ ಅನೌನ್ಸ್‌ ಮಾಡಿದ್ದರು. ಚಿತ್ರೀಕರಣದಲ್ಲಿ ಭಾಗಿಯಾಗಿರುವ ಮೇಘನಾ ಸಿನಿಮಾಗಳ ಜೊತೆಗೆ ಹೊಸದಾಗಿ ಯೂಟ್ಯೂಬ್‌ ಕೂಡಾ ಆರಂಭಿಸಿದ್ದಾರೆ. ಇಷ್ಟು ಬ್ಯುಸಿ ಕೆಲಸಗಳ ನಡುವೆ ಮಗ ರಾಯನ್‌ಗಾಗಿ ಇಂತಿಷ್ಟು ಸಮಯ ಮೀಸಲಿಟ್ಟಿದ್ಧಾರೆ.ಕೆಲವು ದಿನಗಳ ಹಿಂದೆ ತಮ್ಮದೇ ಯೂಟ್ಯೂಬ್‌ ಚಾನೆಲ್‌ನಲ್ಲಿ ದು:ಖದ ದಿನಗಳನ್ನು ನೆನೆದಿದ್ದ ಮೇಘನಾ ರಾಜ್‌ ಸರ್ಜಾ ಆ ಕ್ಷಣ ತಾವು ಕೈಗೊಂಡಿದ್ದ ನಿರ್ಧಾರದ ಬಗ್ಗೆ ಹೇಳಿಕೊಂಡಿದ್ದರು. ”ಜೀವನದಲ್ಲಿ ಏನೂ ಬೇಡ ಎಂದು ಸುಮ್ಮನಿದ್ದ ನನಗೆ, ದೊಡ್ಡ ಸಪೋರ್ಟ್‌ ಸಿಸ್ಟಮ್‌ ರೀತಿ ಬಂದಿದ್ದು, ಪನ್ನಗಾಭರಣ, ನಿನಗೋಸ್ಕರ ನೀನು ಏನು ಮಾಡ್ಕೋತಿಯಾ ಎಂದಾಗ ನನ್ನ ಬಳಿ ಉತ್ತರ ಇರಲಿಲ್ಲ ಎಂದಿದ್ದಾರೆ.

Leave A Reply