Mangalore News : ಸುಳ್ಯದಲ್ಲಿ ಕೆರೆಗೆ ಬಿದ್ದ ಆನೆ ಹಿಂಡು ; ನೀರಿನಿಂದ ಮೇಲೆ ಬರಲು ಪರದಾಡುತ್ತಿರುವ ಗಜಪಡೆ!

Elephant in sullia : ಕಾಡುಪ್ರಾಣಿಗಳು ಮೇವಿಲ್ಲದೆ ಕಾಡು ಬಿಟ್ಟು ಪಟ್ಟಣಕ್ಕೆ ಬರುವುದು ಇಂದು ಸಾಮಾನ್ಯ ಸಂಗತಿಯಾಗಿದೆ. ಹೀಗೆ ಬಂದ ಸಂದರ್ಭದಲ್ಲಿ ಪ್ರಾಣಿಗಳನ್ನು ಕಂಡು ಜನರು ಬೆಚ್ಚಿ ಬೀಳುವುದು ಸಹಜ. ಆದರೆ, ಕಾಡಿನಿಂದ(Forest) ನಾಡಿಗೆ ಬಂದ ಕಾಡಾನೆಗಳ ಹಿಂಡೊಂದು ಸುಳ್ಯ (Elephant in sullia )ಸಮೀಪದ ಅಜ್ಜಾವರ ಗ್ರಾಮದ ತುದಿಯಡ್ಕ ದ ತೋಟವೊಂದರ ಮಧ್ಯಭಾಗದಲ್ಲಿರುವ ಪುಟ್ಟ ಕೆರೆಗೆ ಬಿದ್ದು ಮೇಲೇಳಲಾಗದೆ ನೀರಿನಲ್ಲೇ( Water) ಸಿಲುಕಿರುವ ಮಾಹಿತಿ ಬೆಳಕಿಗೆ ಬಂದಿದೆ.

ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ತೋಟದ ಮಧ್ಯೆ ದೊಡ್ಡ ಕೆರೆಗೆ ಎರಡು ದೊಡ್ಡ ಆನೆಗಳು ಹಾಗೂ ಎರಡು ಚಿಕ್ಕ‌ ಮರಿ ಆನೆಗಳು (Elephant) ಸೇರಿ ನಾಲ್ಕು ಆನೆಗಳ ಹಿಂಡು ಕೆರೆಗೆ ಇಳಿದಿದ್ದು, ಆಳೆತ್ತರದ ಕೆರೆಯಲ್ಲಿ ತುಂಬಾ ನೀರಿರುವುದರಿಂದ ಆನೆಗಳಿಗೆ ಮೇಲೆ ಬರಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಮೇಲೆ ಬರಲಾಗದೆ ನೀರಿನಲ್ಲೇ ಅತ್ತಿಂದಿತ್ತ ಆನೆಗಳು ನೀರಿನಲ್ಲಿ ಓಡಾಡುತ್ತಿರುವ ಪರಿಸ್ಥಿತಿ ಎದುರಾಗಿದೆ. ಸುಳ್ಯದ ಅಜ್ಜಾವರ, ಮಂಡೆಕೋಲು ಹಾಗೂ ಸುತ್ತಮುತ್ತಲಿನ ಪ್ರಾಂತ್ಯದಲ್ಲಿ ಕಾಡಾನೆಗಳು ತೋಟ ಹಾಗೂ ಗದ್ದೆಗಳಿಗೆ ನುಗ್ಗುತ್ತಿದ್ದು, ಈ ಹಾವಳಿಯನ್ನು ತಗ್ಗಿಸುವಂತೆ ಸುತ್ತಲಿನ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಮನವಿ ಮಾಡಿದ್ದಾರೆ. ಈಗ ಅಜ್ಜಾವರ ಬಳಿಯ ಕೆರೆಯಲ್ಲಿ ಸಿಲುಕಿರುವ ಆನೆಗಳನ್ನು ಸೆರೆ ಹಿಡಿದು ಆನೆ ಬಿಡಾರಗಳಿಗೆ ಸಾಗಿಸಬೇಕೆಂದು ಸ್ಥಳೀಯರು ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೆರೆಯಿಂದ ಮೇಲೆ ಬರಲು ಆನೆಗಳು ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಾ ನೀರಿನಲ್ಲೇ ಆನೆಗಳು ಒದ್ದಾಡುವಂತಾಗಿದ್ದು, ಈ ವಿಚಾರ ತಿಳಿದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯ ಪ್ರಾರಂಭಿಸಿದ್ದಾರೆ.ಜೆಸಿಬಿ(JCB) ಯ ಮೂಲಕ ಕೆರೆಯ ಒಂದು ದಡವನ್ನು ಅಗಲ ಮಾಡಿ ಆನೆಗಳು ಮೇಲೆ ಬರಲು ದಾರಿ ಮಾಡಿ ಕೊಡಲು ಪ್ರಯತ್ನ ಮಾಡಲಾಗುತ್ತಿದೆ. ಕೆರೆಯಿಂದ ರಸ್ತೆ ನಿರ್ಮಿಸಿದರೆ ಆನೆಗಳು ಕೆರೆಯಿಂದ ಮೇಲೆ ಬರುತ್ತವೆ. ಆ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಆರ್‌ಎಫ್‌ಒ ಮಂಜುನಾಥ್ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.