Home Interesting Ration Card Rules : ರೇಷನ್ ಕಾರ್ಡ್ ನಿಯಮದಲ್ಲಿ ಬದಲಾವಣೆ! ದುಪ್ಪಟ್ಟು ಲಾಭ ನಿಮ್ಮ ಮುಂದೆ!

Ration Card Rules : ರೇಷನ್ ಕಾರ್ಡ್ ನಿಯಮದಲ್ಲಿ ಬದಲಾವಣೆ! ದುಪ್ಪಟ್ಟು ಲಾಭ ನಿಮ್ಮ ಮುಂದೆ!

Ration Card Update

Hindu neighbor gifts plot of land

Hindu neighbour gifts land to Muslim journalist

Ration Card Update : ರೇಷನ್ ಕಾರ್ಡ್ (Ration Card)ಅಥವಾ ಪಡಿತರ ಚೀಟಿಯನ್ನು ಹೊಂದಿರುವ ಬಳಕೆದಾದರಿಗೆ ಕೇಂದ್ರ ಸರ್ಕಾರ (Central Government)ಸಿಹಿಸುದ್ದಿಯನ್ನು(Good News) ನೀಡಿದೆ. ಪಡಿತರ ಚೀಟಿ ಹೊಂದಿರುವವರಿಗೆ(Ration Card Update)ಬಹು ಮುಖ್ಯ ಮಾಹಿತಿ ಇಲ್ಲಿದೆ

ರಾಜ್ಯ ಹಾಗೂ ಕೇಂದ್ರ ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಏಳಿಗೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಜನರಿಗೆ ಬೆಂಬಲವಾಗಿ ನಿಂತಿವೆ. ಇವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಸದ್ಯ, ಪಡಿತರ ಚೀಟಿದಾರರಿಗೊಂದು ಸಿಹಿಸುದ್ದಿ ಪ್ರಕಟವಾಗಿದೆ. ಕೇಂದ್ರ ಸರ್ಕಾರ ಪಡಿತರ ವಿತರಣೆಯ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ.

ಸಾರ್ವಜನಿಕರಿಗೆ ಕೇಂದ್ರ ಸರ್ಕಾರದ ವತಿಯಿಂದ ಸಂಪೂರ್ಣ ಪಡಿತರ ಪಡೆಯಲು ವಿಶೇಷ ಸೌಲಭ್ಯ ಪ್ರಾರಂಭಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿನ ಅಡಿಯಲ್ಲಿ, ಪಡಿತರ ಅಂಗಡಿಗಳಲ್ಲಿ ಎಲೆಕ್ಟ್ರಿಕ್ ಮಾಪಕಗಳೊಂದಿಗೆ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (EPOS) ಸಾಧನಗಳನ್ನು ಸಂಪರ್ಕಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಇದರ ಮೂಲಕ ಯಾವುದೇ ರೀತಿಯ ವಂಚನೆಗೆ ಅವಕಾಶವಿರುವುದಿಲ್ಲ. ಫಲಾನುಭವಿಗಳು ಪೂರ್ಣ ಪ್ರಮಾಣದ ಪಡಿತರವನ್ನು ಪಡೆಯಲು ಅನುವು ಮಾಡಿಕೊಡಲಾಗುತ್ತದೆ.

ಅಕ್ಕಿಯು(Rice) ಪೋಷಕಾಂಶಗಳ ಆಗರವಾಗಿದ್ದು, ಸರಕಾರದಿಂದ (Government)ಬಂದಿರುವ ಮಾಹಿತಿ ಅನುಸಾರ, ಸದ್ಯ ಪಡಿತರ ವಿತರಣೆಯಲ್ಲಿ ಲಭ್ಯವಾಗುತ್ತಿರುವ ಅಕ್ಕಿಯಲ್ಲಿ ಸಾಕಷ್ಟು ಪೋಷಕಾಂಶಗಳಿವೆ ಎನ್ನಲಾಗಿದೆ. ಅವುಗಳ ಗುಣಮಟ್ಟ ಮೊದಲಿಗಿಂತ ಉತ್ತಮವಾಗಿದ್ದು, ಪೌಷ್ಟಿಕಾಂಶಗಳಿಂದ ಕೂಡಿರುವ ಈ ಗುಣಮಟ್ಟದ ಅಕ್ಕಿಯನ್ನು (High Quality Rice) ಸರಕಾರ ಉಚಿತವಾಗಿ ಒದಗಿಸುತ್ತಿದೆ ಎನ್ನಲಾಗಿದೆ.

ಸರ್ಕಾರದ ಉಚಿತ ಪಡಿತರ ಯೋಜನೆಯಿಂದಾಗಿ ಬಡ ಕುಟುಂಬಗಳ ಆರ್ಥಿಕ ಹೊರೆ ಕೊಂಚ ತಗ್ಗಿದ್ದು, 2024ರ ವೇಳೆಗೆ ಸರ್ಕಾರದ ಯೋಜನೆಯ ಮೂಲಕ ದೇಶದಾದ್ಯಂತ ಪೌಷ್ಟಿಕಾಂಶಯುಕ್ತ ಅಕ್ಕಿಯನ್ನು ವಿತರಣೆ ಮಾಡಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಈ ಅಕ್ಕಿಯನ್ನು ಪ್ರಸ್ತುತ 269 ಜಿಲ್ಲೆಗಳಲ್ಲಿ ಪಿಡಿಎಸ್ ಮೂಲಕ ವಿತರಣೆ ಮಾಡಲಾಗುತ್ತಿದೆ. ಹಿಂದಿನ ಅಕ್ಕಿಗಿಂತ ಈ ಅಕ್ಕಿಯ ಗುಣಮಟ್ಟ ಉತ್ತಮವಾಗಿರಲಿದೆ ಎನ್ನಲಾಗಿದೆ.