Coronavirus updates: ಪೋಷಕರೇ ಗಮನಿಸಿ, ಈ ಬಾರಿ ಮಕ್ಕಳೇ ವೈರಸ್ಗೆ ಬಲಿ ಪಶು? ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಪ್ರಕಟ!

Coronavirus updates : ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದ ಜನತೆಯ ನಿದ್ದೆಗೆಡಿಸಲು ಕೊರೋನಾ (COVID-19) ವೈರಸ್ ತನ್ನ ಪ್ರಭಾವ ಬೀರಲು ಆರಂಭಿಸಿದ್ದು, ಈಗಾಗಲೇ ಕೊರೊನಾ ವೈರಸ್‌ನ ಹೊಸ ಪ್ರಕರಣಗಳು (Coronavirus New Wave) ವರದಿಯಾಗುತ್ತಿವೆ.

ಭಾರತದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ವೈರಸ್‌ನ ಹೊಸ ಪ್ರಕರಣಗಳ ಹಾವಳಿ ಅರಂಭವಾಗಿದ್ದು, ಕೊರೊನಾ ವೈರಸ್ XBB1.16ನ ಹೊಸ ರೂಪಾಂತರವು(Coronavirus New Wave) ದೇಶದಲ್ಲಿ ಶರವೇಗದಲ್ಲಿ ಪಸರಿಸುತ್ತಿದ್ದು ಕೋರೋನಾ ವೈರಸ್ ಗೆ(Coronavirus updates)ಬಲಿಯಾಗುತ್ತಿರುವವರಲ್ಲಿ ಸಣ್ಣ ಮಕ್ಕಳ ಸಂಖ್ಯೆಯೇ ಹೆಚ್ಚು ಎನ್ನಲಾಗಿದ್ದು ಇದೊಂದು ಆತಂಕಕಾರಿ ಬೆಳವಣಿಗೆಯಾಗಿದ್ದು, ಜನರ ಕಳವಳಕ್ಕೆ ಕಾರಣವಾಗಿದೆ.

ಈ ಬಾರಿ ಕೊರೊನಾ ಸಣ್ಣ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದು, ದೆಹಲಿ ಸಮೀಪದ ದೊಡ್ಡ ನಗರದ ಶಾಲಾ ಹಾಸ್ಟೆಲ್ ನಲ್ಲಿ (Hostel) 17 ಮಕ್ಕಳಿಗೆ ಕೋವಿಡ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ, ದೇಶದಲ್ಲಿ 5,676 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ 15 ಜನರು ಅಸುನೀಗಿದ್ದು, ಮೃತಪಟ್ಟವರಲ್ಲಿ ಕೇರಳದ 6 ಮತ್ತು ದೆಹಲಿಯ 3 ರೋಗಿಗಳು ಕೂಡ ಸೇರಿದ್ದು, ಇದರೊಂದಿಗೆ ದೇಶದಲ್ಲಿ ಕೊರೊನಾ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 37 ಸಾವಿರ ಗಡಿದಾಟಿದೆ.

ಮಹಾರಾಷ್ಟ್ರದ ಬಿಜಾಪುರದಲ್ಲಿ ಕೂಡ ಕೊರೊನಾ ಹಾವಳಿ(Coronavirus New Cases In India) ಹೆಚ್ಚಾಗಿದೆ. ಮಕ್ಕಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ಬಹಿರಂಗವಾಗಿದೆ. ಸದ್ಯ, ಬಿಜಾಪುರದಲ್ಲಿ 18 ಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಮಕ್ಕಳನ್ನು ಕ್ವಾರಂಟೈನ್ನಲ್ಲಿ (Quarantine)ಇರಿಸಲಾಗಿದ್ದು, ಜಿಲ್ಲಾಡಳಿತದಿಂದ ಎಲ್ಲ ಮಕ್ಕಳ ಆರೋಗ್ಯದ ಮೇಲೆ ವಿಶೇಷ ಇರಿಸಲಾಗಿದೆ.

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಆತಂಕಕ್ಕೆ ಕಾರಣವಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 15 ಮಂದಿ ಕೊರೊನಾಗೆ ಬಲಿಯಾಗಿದ್ದು, ದೆಹಲಿಯ(Delhi) ಮೂವರು ಮೃತಪಟ್ಟಿದ್ದಾರೆ. ದೆಹಲಿ-ಎನ್ಸಿಆರ್ನಲ್ಲಿ ಕೊರೊನಾ ಸೋಂಕಿನ ಪ್ರಮಾಣ 26 ಪ್ರತಿಶತ ಗಡಿ ದಾಟಿದ್ದು, ಕೋವಿಡ್ ಪರೀಕ್ಷೆಯನ್ನು ಮಾಡಿದ ಪ್ರತಿ 100 ಜನರಲ್ಲಿ 26 ಜನರು ಕೋವಿಡ್ ಪಾಸಿಟಿವ್ ಕಂಡುಬಂದಿದೆ. ದೆಹಲಿಯ ಸಮೀಪದ ಗೌತಮ್ ಬುದ್ಧ ನಗರದಲ್ಲಿ ಕೊರೊನಾ ಸಾಂಕ್ರಾಮಿಕ ವಾಗಿ ಹರಡಿದ್ದು, ಜಿಲ್ಲೆಯ ಸೂರಜ್ಪುರ ಪಟ್ಟಣದಲ್ಲಿ ಕಳೆದ ಒಂದು ವಾರದಲ್ಲಿ ಸುಮಾರು 35 ಮಂದಿಗೆ ಸೋಂಕು ಹರಡಿದೆ. ಇನ್ನೊಂದೆಡೆ, ಮಂಗಳವಾರ ಕಸ್ತೂರಬಾ ಗಾಂಧಿ ವಸತಿ ನಿಲಯದಲ್ಲಿ ನಡೆಸಿದ ಕೋವಿಡ್ (Covid) ಪರೀಕ್ಷೆಯಲ್ಲಿ 17 ಮಕ್ಕಳಿಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ.

ಹಾಸ್ಟೆಲಿನ 10 ಮಕ್ಕಳು ಕೆಮ್ಮು(Cough) ಮತ್ತು ನೆಗಡಿಯಿಂದ(Cold) ಬಳಲುತ್ತಿದ್ದರು ಎನ್ನಲಾಗಿದ್ದು, ಹೀಗಾಗಿ, ಶಾಲೆಯ ಸಿಬ್ಬಂದಿ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು 10 ಮಕ್ಕಳಲ್ಲಿ 8 ಜನ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ. ಇದರಿಂದಾಗಿ, ಜಿಲ್ಲಾ ಆಸ್ಪತ್ರೆಯ ತಂಡವು ಹಾಸ್ಟೆಲ್ನಲ್ಲಿ ಶಿಬಿರವನ್ನು ನಡೆಸಿ ಎಲ್ಲಾ ಮಕ್ಕಳಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಿದ ಸಂದರ್ಭ ಒಟ್ಟು 17 ಮಕ್ಕಳಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಂಡುಬಂದಿವೆ. ಎಲ್ಲಾ ಮಕ್ಕಳನ್ನು ಹಾಸ್ಟೆಲ್ನಲ್ಲಿಯೇ ಕ್ವಾರಂಟೈನ್ ಮಾಡಲಾಗಿದ್ದು, ಮಕ್ಕಳ ಸ್ಥಿತಿ ಸಹಜವಾಗಿದೆ ಎನ್ನಲಾಗಿದೆ. ಹಾಸ್ಟೆಲ್ನಲ್ಲಿ ಕೊರೊನಾ ಹರಡಿದ್ದರಿಂದ ಮಕ್ಕಳ ಕುಟುಂಬ ಸದಸ್ಯರಲ್ಲಿ ಭೀತಿ ಎದುರಾಗಿದೆ. ಇದೇ ವೇಳೆ, ಜಿಲ್ಲಾ ಆಡಳಿತ ಮತ್ತು ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದ್ದು, ಜಿಲ್ಲೆಯಲ್ಲಿ ಪರೀಕ್ಷೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲು ಮುಂದಾಗಿದೆ.

 

ಇದನ್ನು ಓದಿ : Puttur Election : ಪುತ್ತೂರು :ಶಕುಂತಳಾ ಶೆಟ್ಟಿ ಅವರಿಗೆ ಅವಕಾಶ ಸಿಗದಿದ್ದರೆ ಪ್ರಮುಖರಿಂದ ರಾಜೀನಾಮೆ : ಟಿಕೆಟ್ ಘೋಷಣೆಗೂ ಮುನ್ನವೇ ಅಸಮಾಧಾನದ ಹೊಗೆ 

Leave A Reply

Your email address will not be published.