Puttur Election : ಪುತ್ತೂರು ಬಿಜೆಪಿಯಲ್ಲಿ ತಲ್ಲಣ, ಸಾಮೂಹಿಕ ರಾಜೀನಾಮೆಗೆ ಹೊರಟ ಕಾರ್ಯಕರ್ತರ ದಂಡು : ಶಾಸಕ ಮಠಂದೂರು ಅವರಿಗೆ ಟಿಕೆಟ್ ನೀಡಲು ವಿಳಂಬ ಹಿನ್ನೆಲೆ !
Putturu Election 2023 Updates: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯಲ್ಲಿ ದೊಡ್ಡ ಮಟ್ಟದ ತಲ್ಲಣ ಉದ್ಭವಿಸಿದೆ. ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಟಿಕೆಟ್ ಘೋಷಣೆ ಮಾಡಲು ಮೀನಾ ಮೇಷ ಎಣಿಸುತ್ತಿರುವುದರ ಬಗ್ಗೆ ಕಮಲ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಇದು ಕಾರ್ಯಕರ್ತರ ಮತ್ತು ಪ್ರಮುಖರ ಆಕ್ರೋಶಕ್ಕೆ ಕಾರಣವಾಗಿದೆ.
ಮೇ 10ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಕಮಲ ಪಾಳಯದಲ್ಲಿ ಪುತ್ತೂರು ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆಗೆ (Putturu Election 2023 Updates) ಸರ್ಕಸ್ ನಡೆಯುತ್ತಿದೆ. ಇಡೀ ಗಮನ ಸೆಳೆದಿರುವ ಪುತ್ತೂರು ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿಯಲ್ಲೂ ಗೊಂದಲ ಮುಂದುವರಿದಿದೆ.
ಹಾಲಿ ಶಾಸಕ ಸಂಜೀವ ಮಠಂದೂರು ಅವರ ಬದಲಿಗೆ ಹೊಸ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಲು ಮುಂದಾಗಿದೆ ಎನ್ನುವ ಸುದ್ದಿ ಕೇಳಿ ಕಾರ್ಯಕರ್ತರು ಕೆರಲಿದ್ದಾರೆ. ಹೀಗಾಗಿ, ಕಮಲ ಪಾಳಯದಲ್ಲಿ ಪುತ್ತೂರು ಕ್ಷೇತ್ರದಲ್ಲಿ ದಿನಕ್ಕೊಂದು ಹೊಸ ಹೆಸರು ಕೇಳಿಬರುತ್ತಿವೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ಹಾಲಿ ಶಾಸಕ ಸಂಜೀವ ಮಠಂದೂರು ಅವರನ್ನು ಕೈ ಬಿಟ್ಟು ಹೊಸ ಅಭ್ಯರ್ಥಿಯ ಹುಡುಕಾಟಕ್ಕೆ ಮುಂದಾಗಿರುವ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಪಕ್ಷದ ಕಾರ್ಯಕರ್ತರ ಆಕ್ರೋಶ ಭುಗಿಲೇಳುತ್ತಿದೆ. ತಮ್ಮ ಎಲ್ಲ ಜವಾಬ್ದಾರಿಯಿಂದ ಹಿಂಜರಿಯಲು ತಾಲೂಕಿನ ಬಹುಪಾಲು ಬಿಜೆಪಿ ಪ್ರಮುಖರು ನಿರ್ಧರಿಸಿದ್ದಾರೆ. ಗೆಲ್ಲುವ ಅಭ್ಯರ್ಥಿಯಾಗಿರುವ ಸಂಜೀವ ಮಠಂದೂರು ಅವರಿಗೆ ಪುತ್ತೂರು ಕ್ಷೇತ್ರದಲ್ಲಿ ಮತ್ತೊಮ್ಮೆ ಅವಕಾಶ ನೀಡಬೇಕಾಗಿದ್ದು, ಇಲ್ಲವಾದಲ್ಲಿ ಪಕ್ಷದ ಹುದ್ದೆಯಿಂದ ಹಿಂದೆ ಸರಿಯಲು ಹಿರೇಬಂಡಾಡಿ, ಬಜತ್ತೂರು, ಉಪ್ಪಿನಂಗಡಿ ಶಕ್ತಿಕೇಂದ್ರದ ಪ್ರಮುಖರು ಮುಂದಾಗಿದ್ದು ಈ ಬಗ್ಗೆ ಮಂಡಲ ಅಧ್ಯಕ್ಷರಿಗೆ ಹಾಗೂ ಪಕ್ಷದ ಜಿಲ್ಲಾಧ್ಯಕ್ಷರಿಗೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಗೆಲ್ಲುವ ಕುದುರೆಯನ್ನು ಕಟ್ಟಿಹಾಕಿದಂತಾಗಿದೆ, ನಾವು ಯಾರೂ ಈ ಬಾರಿ ಯಾರೂ ಫೀಲ್ಡ್‌ಗೆ ಇಳಿಯುವುದಿಲ್ಲ ಎಂದು ಕಾರ್ಯಕರ್ತರು ತಮ್ಮ ಮಾತನ್ನು ಹೇಳಿರುವುದು ಎಲ್ಲೆಡೆ ಕೇಳಿ ಬರುತ್ತಿದೆ.
ಸಂಜೀವ ಮಠಂದೂರು ಅವರು ಕಳೆದ 5 ವರ್ಷಗಳ ಅವಧಿಯಲ್ಲಿ 2 ವರ್ಷ ಕೋವಿಡ್ ಸಂಕಷ್ಟವಿದ್ದರೂ ಕೂಡ ಕ್ಷೇತ್ರಕ್ಕೆ ವಿವಿಧ ಮೂಲಗಳಿಂದ 1200 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯವಿಲ್ಲದೆ, ಜಾತಿ, ಧರ್ಮ ಭೇದವೆನ್ನದೆ ಶ್ರಮಿಸಿದ್ದಾರೆ ಎನ್ನುವುದು ಜಾತ್ಯಾತೀತ ಮತ್ತು ಧರ್ಮಾತೀತ ಅಭಿಪ್ರಾಯ. ಹೀಗಾಗಿ, ಅವರಿಗೆ ಅವಕಾಶ ನೀಡಬೇಕು ಎಂಬ ಕೂಗು ಬಿಜೆಪಿ ಪಾಳಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ.
ಎಲ್ಲಾ ಬೂತ್‌ಗಳಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡಿದ್ದಾರೆ. ಸಂಜೀವ ಮಠಂದೂರು ಅವರು ಎಲ್ಲರೂ ಒಪ್ಪುವ ಅಭ್ಯರ್ಥಿಯಾಗಿದ್ದು, ಪಕ್ಷದ ಆಂತರಿಕ ಸಮೀಕ್ಷೆಯಲ್ಲೂ ಸಂಜೀವ ಮಠಂದೂರು ಅವರ ಪರವಾಗಿಯೇ ಒಲವು ವ್ಯಕ್ತಗೊಂಡಿದೆ. ಆದರೂ ಪಕ್ಷದ ನಾಯಕರು ಸಂಜೀವ ಮಠಂದೂರು ಬದಲಿಗೆ ಹೊಸ ಅಭ್ಯರ್ಥಿ ಆಯ್ಕೆಗೆ ಮುಂದಾಗಿರುವುದು ಪಕ್ಷದ ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಈ ವಿಳಂಬ ನೀತಿಯ ವಿರುದ್ಧ ಯಾವ ನಾಯಕನೂ ಇಲ್ಲಿಯವರೆಗೆ ದನಿಯೆತ್ತಿರಲಿಲ್ಲ. ಆದರೆ ಕೊನೆಗೂ ಸಾಮಾನ್ಯ ಕಾರ್ಯಕರ್ತರು ಧ್ವನಿ ಮೊಳಗಿಸಿದ್ದು ” ಇಲ್ಲಿ ಬಿಜೆಪಿಗೆ ಗೆಲ್ಲುವುದು ಬೇಡ ಅನ್ನಿಸುತ್ತೆ. ಹಾಗಾಗಿ ನಾವು ಈ ಸಲ ಫೀಲ್ಡ್ ಮಾಡಬೇಕಿಲ್ಲ ” ಎಂದು ತಮ್ಮ ಮುನಿಸನ್ನು ವ್ಯಕ್ತಪಡಿಸಿದ್ದಾರೆ.
I don’t think the title of your article matches the content lol. Just kidding, mainly because I had some doubts after reading the article.