EPFO: ಇಪಿಎಫ್‌ ಕ್ಲೈಮ್‌ಗೆ ಬೇಕಾದ 6 ಫಾರ್ಮ್‌ಗಳಿವು!

EPFO claim : ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ) ಖಾತೆ ಹೊಂದಿದ್ದರೆ, ನೀವು ತಿಳಿಯಲೇಬೇಕಾದ ಸುದ್ದಿ ಇದು. ಇಪಿಎಫ್ (EPF) ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿಗಳ ಪಾಲಿಗೆ ಪಿಎಫ್ (PF) ಮೊತ್ತವು ಸಂಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ನೆರವನ್ನು ನೀಡುವ ಖಾತೆ ಎಂದರೇ ತಪ್ಪಾಗಲಾರದು. ಕುಟುಂಬದ ಸದಸ್ಯರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO claim) ಯುನಿವರ್ಸಲ್ ಅಕೌಂಟ್ ನಂಬರ್ (UAN) ಮೂಲಕ ಇ-ನಾಮನಿರ್ದೇಶನವನ್ನು ಮಾಡಬಹುದಾಗಿದೆ.

ಉದ್ಯೋಗಿಗಳ ಭವಿಷ್ಯ ನಿಧಿಯು ಜನರಿಗೆ ಮೂರು ಸಾಮಾಜಿಕ ಸುರಕ್ಷತಾ ಯೋಜನೆಗಳನ್ನು ಒದಗಿಸುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ (EPF), ಪಿಂಚಣಿ ಯೋಜನೆ ಹಾಗೂ ಉದ್ಯೋಗಿಗಳಿಗೆ ವಿಮಾ ಯೋಜನೆಗಳನ್ನು ಒದಗಿಸುತ್ತದೆ. ಹಾಗಾಗಿ, ನೀವು ಇಪಿಎಫ್‌ನಲ್ಲಿನ ಮೊತ್ತ ಕ್ಲೈಮ್ ಮಾಡಲು ಬಳಸಬೇಕಾದ ಫಾರ್ಮ್‌ಗಳ ಬಗ್ಗೆ ಮಾಹಿತಿ ತಿಳಿದುಕೊಂಡರೆ ಒಳ್ಳೆಯದು.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) ತನ್ನ ನಿಯಮವನ್ನು ಬಿಗಿಗೊಳಿಸಿದ್ದು, ನಿರ್ದಿಷ್ಟ ಕಾರಣಗಳಿಂದಾಗಿ ಕೆಲವು ಪಿಂಚಣಿದಾರರಿಗೆ ಮಾಸಿಕ ಪಿಂಚಣಿ ಪಾವತಿಯನ್ನು ನಿಲ್ಲಿಸಲಾಗಿದೆ. ಅಷ್ಟು ಮಾತ್ರವಲ್ಲದೆ ಆ ಪಿಂಚಣಿದಾರರಿಗೆ ಶೋಕಾಸ್ ನೋಟಿಸ್ ಅನ್ನು ಕೂಡ ಜಾರಿ ಮಾಡಿದೆ. ಈ ಹಿಂದೆ ಪಾವತಿ ಮಾಡಲಾದ ಪಿಂಚಣಿಯನ್ನು ಮರುಪಾವತಿ ಮಾಡಿ ಎಂದು ಕೂಡಾ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಇಪಿಎಫ್‌ ಕ್ಲೈಮ್‌ಗೆ ಬೇಕಾದ 6 ಪ್ರಮುಖ ದಾಖಲೆಗಳು ಹೀಗಿವೆ :

# ಫಾರ್ಮ್ 10ಸಿ: (Form 10C)
ಇಪಿಎಸ್ ಯೋಜನೆ ಅಡಿಯಲ್ಲಿ ನಿಮ್ಮ ಉದ್ಯೋಗದಾತ ಸಂಸ್ಥೆಯ ನೀಡಿದ ಕೊಡುಗೆಯನ್ನು ನೀವು ವಿತ್‌ಡ್ರಾ ಮಾಡಿಕೊಳ್ಳಲು ಫಾರ್ಮ್ 10ಸಿಯನ್ನು (Form 10C) ಬಳಸಲಾಗುತ್ತದೆ.

# ಫಾರ್ಮ್ 10ಡಿ(Form 10D):
ಮಾಸಿಕ ಪಿಂಚಣಿಯನ್ನು ಪಡೆಯುವ ಸಲುವಾಗಿ ನೀವು ಈ ಫಾರ್ಮ್ ಅನ್ನು ಉಪಯೋಗಿಸಬಹುದು.

#ಫಾರ್ಮ್ 31(Form 31):
ನಿಮ್ಮ ಇಪಿಎಫ್ ಖಾತೆಯ ಆಧಾರದಲ್ಲಿ ಸಾಲವನ್ನು ಪಡೆದುಕೊಳ್ಳಲು ಹಾಗೂ ನಿಮ್ಮ ಇಪಿಎಫ್ ಖಾತೆಯ ಮೊತ್ತವನ್ನು ವಿತ್‌ಡ್ರಾ ಮಾಡಲು ಫಾರ್ಮ್ 31 (Form 31)ಅನ್ನು ಬಳಸಲಾಗುತ್ತದೆ.

#ಫಾರ್ಮ್ 13(Form 13)
ಒಂದು ಸಂಸ್ಥೆಯನ್ನು ಬಿಟ್ಟು ಇನ್ನೊಂದು ಸಂಸ್ಥೆಗೆ ಸೇರ್ಪಡೆಯಾಗುವುದು ಸಹಜ. ಈ ಸಂದರ್ಭದಲ್ಲಿ ನಿಮ್ಮ ಇಪಿಎಫ್ ಮೊತ್ತವನ್ನು ಒಂದು ಉದ್ಯೋಗ ಸಂಸ್ಥೆಯ ನಿಧಿಯಿಂದ ಇನ್ನೊಂದಕ್ಕೆ ವರ್ಗಾವಣೆ ಮಾಡಲು ಫಾರ್ಮ್ 13(Form 13) ಅನ್ನು ಬಳಸಬೇಕಾಗುತ್ತದೆ. ನಿಮ್ಮ ಮೊತ್ತವು ಒಂದು ನಿಗದಿತ ಖಾತೆಯಲ್ಲಿದ್ದು, ಆ ಮೊತ್ತವು ನಷ್ಟವಾಗುವುದಿಲ್ಲ ಎಂಬುವುದನ್ನು ಖಚಿತಪಡಿಸುತ್ತದೆ.

#ಫಾರ್ಮ್ 20(Form 20)
ಪಿಎಫ್‌ ಖಾತೆ ಹೊಂದಿರುವ ವ್ಯಕ್ತಿಯು ಮೃತಪಟ್ಟಾಗ ಆತನ/ ಆಕೆಯ ಕುಟುಂಬಸ್ಥರು ಅಥವಾ ನಾಮಿನಿಗಳು ಪಿಎಫ್ ಮೊತ್ತವನ್ನು ಕ್ಲೈಮ್ ಮಾಡಲು ಫಾರ್ಮ್ 20(Form 20) ಅನ್ನು ಬಳಕೆ ಮಾಡಲಾಗುತ್ತದೆ. ಇನ್ನು ಓರ್ವ ಉದ್ಯೋಗಿಯ ಒಟ್ಟು ಉದ್ಯೋಗ ಸಮಯವು 10 ವರ್ಷಕ್ಕೂ ಕಡಿಮೆಯಾಗಿದ್ದ ಸಂದರ್ಭದಲ್ಲಿ ಕೂಡ ಇದೇ ಫಾರ್ಮ್ ಅನ್ನು ಬಳಕೆ ಮಾಡಲಾಗುತ್ತದೆ.

# ಫಾರ್ಮ್ 51ಎಫ್(Form 51F)
ಉದ್ಯೋಗಿಗಳ ವಿಮಾ ಯೋಜನೆ ಅಡಿಯಲ್ಲಿ ನಿಮ್ಮ ವಿಮಾ ಪ್ರಯೋಜನ ಪಡೆದುಕೊಳ್ಳಲು ನಿಮ್ಮ ನಾಮಿನಿದಾರರು ಫಾರ್ಮ್ 51ಎಫ್ (Form 51F)ಅನ್ನು ಬಳಕೆ ಮಾಡಲಾಗುತ್ತದೆ.

ಭಾರತದಲ್ಲಿ ವೇತನ ಪಡೆಯುವ ಎಲ್ಲ ವ್ಯಕ್ತಿಗಳು ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ಖಾತೆ ಹೊಂದಿರುತ್ತಾರೆ. ಪ್ರತಿ ತಿಂಗಳು ನೌಕರರ ಮೂಲ ವೇತನದಿಂದ (Basic Salary) ಶೇ. 12ರಷ್ಟು ಮೊತ್ತವನ್ನು ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಹಾಗೆಯೇ ಕಂಪನಿ (Company) ಕೂಡ ಶೇ.12 ರಷ್ಟು ಪಾಲನ್ನು ತನ್ನ ನೌಕರನ ಪಿಎಫ್ ಖಾತೆಗೆ ಜಮೆ ಮಾಡುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗೆ ಪ್ರತಿ ವರ್ಷವೂ ಬಡ್ಡಿದರವನ್ನು ಇಪಿಎಫ್ ಬೋರ್ಡ್ ನಿಗದಿ ಮಾಡುತ್ತದೆ. ಈ ಹಿಂದೆ ಇಪಿಎಫ್ ಬಡ್ಡಿದರವನ್ನು ಇಳಿಕೆ ಮಾಡಲಾಗಿದ್ದು ಈ ವರ್ಷದಲ್ಲಿ ನಡೆದ ಸಭೆಯ ಬಳಿಕ ಹಣಕಾಸು ವರ್ಷ 2022-23ಕ್ಕೆ ಪಿಎಫ್‌ ಬಡ್ಡಿದರವನ್ನು (PF Intrest Rate) ನಿಗದಿ ಮಾಡಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್), ಪಿಂಚಣಿ ಯೋಜನೆ ಹಾಗೂ ಉದ್ಯೋಗಿಗಳಿಗೆ ವಿಮಾ ಯೋಜನೆಯನ್ನು ಇಪಿಎಫ್ ಯೋಜನೆ 1952, ಪಿಂಚಣಿ ವ್ಯವಸ್ಥೆ 1995 (ಇಪಿಎಸ್) ಮತ್ತು ವಿಮಾ ಯೋಜನೆ 1976 (ಇಡಿಎಲ್‌ಐ) ನಿರ್ವಹಣೆ ಮಾಡುತ್ತದೆ.

 

ಇದನ್ನು ಓದಿ : Bikes Under Rs.1 lakh : ಗಮನಿಸಿ ಬೈಕ್‌ ಪ್ರಿಯರೇ, ಇಲ್ಲಿದೆ ಒಂದು ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಬೆಸ್ಟ್‌ ಬೈಕ್‌ಗಳ ಲಿಸ್ಟ್‌, ನಿಮ್ಮ ದುಡ್ಡಿಗೆ ಮೋಸವಿಲ್ಲ!

Leave A Reply

Your email address will not be published.