Nokia Magic Max : ಐಫೋನ್ ಗೆ ಟಕ್ಕರ್ ಕೊಡಲು ರೆಡಿಯಾದ ನೋಕಿಯಾ ಸ್ಮಾರ್ಟ್ಫೋನ್ ! ಏನಿದರ ವಿಶೇಷತೆ?

Nokia Magic Max : ಮೊಬೈಲ್(Mobile) ಎಂಬ ಮಾಯಾವಿ ಬಹುತೇಕ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿವೆ. ಅದರಲ್ಲಿಯೂ ಹೊಸ ಹೊಸ ವೈಶಿಷ್ಟ್ಯತೆ ಮೂಲಕ ಸ್ಮಾರ್ಟ್ ಫೋನ್ (Smart Phone ) ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಜನಪ್ರಿಯ ಮೊಬೈಲ್ ತಯಾರಕ ಕಂಪೆನಿಯಾಗಿರುವ ನೋಕಿಯಾ (Nokia)ಇತ್ತೀಚೆಗೆ ತನ್ನ ಬ್ರಾಂಡ್ನ ಲೋಗೋವನ್ನು ಬದಲಿಸಿದ್ದು, ಇದೀಗ ತನ್ನ ಬ್ರಾಂಡ್ನ ಹೊಸ ಸ್ಮಾರ್ಟ್ಫೋನ್ (Smartphone)ಅನ್ನು ಬಿಡುಗಡೆಗೊಳಿಸಲು ರೆಡಿಯಾಗಿದೆ. ಈ ಸ್ಮಾರ್ಟ್ಫೋನ್ ಆ್ಯಪಲ್ ಫೋನ್(Apple Company) ರೀತಿಯ ಫೀಚರ್ಸ್ಗಳನ್ನು ಒಳಗೊಂಡಿದೆ.
ನೋಕಿಯಾ ಇತ್ತೀಚೆಗೆ ಹೊಸ ಲೋಗೋವನ್ನು ಪರಿಚಯಿಸಿದ್ದು, ಹೊಸ ಯುಐ(User interface ) ಅನ್ನೂ ಕೂಡ ಪರಿಚಯಿಸಿದೆ. ನೋಕಿಯಾ ಮ್ಯಾಜಿಕ್ ಮ್ಯಾಕ್ಸ್ (Nokia Magic Max)ಮುಂಭಾಗವು 6.7 ಇಂಚಿನ AMOLED ಡಿಸ್ಪ್ಲೇ ಒಳಗೊಂಡಿದೆ. ಐಫೋನ್ಗಿಂತಲೂ ತೆಳು ಬೇಝಲ್ ಸ್ಕ್ರೀನ್ ಒಳಗೊಂಡಿದೆ. 120hz ರಿಫ್ರೆಶ್ ರೇಟ್ ಮತ್ತು 1080*2400 ರೆಸಲ್ಯೂಷನ್ ಅನ್ನು ಹೊಂದಿದೆ. ಡಿಸ್ಪ್ಲೇ ಮೇಲ್ಭಾಗದ ಮಧ್ಯದಲ್ಲಿ 64MP ಪಂಚ್ ಹೋಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ನೋಕಿಯಾ ಮೊಬೈಲ್ (Nokia Mobile) ಟೆಕ್ನಾಲಜಿ ಲೋಕದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದು, ಬಂದ ಉತ್ತಮ ದರ್ಜೆಯ ಆ್ಯಪಲ್, ಸ್ಯಾಮ್ಸಂಗ್ (Samsung), ಒಪ್ಪೋನಂತಹ (OPPO) ಮೊಬೈಲ್ಗಳ ಅಬ್ಬರದಲ್ಲಿ ನೋಕಿಯಾ ತನ್ನ ಮಾರುಕಟ್ಟೆಯಲ್ಲಿ ಅಬ್ಬರಿಸಲು ಅಣಿಯಾಗಿದೆ. ನೋಕಿಯಾ ಮ್ಯಾಜಿಕ್ ಮ್ಯಾಕ್ಸ್ ವಿಶಿಷ್ಟವಾದ ವಿನ್ಯಾಸ ಒಳಗೊಂಡಿದ್ದು, ಬೇಝ್ಲೆಸ್ ಡಿಸ್ಪ್ಲೇಯೊಂದಿಗೆ ಫುಲ್ ಸ್ಕ್ರೀನ್ ಡಿಸ್ಪ್ಲೇ ಇರಲಿದೆ. ಹಿಂಭಾಗದಲ್ಲಿರುವ ಕ್ಯಾಮೆರಾ, ಆ್ಯಪಲ್ ಐಫೋನ್ ಕ್ಯಾಮೆರಾ ಮಾದರಿಯಲ್ಲಿರಲಿದೆ.
ಈ ಮೊಬೈಲ್ ಕಾರ್ಯಕ್ಷಮತೆ ಬಗ್ಗೆ ಗಮನ ಹರಿಸಿದರೆ, ಸ್ನಾಪ್ ಡ್ರಾಗನ್ 8 GEN 2 ಚಿಪ್ ಅನ್ನು ಒಳಗೊಂಡಿದ್ದು, ಇದರ ಜೊತೆಗೆ 8ಜಿಬಿ, 12ಜಿಬಿ ಮತ್ತು 16 ಜಿಬಿ ರ್‍ಯಾಮ್ ಆಯ್ಕೆಯನ್ನು ಒಳಗೊಂಡಿದೆ. ಇದಲ್ಲದೆ, 2 ಸ್ಟೋರೇಜ್ ಆಯ್ಕೆಗಳಿದ್ದು, ನೋಕಿಯಾ ಮ್ಯಾಜಿಕ್ ಮ್ಯಾಕ್ಸ್ 256 ಜಿಬಿ ಮತ್ತು 512 ಜಿಬಿ ಸ್ಟೋರೇಜ್ ಆಯ್ಕೆ ಲಭ್ಯವಿದೆ. ಎರಡೂ ಸ್ಟೋರೇಜ್ಗಳಲ್ಲೂ UFS 4.0 ಫಾಸ್ಟೆಸ್ಟ್ ಸ್ಟೋರೇಜ್ ತಂತ್ರಜ್ಞಾನವಿದೆ. ಈ ಮೊಬೈಲ್ ವಿನ್ಯಾಸ ಮತ್ತು ಆ್ಯನಿಮೇಷನ್ಗಳಲ್ಲಿ ವಿಭಿನ್ನ ಬದಲಾವಣೆ ತರುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಫ್ಲಾಗ್ಶಿಪ್ ಬಗ್ಗೆ ಕೂಡ ಚಿಂತನೆ ನಡೆಸುತ್ತಿದೆ.
ಐಫೋನ್ನಂತೆಯೇ ಈ ಸ್ಮಾರ್ಟ್ಫೋನ್ನಲ್ಲೂ ಫ್ಲ್ಯಾಟ್ ಎಡ್ಜ್ ಇರಲಿದ್ದು ಹಿಂಬದಿಯ ಅಂಚುಗಳು ಗುಂಡಾಗಿರುತ್ತವೆ. ಇದು ಗ್ರಾಹಕರು ಫೋನ್ ಹಿಡಿದುಕೊಳ್ಳಲು ಆರಾಮದಾಯಕ ಅನುಭವವನ್ನು ಒದಗಿಸಲಿದೆ. ಹೀಗಾಗಿ, ಅತ್ಯುತ್ತಮ ಫೀಚರ್ ಜೊತೆಗೆ ಕೈಗೆಟುಕುವ ದರದಲ್ಲಿ ಪೋನ್ ಲಭ್ಯವಾಗಲಿದೆ.ಇದರ ಹಿಂಬದಿಯ ಕ್ಯಾಮೆರಾದಲ್ಲಿ ಮೂರು ಕ್ಯಾಮೆರಾಗಳಿದ್ದು, 108 ಎಮ್ಪಿ ಮುಖ್ಯ ಸಂವೇದಕ, 1 ಎಂಪಿ ಅಲ್ಟ್ರಾವೈಡ್ ಸಂವೇದಕ ಮತ್ತು 5 ಎಂಪಿ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ. ಇದರ ಜೊತೆಗೆ 7,500mAh ಬ್ಯಾಟರಿ ಬ್ಯಾಕಪ್ ಒಳಗೊಂಡಿದ್ದು, ಈ ಬ್ಯಾಟರಿಯು ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನೂ (Charging Technology) ಅಳವಡಿಸಲಾಗಿದೆ.
ಶೀಘ್ರದಲ್ಲಿಯೇ ಈ ಎಲ್ಲಾ ಅಂಶಗಳನ್ನು ಒಳಗೊಂಡ ಫೋನ್ ಬಿಡುಗಡೆಗೆ ನೋಕಿಯಾ ಚಿಂತನೆ ನಡೆಸುತ್ತಿದೆ ಎನ್ನಲಾಗಿದ್ದು,ಇದು ನೇರವಾಗಿ ಐಪೋನ್ಗೆ (iPhone) ಪೈಪೋಟಿ ನೀಡಲಿದೆ. ಈ ಫೋನ್ 32,990 ರೂಪಾಯಿಗೆ ಲಭ್ಯವಿದ್ದು, ಈ ಫೋನ್ ಕೆಂಪು, ಕಪ್ಪು, ಚಿನ್ನ ಮತ್ತು ಹಸಿರು ಈ ರೀತಿಯ 4 ವಿಭಿನ್ನ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ನೋಕಿಯಾ ಮ್ಯಾಜಿಕ್ ಮ್ಯಾಕ್ಸ್ ಆಗಸ್ಟ್ 2023 ರಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಇದನ್ನು ಓದಿ : Tirumala: ತಿರುಪತಿಗೆ ತೆರಳುವ ಭಕ್ತರಿಗೆ ಮಹತ್ವದ ಮಾಹಿತಿ ಇಲ್ಲಿದೆ!!