Home Interesting Virat Kohli : ಆ ಒಂದು ಘಟನೆಯಿಂದ ವಿರಾಟ್ ಕೊಹ್ಲಿ ದೇವರನ್ನೇ ನಂಬಿದ್ರು! ಏನದು ಘಟನೆ?

Virat Kohli : ಆ ಒಂದು ಘಟನೆಯಿಂದ ವಿರಾಟ್ ಕೊಹ್ಲಿ ದೇವರನ್ನೇ ನಂಬಿದ್ರು! ಏನದು ಘಟನೆ?

Virat Kohli

Hindu neighbor gifts plot of land

Hindu neighbour gifts land to Muslim journalist

Virat Kohli : ಟೀಮ್ ಇಂಡಿಯಾದ ಮಾಜಿ ನಾಯಕ, ಆರ್​ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಸದ್ಯ ಐಪಿಎಲ್​ನಲ್ಲಿ (IPL) ತೊಡಗಿಸಿಕೊಂಡಿದ್ದಾರೆ. ಅತ್ಯುತ್ತಮ ಆಟಗಾರ ವಿರಾಟ್ ಕೊಹ್ಲಿ ಗೆ ದೇವರು ಅಂದ್ರೆ ಅಷ್ಟಕ್ಕಷ್ಟೆ. ದೇವರನ್ನು ನಂಬುತ್ತಿರಲಿಲ್ಲವಂತೆ ವಿರಾಟ್. ಆದರೆ, ಆ ಒಂದು ಘಟನೆಯಿಂದ ವಿರಾಟ್ ಕೊಹ್ಲಿ ದೇವರನ್ನೇ ನಂಬಿದ್ರು. ಏನದು ಘಟನೆ?

ವಿರಾಟ್ ಗೆ ಮೊದಲಿನಿಂದಲೂ ದೇವರ ಮೇಲೆ ನಂಬಿಕೆ ಇರಲಿಲ್ಲವಂತೆ. ಈ ಬಗ್ಗೆ ಶಿಖರ್ ಧವನ್ (Shikhar Dhawan) ಹೇಳಿದ್ದಾರೆ.“ ನಾನು ಹಾಗೂ ಕೊಹ್ಲಿ ಜೊತೆಗಿದ್ದಾಗ ಹೆಚ್ಚಾಗಿ ಆಧ್ಯಾತ್ಮಿಕ ವಿಷಯಗಳ ಬಗ್ಗೆನೇ ಚರ್ಚಿಸುತ್ತಿದ್ದೆವು. ಅವರು ಕಟ್ಟಾ ನಾಸ್ತಿಕರಂತೆ ಮಾತನಾಡುತ್ತಿದ್ದರು. ಅಂದರೆ ಅವರಿಗೆ ದೇವರ ಮೇಲೆ ನಂಬಿಕೆ ಇರಲಿಲ್ಲ” ಎಂದು ಧವನ್ ತಿಳಿಸಿದ್ದಾರೆ.

ಆದರೆ, ಕೊಹ್ಲಿ ಈಗ ಬದಲಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರ ಆಲೋಚನೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅಷ್ಟೇ ಅಲ್ಲ, ದೇವರ ಮೇಲೆ ನಂಬಿಕೆ, ಆಧ್ಯಾತ್ಮಿಕತೆಯ ಮೇಲಿನ ಒಲವು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಅವರ ಪತ್ನಿ ಅನುಷ್ಕಾ ಶರ್ಮಾ ಎಂದು ಧವನ್ ಹೇಳಿದರು.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ (Anushka Sharma) ಡಿಸೆಂಬರ್ 11, 2017 ರಂದು ಇಟಲಿಯಲ್ಲಿ ವಿವಾಹವಾದರು. ಸದ್ಯ ಈ ದಂಪತಿಗೆ ಮುದ್ದಾದ ಹೆಣ್ಣು ಮಗುವೊಂದಿದೆ. ಮದುವೆ ಬಳಿಕ ವಿರಾಟ್ ಕೊಹ್ಲಿಯ ಜೀವನದಲ್ಲಿ ಹಲವಾರು ಬದಲಾವಣೆಗಳು ಆಗಿವೆ. ಈ ಬಗ್ಗೆ ಪತ್ನಿ ಅನುಷ್ಕಾ ಕೆಲವು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಹಾಗೂ ವಿರಾಟ್ ಕೂಡ ಹೇಳಿದ್ದಾರೆ.

ವಿರಾಟ್ ವ್ಯಕ್ತಿತ್ವದಲ್ಲಿ ಹಲವು ಬದಲಾವಣೆಗಳಾಗಿದ್ದು, ಅದರಲ್ಲಿ ಪ್ರಮುಖವಾಗಿ ಎಲ್ಲರ ಗಮನಕ್ಕೂ ಬಂದಿರುವ ಬದಲಾವಣೆ ಎಂದರೆ, ಮದುವೆ ನಂತರದಲ್ಲಿ ವಿರಾಟ್ ಗೆ ದೇವರ ಮೇಲೆ ನಂಬಿಕೆ ಬಂದಿರುವುದು. ಆಧ್ಯಾತ್ಮಿಕತೆಯ ಮೇಲಿನ ಒಲವು ಹೆಚ್ಚಾಗಿದ್ದು, ಅನುಷ್ಕಾ ಶರ್ಮಾ ಜೊತೆ ಮದುವೆಗೂ ಮೊದಲು ಒಮ್ಮೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೊಹ್ಲಿ, “ನಾನು ಪ್ರಾರ್ಥನೆ ಮತ್ತು ಪೂಜೆ ಮಾಡುವ ರೀತಿಯ ವ್ಯಕ್ತಿಯಲ್ಲ” ಎಂದು ಹೇಳಿದ್ದರು.

ಆದರೆ ಅನುಷ್ಕಾ ಜೊತೆ ಮದುವೆಯಾದ ನಂತರ ಕೊಹ್ಲಿ ದೈವ ಭಕ್ತರಾಗಿದ್ದಾರೆ ಎಂದೇ ಹೇಳಬಹುದು. ಅದಕ್ಕೆ ಪುಷ್ಟಿ ನೀಡುವಂತೆ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಆಧ್ಯಾತ್ಮಿಕ ಕೇಂದ್ರಗಳಲ್ಲಿ ಕಾಣಿಸಿಕೊಂಡಿದ್ದರು. ಉತ್ತರಾಖಂಡ್​​ನ ರಿಷಿಕೇಶದಲ್ಲಿರುವ ಸ್ವಾಮಿ ದಯಾನಂದ ಗಿರಿ ಆಶ್ರಮ, ಮಥುರಾದಲ್ಲಿರುವ ವೃಂದಾವನ, ಕಾನ್ಪುರದ ಪ್ರೇಮಾನಂದ ಗೋವಿಂದ ಶರಣ್ ಮಹಾರಾಜ್ ಆಶ್ರಮಕ್ಕೆ ಪತ್ನಿ ಅನುಷ್ಕಾ ಶರ್ಮಾ ಜೊತೆ ವಿರಾಟ್ ಭೇಟಿ ನೀಡಿದ್ದರು. ಅಲ್ಲದೆ, ಇತ್ತೀಚೆಗೆ ಈ ಜೋಡಿ ಉಜ್ಜೈನಿಯ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಒಟ್ಟಾರೆ, ಮದುವೆ ಎಂಬ ಘಟನೆಯ ನಂತರ ವಿರಾಟ್ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿದೆ ಎನ್ನಬಹುದು.

 

ಇದನ್ನು ಓದಿ : Earth Viral Video : ಭೂಮಿ ಉಸಿರಾಡುತ್ತೆ ಎಂಬುದುಕ್ಕೆ ಇಲ್ಲಿದೆ ನಿದರ್ಶನ! ವೀಡಿಯೋ ವೈರಲ್‌