Home Breaking Entertainment News Kannada Bigg Boss Malayalam 5 : ಮಾಲಿವುಡ್‌ನ ಶ್ರೇಷ್ಠ ನಟ ಮೋಹನ್‌ಲಾಲ್‌ ಅವರಿಗೆ ಬಿಗ್‌ಬಾಸ್‌ ನಲ್ಲಿ...

Bigg Boss Malayalam 5 : ಮಾಲಿವುಡ್‌ನ ಶ್ರೇಷ್ಠ ನಟ ಮೋಹನ್‌ಲಾಲ್‌ ಅವರಿಗೆ ಬಿಗ್‌ಬಾಸ್‌ ನಲ್ಲಿ ಅಗೌರವ! ಶೋ ಬಿಟ್ಟು ಹೊರನಡೆದ ನಟ, ಅಂಥದ್ದೇನಾಯ್ತು?

Bigg Boss Malayalam 5

Hindu neighbor gifts plot of land

Hindu neighbour gifts land to Muslim journalist

Bigg Boss Malayalam 5: ʼಬಿಗ್ ಬಾಸ್ ಮಲಯಾಳಂ 5ʼ(Bigg Boss Malayalam 5) ಕಾರ್ಯಕ್ರಮದ ʼಈಸ್ಟರ್‌ ಹಬ್ಬʼದ ವಿಶೇಷ ಸಂಚಿಕೆಯಲ್ಲಿ ನಿರೂಪಕ ಮೋಹನ್‌ ಲಾಲ್‌(Mohanlal) ಅವರು ತಾಳ್ಮೆ ಕಳೆದುಕೊಂಡು ಶೋ ಬಿಟ್ಟು ಅರ್ಧದಲ್ಲೇ ಮರಳಿದ ಘಟನೆ ವರದಿಯಾಗಿದೆ.

ಬಿಗ್‌ ಬಾಸ್‌ ʼಬಿಗ್ ಬಾಸ್ ಮಲಯಾಳಂ ಸೀಸನ್‌ 5 ಕಾರ್ಯಕ್ರಮದಲ್ಲಿ ಭಾನುವಾರ ʼಈಸ್ಟರ್‌ ಹಬ್ಬʼಕ್ಕೆ ವಿಶೇಷ ಟಾಸ್ಕ್‌ ವೊಂದನ್ನು ನೀಡಲಾಗಿದ್ದು, ಈ ಟಾಸ್ಕ್ ಸಂದರ್ಭ ಅಖಿಲ್ ಮಾರಾರ್ ಅವರು ಪ್ರತಿಸ್ಪರ್ಧಿ ಮೇಲೆ ಅಶ್ಲೀಲ ಪದಗಳನ್ನು ಬಳಕೆ ಮಾಡಿದ್ದು, ಏಂಜಲೀನಾ, ಸಾಗರ್ ಮತ್ತು ಜುನೈಜ್ ಅವರ ಮೇಲೆ ಕೆಟ್ಟ ಪದ ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಇದಾದ ನಂತರ, ಈ ವಿಚಾರವನ್ನು ಮೋಹನ್‌ ಅವರ ಗಮನಕ್ಕೆ ಸ್ಪರ್ಧಿಗಳು ತಂದಿದ್ದು, ಮೋಹನ್‌ ಲಾಲ್‌ ಈ ರೀತಿಯ ವರ್ತನೆಗೆ ಕ್ಷಮೆ ಕೇಳುವಂತೆ ಹೇಳಿದ್ದಾರೆ ಎನ್ನಲಾಗಿದೆ.

ಅಖಿಲ್‌ ಸ್ಪರ್ಧಿಗಳ ಬಳಿ ಕ್ಷಮೆ ಕೇಳಿದ್ದು, ಮೋಹನ್‌ ಲಾಲ್‌ ಕಾರ್ಯಕ್ರಮದ ಟಾಸ್ಕ್ ಸಂದರ್ಭ ಅಖಿಲ್‌ ಅವರಿಗೆ ಕ್ಯಾಪ್ಟನ್‌ ಬ್ಯಾಂಡ್‌ ನ್ನು ಸಾಗರ್‌ ಅವರಿಗೆ ನೀಡಿ ಎಂದಿದ್ದು, ಆದರೆ ಸಾಗರ್‌ ಅವರು ತನ್ನ ಬಳಿ ಕ್ಷಮೆ ಕೇಳಲು ಹೇಳಿದ್ದು, ಇದಕ್ಕೆ ಅಖಿಲ್‌ ತಾನು ತನ ಬಳಿ ಕ್ಷಮೆ ಕೇಳಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಇಬ್ಬರನ್ನೂ ಬಿಗ್‌ ಬಾಸ್‌ ಕನ್ಫೆಶನ್‌ ಕೊಠಡಿಗೆ ಕರೆದು ಚರ್ಚೆ ಮಾಡಿಸಿದ್ದಾರೆ. ಆದರೆ ಈ ವೇಳೆ ಇಬ್ಬರೂ ಸಮಸ್ಯೆ ಬಗೆಹರಿಸುವತ್ತ ಗಮನ ಕೊಡುವ ಬದಲಿಗೆ ವಿವಾದವನ್ನು ದೊಡ್ಡದು ಮಾಡಿದ್ದಾರೆ. ನಿರೂಪಕರ ಮುಂದೆ ಈ ವಿಚಾರವನ್ನು ಮತ್ತಷ್ಟು ಹೆಚ್ಚಿಸಬೇಡಿ ಎಂದು ಸಾಗರ್‌ ಅವರಿಗೆ ಬಿಗ್‌ ಬಾಸ್‌ ಹೇಳಿದ್ದಾರೆ ಎನ್ನಲಾಗಿದೆ.

https://www.instagram.com/reel/CqzKXW2OcOf/?igshid=YmMyMTA2M2Y=

ಮೋಹನ್‌ ಲಾಲ್‌ ಕಾರ್ಯಕ್ರಮದ ಸಿಬ್ಬಂದಿಗೆ ಈ ಲೈನ್‌ ಕಟ್‌ ಮಾಡಿ ಎಂದು ಹೇಳಿ, ಸ್ಪರ್ಧಿಗಳ ಮೇಲೆ ಕೋಪಗೊಂಡು ಕೂಗಾಡಿದ್ದಾರೆ ಎನ್ನಲಾಗಿದೆ. ನಾನು ನಿಮಗೆ ಬ್ಯಾಂಡ್‌ ಕೊಡಿ ಎಂದು ಹೇಳಿದ್ದು, ಆದರೆ ಅದನ್ನು ನೀವು ಎಸೆದಿದ್ದೀರಿ. ಇದರಿಂದ ನನಗೆ ಅಗೌರವ ತೋರಿಸಿದ್ದೀರಿ. ನಾನು ನಿಮ್ಮೆಲ್ಲರೊಂದಿಗೆ ಖುಷಿಯಿಂದ ಈಸ್ಟರ್ ಆಚರಿಸುವ ಸಲುವಾಗಿ ಜೈಸಲ್ಮೇರ್‌ನಿಂದ 4-5 ಗಂಟೆಗಳ ಪ್ರಯಾಣ ಮಾಡಿ ಆ ಬಳಿಕ ವಿಮಂದ ಮೂಲಕ ಇಲ್ಲಿಗೆ ಬಂದಿದ್ದೆ. ಮೋಹನ್‌ ಲಾಲ್‌ ಈ ರೀತಿ ತಾಳ್ಮೆ ಕಳೆದುಕೊಂಡಿರುವುದು ಇದೇ ಮೊದಲು ಎಂದು ವರದಿಯಾಗಿದ್ದು, ಇಲ್ಲಿ ನಡೆದ ಘಟನೆಯಿಂದ ನನಗೆ ತುಂಬಾ ಅಸಮಾಧಾನವಾಗಿದೆ ಎಂದು ತಿಳಿಸಿದ್ದು, ಹೀಗಾಗಿ, ಮಾಲಿವುಡ್‌ನ ಶ್ರೇಷ್ಠ ನಟ ಮೋಹನ್‌ಲಾಲ್‌ ಅವರಿಗೆ ಬಿಗ್‌ಬಾಸ್‌ ನಲ್ಲಿ ಅಗೌರವ ತೋರಿದ ಹಿನ್ನೆಲೆ ಶೋ ಅರ್ಧದಲ್ಲೇ ಬಿಟ್ಟು ಹೊರನಡೆದ ಘಟನೆ ನಡೆದಿದೆ.

ಇದನ್ನೂ ಓದಿ: Roopesh Shetty : ಸಾನ್ಯಾ ಮನೆಯಲ್ಲಿ ರೂಪೇಶ್ ಶೆಟ್ಟಿ! ಮದುವೆ ಮಾತುಕತೆ ಎಂದ ಫ್ಯಾನ್ಸ್!